ಮಂಗಳವಾರ, ಏಪ್ರಿಲ್ 16, 2024
ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!-ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್: ಬಾಂಬರ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ 10 ದಿನಗಳ ಕಾಲ ಎನ್ಐಎ ವಶಕ್ಕೆ.!-ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ; ಇಬ್ಬರು ಪ್ರಯಾಣಿಕರು ಪಾರು..!-ಆರ್ಸಿಬಿ ತಂಡದ ಫಿನಿಷಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಟಿ-20 ವಿಶ್ವ ಕಪ್ ಗೆ ಆಯ್ಕೆಯಾಗ್ತರಾ?-ಅಪಘಾತದಲ್ಲಿ ಕಣ್ಣಿನೊಳಗೆ ಹೋದ ಬೈಕ್ ನ ಬ್ರೇಕರ್ ಹ್ಯಾಂಡಲ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಲ್ಲಡ್ಕ: ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿ ವ್ಯಕ್ತಿ ಸಾವು

Twitter
Facebook
LinkedIn
WhatsApp
Death V jpg 442x260 4g

ಕಾರಿನೊಳಗೆ ವ್ಯಕ್ತಿಯೋರ್ವನು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಗೋಳ್ತಮಜಲು ಗ್ರಾಮದ ‌ಹೊಸೈಮಾರ್ ನಿವಾಸಿ ಜಗದೀಶ್ ಮೃತಪಟ್ಟ ಯುವಕ.

ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು , ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಬೆಳಿಗ್ಗೆ ಬಾವನ ಜೊತೆ ಬೆಳಿಗ್ಗೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಹೋಗಿದ್ದ ಎನ್ನಲಾಗಿದೆ.

 

ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದ್ದಾಗ ಸುಮಾರು ‌ 1.30 ಗಂಟೆ ಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಬಾವನಲ್ಲಿ ಹೇಳಿದ್ದು ನಾನು ಮತ್ತೆ ಮನೆಗೆ ಬರುತ್ತೇನೆ ನೀವು‌‌ಮಕ್ಕಳ ಜೊತೆ ಮನೆಗೆ ಹೋಗಿ ಎಂದು ‌ಕಳುಹಿಸಿ,ಕಾರಿನ ಸೀಟಿನಲ್ಲಿಯೇ ಮಲಗಿದ್ದ.ಆದರೆ ರಾತ್ರಿ ‌7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬಂತು.ಕಾರಿನ ಗ್ಲಾಸ್ ಹಾಕಿ ಮಲಗಿದ್ದರಿಂದ ಕಾರಿನ ಡೋರ್ ಓಪನ್ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.ಕಾರಿನ ಕಿಟಕಿ ,ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪಿದಾ? ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾನಾ? ಎಂಬುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು