- ಪುತ್ತೂರು, ಸುಳ್ಯ
- 3:01 ಅಪರಾಹ್ನ
- ಮಾರ್ಚ್ 30, 2023
ನಾಪತ್ತೆಯಾಗಿದ್ದ 10 ನೇ ತರಗತಿ ವಿದ್ಯಾರ್ಥಿಯ ಶವ ನಾಕೂರು ಗಯದಲ್ಲಿ ಪತ್ತೆ
Twitter
Facebook
LinkedIn
WhatsApp

ಕಡಬ: ಮನೆಯಿಂದ ತೆರಳಿ ನಾಪತ್ತೆಯಾದ ವಿದ್ಯಾರ್ಥಿಯ ಶವ ನಾಕೂರು ಗಯದ ಕುಮಾರಧಾರ ನದಿಯಲ್ಲಿ ಇಂದು ಮದ್ಯಾಹ್ನದ ವೇಳೆಗೆ ಪತ್ತೆಯಾಗಿದೆ.ಕೋಡಿಂಬಾಳ ಗ್ರಾಮದ ಮಂಜುನಾಥ ಎಂಬವರ ಪುತ್ರ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ ಮೃತ ಬಾಲಕ.ಮಾ.29 ರಂದು ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೀವ್ರ ಹುಟುಕಾಟ ನಡೆಸಿದ್ದರು. ಮಾ.30ರಂದು ಮುಂಜಾನೆ ವಿದ್ಯಾರ್ಥಿಯ ಬ್ಯಾಗ್ ನಾಕೂರು ಗಯದ ಬಳಿ ಪತ್ತೆಯಾಗಿತ್ತು.
ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಟುಕಾಟ ಆರಂಭಿದ್ದರು.ಇದೀಗ ಮೃತ ಶರೀರ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿ ಲಭಿಸಲಿದೆ.