ಮಾಣಿ ಪಶು ಆಸ್ಪತ್ರೆ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ
Twitter
Facebook
LinkedIn
WhatsApp
ಬಂಟ್ವಾಳ: ಮಾಣಿ ಪಶು ಆಸ್ಪತ್ರೆಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಲತಾಸುಗಳ ಕಾಲ ಆತಂಕಉಂಟಾದ ಘಟನೆ ಶನಿವಾರ ನಡೆದಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಹೆದ್ದಾರಿ ಪಕ್ಕದ ವರೆಗೂ ಆವರಿಸಿತ್ತು, ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಮುಖಂಡ ಗಣೇಶ್ ರೈ ಮಾಣಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ತಕ್ಷಣ ಆಗಮಿಸಿದ ಅಗ್ನಿ ಶಾಮಕದಳ ದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ವಿದ್ಯುತ್ ಕಂಬದಿಂದ ಬೆಂಕಿಯ ಕಿಡಿಗಳು ತರಗೆಲೆ ಮೇಲೆ ಬಿದ್ದು ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದ ಸ್ಥಳಿಯವಾಗಿ ಹಾಕಲಾಗಿದ್ದ ಕೇಬಲ್ ವಯರ್ ಗಳು ಸುಟ್ಟು ಕರಕಲಾಗಿದೆ.