- ಬೆಳ್ತಂಗಡಿ
- 8:26 ಫೂರ್ವಾಹ್ನ
- ಮಾರ್ಚ್ 15, 2023
ಎಲೆಕ್ಟ್ರಿಕಲ್ಸ್, ವೈಂಡರ್ಸ್ ಅಂಗಡಿಯಿಂದ ಕಳವು
Twitter
Facebook
LinkedIn
WhatsApp

ಬೆಳ್ತಂಗಡಿ: ಚಿಬಿದ್ರೆಯ ಜೆ.ಕೆ. ಎಲೆಕ್ಟ್ರಿಕಲ್ಸ್ ಮತ್ತು ವೈಂಡರ್ಸ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ ಕಾಫರ್ ವೇರ್ (ಸ್ಕ್ರಾಪ್ ) ಹಾಗೂ ಬೋರ್‌ವೆಲ್‌ಗೆ ಸಂಬಂಧಿಸಿದ ಸುಮಾರು 94 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ತೋಟತ್ತಾಡಿ ಗ್ರಾಮದ ಡೊಂಬರಮಜಲು ಮನೆ ನಿವಾಸಿ ಜಯಾನಂದ ಡಿ. ಪೂಜಾರಿ ಅವರ ಮಾಲಕತ್ವದ ಜಿ.ಕೆ. ಅಂಗಡಿಯಿಂದ ಈ ಸೊತ್ತುಗಳು ಕಳವಾಗಿದೆ. ಮಾ. 12ರಂದು ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಕಳವಾಗಿರುವುದು ತಿಳಿದುಬಂದಿದೆ.
ಕಳ್ಳರು ಅಂಗಡಿ ಬೀಗ ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಸ್ಕ್ರಾಪ್ 20 ಕೆ.ಜಿ. ಮತ್ತು ರಿಪೇರಿಗೆ ತಂದಿದ್ದ ಬೋರ್‌ವೆಲ್‌ನ ಸಬ್‌ಮರ್ಸಿಬಲ್ ಮೋಟಾರ್‌ಗಳು 11 ಹಾಗೂ ಸಿಂಗಲ್ ಪೇಸ್ ಎರಡು ಎಚ್.ಪಿ.ಯ 2 ಮೋಟಾರ್‌ಗಳನ್ನು ಕಳವು ಮಾಡಿದ್ದಾರೆ. ಜಯಾನಂದ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.