ಬುಧವಾರ, ಫೆಬ್ರವರಿ 21, 2024
ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರ್ಕಳದಿಂದ ಮತ್ತೊಂದು ಅಭ್ಯರ್ಥಿ ಕಣಕ್ಕೆ. ಸಂಚಲನ ಸೃಷ್ಟಿ ಮಾಡಿದ ಮಮತಾ ಹೆಗ್ಡೆ ಸ್ಪರ್ಧೆ!!

Twitter
Facebook
LinkedIn
WhatsApp
WhatsApp Image 2023 03 02 at 6.51.48 PM

ಕಾರ್ಕಳ:ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯೋರ್ವರು ಚುನಾವಣಾ ಆಕಾಂಕ್ಷಿಯಾಗಿದ್ದಾರೆ.ಅನಾದಿ ಕಾಲದಿಂದಲೂ ಸತ್ಯ ನಿಷ್ಠೆ ಕೌಶಲ್ಯ ಹಾಗೂ ಗುಡಿ ಕೈಗಾರಿಕೆಗೆ ಪ್ರಸಿದ್ದವಾಗಿರುವ ಕಾರ್ಕಳ ಕ್ಷೇತ್ರವನ್ನು ಮುಂದಿನ ದಿನಗಳಿಗೆ ಆಧುನಿಕತೆಗೆ ಪೂರಕವಾಗುವಂತೆ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಅಭಿವೃದ್ದಿಪಡಿಸಿ ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಕನಸಾಗಿದೆ ಎಂದು ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಸಂಸ್ಥಾಪಕಿ ಡಾ.ಮಮತಾ ಹೆಗ್ಡೆ ಅವರು ಹೇಳಿದ್ದಾರೆ.

“ನಮ್ಮ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಮಹಿಳಾ ಮತದಾರರೇ ಜಾಸ್ತಿ ಇರುವ ಕ್ಷೇತ್ರವಾಗಿದ್ದು, ಸ್ವಾತಂತ್ರ್ಯದ ನಂತರ ಈ ವರೆಗೆ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯನ್ನು ಅಭ್ಯರ್ಥಿಯಾಗಿ ನಿಲ್ಲಿಸಲಿಲ್ಲ. ಈ ಕಾರಣಕ್ಕಾಗಿ ನಾನು ನನ್ನ ಹುಟ್ಟಿದ ಊರಿನ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿರುತ್ತೇನೆ. ಈ ಒಂದು ಸದುದ್ದೇಶದ ಚಿಂತನೆಯನ್ನು ಮಾನ್ಯ ಮತದಾರರು ವಿಜಯದ ಅವಕಾಶವನ್ನಾಗಿ ಪರಿವರ್ತಿಸಿದರೆ, ಕಾರ್ಕಳ ಕ್ಷೇತ್ರದ ಜನರ ಸರ್ವಾಂಗಿಣ ಪ್ರಗತಿಗಾಗಿ, ತನು-ಮನಗಳಿಂದ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಕಪ್ಪು ಚುಕ್ಕೆಗೆ ಅವಕಾಶ ನೀಡದೆ, ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.”

“ಕೇಂದ್ರ ಸರ್ಕಾರದ ಯೋಜನೆಯಂತೆ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು.ಆದರೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಈವರೆಗೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ ಸ್ಥಾಪನೆ ಆಗಲಿಲ್ಲ. ಇದನ್ನು ಕಾರ್ಕಳ ಕ್ಷೇತ್ರದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿರುವ ಕುಶಲ ಕರ್ಮಿಗಳು ತಯಾರಿಸುವ ಬುಟ್ಟಿ ಇತ್ಯಾದಿ ಕರಕುಶಲ ವಸ್ತುಗಳಿಗೆ ಉತ್ತಮ ಬೆಲೆ/ದರ ಮತ್ತು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ಯಿಸುತ್ತೇನೆ.”

“ನನ್ನ ವಿದ್ಯಾಭ್ಯಾಸ ಎಲ್ಲಾ ಹಂತಗಳಲ್ಲಿಯೂ ಅತ್ಯುನ್ಯತ ಶ್ರೇಣಿಯಲ್ಲಿಯೇ ಉತೀರ್ಣಳಾಗಿದ್ದು, ಶಿಕ್ಷಕಿಯಾಗಿ ನನ್ನ ವೃತ್ತಿ ಜಿವನದಲ್ಲಿಯೂ ಎಲ್ಲಾ ವಿದ್ಯಾರ್ಥಿಗಳ ಸರ್ವತೋಮುಖ ವಿಧ್ಯಾ ಪ್ರಗತಿಗಾಗಿ ಶ್ರಮಿಸಿರುತ್ತೇನೆ. ಹಲವಾರು ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಮಾರ್ಗದರ್ಶನ ಮಾಡುತ್ತಿದ್ದೇನೆ. ಮುಂದೆ ನಿಮ್ಮೇಲ್ಲರ ಆಶಿರ್ವಾದದಿಂದ ಕ್ಷೇತ್ರದ ಶಾಶಕಿಯಾಗುವ ಅವಕಾಶ ದೊರೆತರೆ, ನಿಯಮಬದ್ಧವಾಗಿ ಕ್ಷೇತ್ರದ ಜನರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೆ.”

ಕೊನೆಯದಾಗಿ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಯ ಸಾಂವಿದಾನಿಕ ಹಕ್ಕುಗಳನ್ನು ರಕ್ಷಿಸಿ, ಸರ್ವ ಜನಾಂಗದ ಶಾಂತಿಯ ತೋಟವೆಂಬ ಕೀರ್ತಿಯನ್ನು ಪಡೆದು, ಕಾರ್ಕಳ ಕ್ಷೇತ್ರದ ಜನರ ಸರ್ವಾಂಗೀಣ ಪ್ರಗತಿ ಮತ್ತು ಶಾಂತಿಯುತ ಜೀವನಕ್ಕಾಗಿ ಶ್ರಮಿಸುತ್ತೇನೆ. ಶಾಸಕಿಯಾಗಿ ಆಯ್ಕೆಯಾದರೆ ಕ್ಷೇತ್ರದಲ್ಲಿಯೇ ವಾಸಿಸಿ ಕಾಯಾ, ವಾಚಾ, ಮನಸಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಅವರು ಹೇಳಿದ್ದಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು