- ಮೂಡುಬಿದಿರೆ
- 12:58 ಅಪರಾಹ್ನ
- ಮಾರ್ಚ್ 10, 2023
ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಮರಕ್ಕೆ ಢಿಕ್ಕಿ-ನಾಲ್ವರು ಪಾರು
Twitter
Facebook
LinkedIn
WhatsApp

ಕಿನ್ನಿಗೋಳಿ :ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕಿನ್ನಿಗೂಳಿ ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕಮ್ಮಾಜೆ ನೇಕಾರ ಕಾಲನಿ ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪಾರಾಗಿದ್ದಾರೆ.
ಉಜಿರೆ ಕಡೆಯಿಂದ ಹಳೆಯಂಗಡಿ ಕಡೆಗೆ ಓಮ್ನಿ ಕಾರು ಸಂಚರಿಸುತ್ತಿತ್ತು. ಈ ವೇಳೆ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕಮ್ಮಾಜೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲದೆ ಅಲ್ಲೇ ಇದ್ದ ಮರಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದಿಂದಾಗಿ ಓಮ್ನಿ ಕಾರಿನ ಮುಂಭಾಗ ಜಖಂಗೊಂಡಿದೆ. ಚಾಲಕ, ಮಗು ಸಹಿತ ನಾಲ್ವರು ಪ್ರಯಾಣಿಕರು ಕಾರಲ್ಲಿದ್ದು, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇವರೆಲ್ಲರೂ ಉಜಿರೆಯಲ್ಲಿ ಮದುವೆ ಮುಗಿಸಿ ತಮ್ಮ ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ನಿದ್ದೆಯ ಮಂಪರಿನಲ್ಲಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.