- ಬಂಟ್ವಾಳ
- 4:41 ಅಪರಾಹ್ನ
- ಮಾರ್ಚ್ 9, 2023
ಬಂಟ್ವಾಳದಲ್ಲಿ ಚಾಲಕನಿಗೆ ಫಿಟ್ಸ್ ಅಟ್ಯಾಕ್-ಹಲವು ವಾಹನಗಳಿಗೆ ಡಿಕ್ಕಿ!!
Twitter
Facebook
LinkedIn
WhatsApp

ಬಂಟ್ವಾಳ: ಲಾರಿ ಚಾಲನೆಯಲ್ಲಿರುವಾಗಲೇ ಚಾಲನೋರ್ವನಿಗೆ ಮೂರ್ಛೆ ರೋಗ (ಫಿಟ್ಸ್) ಬಾಧಿಸಿದ ಪರಿಣಾಮ ನಿಯಂತ್ರಣ ತಪ್ಪಿದ ವಾಹನ ಪೆಟ್ರೋಲ್ ಬಂಕ್‌ಗೆ ನುಗ್ಗಿ ಅಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳದ ಬಿ.ಸಿ.ರೋಡ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಮಂಗಳೂರು ಕಡೆಯಿಂದ ಹಾಸನಕ್ಕೆ ಖಾಲಿ ವಾಹನ ಹೋಗುತ್ತಿದ್ದ ವೇಳೆ ಬಿಸಿರೋಡಿನ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ.
ಚಾಲಕನನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ. ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ರಿಟ್ಸ್ ಕಾರಿಗೆ ಡಿಕ್ಕಿ ಹೊಡೆದ ಲಾರಿ ಬಳಿಕ ಬೈಕ್‌ಗೆ ಡಿಕ್ಕಿ ಹೊಡೆಯಿತು. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಇತರ ವಾಹನಗಳಿಗೂ ಡಿಕ್ಕಿ ಹೊಡೆದ ಲಾರಿ, ನ್ಯಾನೋ ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಬಂಟ್ವಾಳ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು.