- ಬಂಟ್ವಾಳ
- 12:34 ಅಪರಾಹ್ನ
- ಮಾರ್ಚ್ 13, 2023
ಪುಂಜಾಲಕಟ್ಟೆ : ನೇರಳಕಟ್ಟೆಯಲ್ಲಿ ಬೈಕ್ ಮತ್ತು ಲಾರಿ ನಡುವೆ ಅಪಘಾತ!
Twitter
Facebook
LinkedIn
WhatsApp

ಪುಂಜಾಲಕಟ್ಟೆ: ನೇರಳಕಟ್ಟೆಯ ತಿರುವಿನಲ್ಲಿ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಘಾತದಿಂದ ಪಾರಾಗಿದ್ದಾರೆ
ಘಟನೆಯ ವಿವರ
ಇಂದು ಮಧ್ಯಾಹ್ನ 12ರ ಸಮಯಕ್ಕೆ ಬೈಕ್ ಸವಾರ ವಾಮದಪದವಿನಿಂದ ಪುಂಜಾಲಕಟ್ಟೆಗೆ ಹಾಗೂ ಲಾರಿ ವಾಮದಪದಾವು ಮಾರ್ಗವಾಗಿ ಚಲಿಸುತ್ತಿದ್ದು ನೆರಳಕಟ್ಟೆಯ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ. ಸವಾರನನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಪುಂಜಾಲ್ ಕಟ್ಟೆ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಈ ತಿರುವಿನಲ್ಲಿ ಸಾಕಷ್ಟು ಬಾರಿ ಅಪಘಾತಗಳು ಸಂಭವಿಸುತ್ತಲೆ ಇದ್ದು ಜಾಗರೂಕತೆಯಿಂದ ಸಂಚರಿಸುವುದು ಉತ್ತಮ.