- ಬಂಟ್ವಾಳ
- 9:47 ಫೂರ್ವಾಹ್ನ
- ಮಾರ್ಚ್ 14, 2023
ನಿವೃತ್ತ ಮುಖ್ಯ ಶಿಕ್ಷಕ ರವಿರಾಜ ಬಂಗೇರ ಇನ್ನಿಲ್ಲ
Twitter
Facebook
LinkedIn
WhatsApp

ಬಂಟ್ವಾಳ: ನಿವೃತ್ತ ಮುಖ್ಯ ಶಿಕ್ಷಕ, ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ನಿವಾಸಿ ರವಿರಾಜ ಬಂಗೇರ ಅವರು ಅಸೌಖ್ಯದಿಂದ ಮಾ.14 ರಂದು ಸ್ವ ಗೃಹ ದಲ್ಲಿ ನಿಧನ ಹೊಂದಿದರು.
ಅವರು ಆದರ್ಶ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ವಿವಿಧ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದರು.
ಅವರು ಉತ್ತಮ ರಂಗಭೂಮಿ ಕಲಾವಿದರಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದವರು ಹಾಗೂ ಶ್ರೀ ಬಸವೇಶ್ವರ ದೇವಾಲಯ ಬಸವನಗುಡಿ ಇದರ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಹಲವಾರು ಸಂಘ, ಸಂಸ್ಥೆ ಗಳಿಂದ ಸನ್ಮಾನಿತರಾಗಿದ್ದರು.
ಮೃತರು ಪತ್ನಿ, ಪುತ್ರ, ಹಾಗೂ ಪುತ್ರಿ ಮತ್ತು ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.