- ಬಂಟ್ವಾಳ
- 9:56 ಫೂರ್ವಾಹ್ನ
- ಮಾರ್ಚ್ 10, 2023
ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್
Twitter
Facebook
LinkedIn
WhatsApp

ಬಂಟ್ವಾಳ: ಕಳೆದ 3 ವರ್ಷಗಳಿಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಂತರ ಪೊಲೀಸರ ತಂಡ ಬಂಧಿಸಿದೆ.
ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣಾ ಅ.ಕ್ರ : 85/2019 U/s 354(A),448,506, IPC (ಮಾನ್ಯ ACJ & JMFC Bantwal c c no1020/2020 ರ ಪ್ರಕರಣ ಆರೋಪಿ ಹಾಸನದ ಬಿಕ್ಕೋಡು ನಿವಾಸಿ ರಮೇಶ್ ಎಂಬಾತ ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಮಾ. 08ರಂದು ಈತನ ಕುರಿತು ಲಭಿಸಿದ ಮಾಹಿತಿಯಂತೆ ಪೊಲೀಸ್ ನಿರೀಕ್ಷಕರ ಹಾಗೂ ಪೊಲೀಸ್ ಉಪ ನಿರೀಕ್ಷರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ, ಪಿ.ಸಿ, ಪುನೀತ್ ಪಿ.ಸಿ, ಯೋಗೀಶ್ ರವರು ಹಾಸನದಿಂದ ದಸ್ತಗಿರಿ ಮಾಡಿದ್ದಾರೆ. ಸಧ್ಯ ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.