- ಬೆಳ್ತಂಗಡಿ
- 8:50 ಫೂರ್ವಾಹ್ನ
- ಮಾರ್ಚ್ 17, 2023
ಬೆಳ್ತಂಗಡಿ;ಬಾವಿಗೆ ಬಿದ್ದ ಕೊಡವನ್ನು ಮೇಲೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿ ದುರ್ಮರಣ
Twitter
Facebook
LinkedIn
WhatsApp

ಬೆಳ್ತಂಗಡಿ:ಬಾವಿಗೆ ಬಿದ್ದ ಕೊಡವನ್ನು ಮೇಲಕ್ಕೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಪ್ರವೀಣ್ ಮೃತಪಟ್ಟ ದುರ್ದೈವಿ.ಪ್ರವೀಣ್, ವಸಂತಿ ಎಂಬವರ ಮನೆ ಬಾವಿಗೆ ಬಿದ್ದಿದ್ದ ಕೊಡವನ್ನು ಮೇಲಕ್ಕೆತ್ತಲು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದರು.ಬಳಿಕ ಕೊಡವನ್ನು ಮೇಲಕ್ಕೆ ಕಳುಹಿಸಿದ್ದರು.ಬಳಿಕ ಅದೇ ಹಗ್ಗವನ್ನು ಬಳಸಿಕೊಂಡು ಅವರು ಮೇಲೆ ಬರುವಾಗ ಕೈಜಾರಿ ಬಾವಿಗೆ ಬಿದ್ದಿದ್ದಾರೆ.ಬಳಿಕ ಅಗ್ನಿ ಶಾಮಕ ದಳದವರು ಬಂದು ಪ್ರವೀಣ್ ರವರನ್ನು ಮೇಲಕ್ಕೇತ್ತಿದ್ದಾರೆ.ಆದರೆ ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.