- ಮಂಗಳೂರು
- 11:37 ಫೂರ್ವಾಹ್ನ
- ಮೇ 25, 2023
ಮಂಗಳೂರು: ದುಬೈಗೆ ಹೊರಟ್ಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ, ಟೇಕಾಫ್ ಕ್ಯಾನ್ಸಲ್.!
Twitter
Facebook
LinkedIn
WhatsApp

ಮಂಗಳೂರು, ಮೇ 25: ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಟೇಕಾಫ್ ಕ್ಯಾನ್ಸಲ್ ಆದ ಘಟನೆ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಂಡಿಗೋ ವಿಮಾನವು ಇಂದು ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ದುಬೈಗೆ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಂಡಿತ್ತು. ಆ ವೇಳೆ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದ ವೇಳೆ ರನ್ ವೇನಲ್ಲಿ ವಿಮಾನದ ರೆಕ್ಕೆಗೆ ಹಕ್ಕಿ ಢಿಕ್ಕಿ ಹೊಡೆದಿದೆ.ಅಪಾಯದ ಸೂಚನೆ ಅರಿತು ಪೈಲಟ್ ಎಟಿಸಿಗೆ ಮಾಹಿತಿ ನೀಡಿದ , ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದಲೇ ವಿಮಾನವನ್ನು ವಾಪಾಸ್ ತಂದರು.
ಸಂಸ್ಥೆಯೂ ಇನ್ನೊಂದು ವಿಮಾನದ ವ್ಯವಸ್ಥೆ ಮಾಡಿ ಬೆಂಗಳೂರಿನಿಂದ ಆಗಮಿಸಿದ ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕಳುಹಿಸಿಕೊಟ್ಟಿತು.