- ಬೆಳ್ತಂಗಡಿ
- 8:43 ಫೂರ್ವಾಹ್ನ
- ಮಾರ್ಚ್ 15, 2023
ಕೂಲಿ ಕಾರ್ಮಿಕ ಮಹಿಳೆ ಕುಸಿದು ಬಿದ್ದು ಸಾವು
Twitter
Facebook
LinkedIn
WhatsApp

ಬೆಳ್ತಂಗಡಿ: ಕೂಲಿ ಕೆಲಸಕ್ಕೆಂದು ಮಾ. 12ರಂದು ತೆರಳಿದ್ದ ಮಹಿಳೆಯೋರ್ವರು ಕುಸಿದು ಬಿದ್ದು, ಪ್ರಜ್ಞೆ ತಪ್ಪಿದವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ (55) ಮೃತಪಟ್ಟವರು. ಮುಂಡಾಜೆ ಗ್ರಾಮದ ಸೊಮಂತ್ತಡ್ಕ ನಿವಾಸಿಯೋರ್ವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಮಯ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಆರೈಕೆ ಮಾಡಿ ತತ್‌ಕ್ಷಣ ಚಿಕಿತ್ಸೆಗೆ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪುತ್ರಿ ಪುಷ್ಪಾ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.