- ಬಂಟ್ವಾಳ
- 11:25 ಫೂರ್ವಾಹ್ನ
- ಮಾರ್ಚ್ 22, 2023
ನಿವೃತ ಮುಖ್ಯ ಶಿಕ್ಷಕಿ ಕರಿಂಗಾಣ ಅನಸೂಯಾ ವಾಸುದೇವ ನಾಯಕ್ ನಿಧನ

ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ, ಕರಿಂಗಾಣ ಅನಸೂಯಾ ವಾಸುದೇವ ನಾಯಕ್ ರವರು ಅಲ್ಪಕಾಲದ ಅನಾರೋಗ್ಯದಿಂದ ದೈವಾಧೀನರಾಗಿದ್ದಾರೆ.
ಇವರು ಜನಪ್ರಿಯ ಅಧ್ಯಾಪಿಕೆಯಾಗಿ ಕುಕ್ಕಾಜೆ, ಮೀನಾದಿ, ಮೊಗರ್ನಾಡು ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಕುಕ್ಕಾಜೆ ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಭಾಲಾವಳಿಕಾರ್ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಜೀವ ಸದಸ್ಯೆಯಾಗಿ, ಮೋಂತಿಮಾರು ದುರ್ಗಾ ಪರಮೇಶ್ವರೀ ದೇವಾಲಯದ ಆಡಳಿತ ಮಂಡಳಿಯ ಸದಸ್ಯೆಯಾಗಿ, ,ಶ್ರೀದುರ್ಗಾ ಮಹಿಳಾ ಮಂಡಳಿಯವ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದವರು. ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಗಳ ನೇತೃತ್ವ ವಹಿಸಿಸವರು.ತಮ್ಮ ಪತಿಯೊಡಗೂಡಿ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೆ ಕೊಡುಗೈ ದಾನಿಯಾಗಿದ್ದವರು. ಭಾಲಾವಲಿ ಭಾಷೆಯಲ್ಲಿ ಹಾಗೂ ಕನ್ನಡದಲ್ಲಿ ಸುಮಾರು ಐನೂರಕ್ಕೂ ಹೆಚ್ಚಿನ ಚುಟುಕಗಳನ್ನು ಕವನಗಳನ್ನು ಲಘು ಪ್ರಹಸನ, ಲಲಿತ ಪ್ರಬಂದಗಳನ್ನೂ ಬರೆದು ಕೆಲವನ್ನು ಪ್ರಕಟಮಾಡಿವರು. ಮಗ, ಸೊಸೆ, ಮೊಮ್ಮಗ, ಮೊಮ್ಮಗಳು , ಇಬ್ಬರು ಸೋದರರು ಮತ್ತು ಇಬ್ಬರು ಸೋದರಿಯರು ಹಾಗೂ ಅಪಾರವಾದ ಶಿಷ್ಯ ವರ್ಗ ಮತ್ತು ಬಂಧುಗಳನ್ನು ಅಗಲಿದ್ದಾರೆ.