ವಿಟ್ಲ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ – ಮೂವರಿಗೆ ಗಂಭೀರ ಗಾಯ
ವಿಟ್ಲ: ಕಬಕ – ವಿಟ್ಲ ರಸ್ತೆಯ ಕಂಬಳಬೆಟ್ಟುವಿನಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಘಟನೆಯಿಂದಾಗಿ ಉರಿಮಜಲು ಸಮೀಪ ಸಿಮೇಟ್ ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಕೇರಳರಾಜ್ಯದ ಕೊಲ್ಲಂ ಮೂಲದ ದಿನೇಶ್, ಅಡ್ಯನಡ್ಕ ಮೂಲದ ಸತೀಶ್ ಹಾಗೂ ವಸಂತ್ ಗಾಯಗೊಂಡವರಾಗಿದ್ದಾರೆ. ಕಂಬಳಬೆಟ್ಟು ದರ್ಗಾ ಬಳಿಯಲ್ಲಿ ಅಪಘಾತ ಸಂಭವಿಸಿದೆ.
ಘಟನೆ ನಡೆದ ಕೂಡಲೇ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸ್ಥಳೀಯರು ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಗಾಯಾಳುಗಳು ಗಂಭೀರ ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ಎರಡೂ ವಾಹನಗಳು ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಪಡುಬಿದ್ರಿ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಓಮ್ನಿ ಡಿಕ್ಕಿ – ಸ್ಥಳದಲ್ಲೇ ಮೃತ್ಯು
ಪಡುಬಿದ್ರಿ,ನ 20 : ರಸ್ತೆ ದಾಟುತ್ತಿದ್ದ ವ್ಯಕ್ತಿಯೊರ್ವರಿಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿಯ ಉಚ್ವಿಲ ಪೇಟೆ ಬಳಿ ಭಾನುವಾರ ನಡೆದಿದೆ.
ಉಚ್ವಿಲ ಸುಭಾಸ್ ರಸ್ತೆ ನಿವಾಸಿ ಜನಾರ್ದನ್ ಕೋಟ್ಯಾನ್ (66) ಮೃತ ವ್ಯಕ್ತಿಪಟ್ಟ ವ್ಯಕ್ತಿ.
ಇವರು ಈ ಹಿಂದೆ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದು, ಸಂಜೆ ಪೇಟೆಗೆ ಬಂದಿದ್ದು ರಸ್ತೆ ದಾಟುತ್ತಿದಂತೆ ಅಜಾಗರೂಕತೆಯಿಂದ ಮುನ್ನುಗ್ಗಿ ಬಂದ ಉಚ್ಚಿಲ ಪೊಲ್ಯ ನಿವಾಸಿಯ ಓಮ್ನಿ ಕಾರು ಡಿಕ್ಕಿಯಾಗಿದೆ.
ಕಾರು ಜನಾರ್ದನ್ ಕೋಟ್ಯಾನ್ ರನ್ನು ಸುಮಾರು ಐವತ್ತು ಮೀಟರ್ ಎಳೆದುಕೊಂಡು ಹೋಗಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.