- ಕುಶಾಲನಗರ, ಮಡಿಕೇರಿ
- 6:27 ಅಪರಾಹ್ನ
- ಮಾರ್ಚ್ 17, 2023
ಕರ್ನಾಟಕದ ಹೆಮ್ಮೆ ಪುನೀತ್ ರಾಜಕುಮಾರ್: ಡಾ. ಮಂತರ್ ಗೌಡ
Twitter
Facebook
LinkedIn
WhatsApp

ಕುಶಾಲನಗರ. ಪುನೀತ್ ರಾಜಕುಮಾರ್ ಕರ್ನಾಟಕದ ಹೆಮ್ಮೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕೊಡಗಿನ ಅಭಿವೃದ್ಧಿ ಚಿಂತಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆಳೆಯರ ಬಳಗ ವತಿಯಿಂದ ಕಚೇರಿ ಉದ್ಘಾಟನೆ ಹಾಗೂ ಹುಟ್ಟುಹಬ್ಬ ಆಚರಿಸಲಾಯಿತು

ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಹುಟ್ಟುಹಬ್ಬ ಹಾಗೂ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಂತರ್ ಗೌಡ ಇಂಥ ಮೇಧಾವಿ ನಟನ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತೋಷದ ವಿಷಯ ಆದರೆ ಬರೀ ಹುಟ್ಟುಹಬ್ಬ ಆಚರಣೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ ಅಂತಹ ನೇರ ನಟನ ಆದರ್ಶಗಳನ್ನ ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಸಂಘವನ್ನು ಮುನ್ನಡೆಸುವ ಜೊತೆಗೆ ಸಮಾಜಕ್ಕೆ ಹಾಗೂ ಬಡವರಿಗೆ ಉಪಯೋಗವಾಗುವ ರೀತಿಯಲ್ಲಿ ಎಲ್ಲರೂ ಸಹ ಕೆಲಸ ಮಾಡಬೇಕು ಎಂದರು.