- ಬಂಟ್ವಾಳ
- 10:55 ಫೂರ್ವಾಹ್ನ
- ಮಾರ್ಚ್ 18, 2023
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು!
Twitter
Facebook
LinkedIn
WhatsApp

ಮಾಣಿ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಮಾಣಿ ಬುಡೋಳಿಯ ಪಾಟ್ರಕೋಡು ನಿವಾಸಿ ಫಾರೂಕ್ ಮೃತಪಟ್ಟವರು.ಫಾರೂಕ್ ದಂಪತಿಗಳಿಗೆ ವಿವಾಹವಾಗಿ 10 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಆದ್ರೆ ಕೆಲ ದಿನಗಳ ಹಿಂದಷ್ಟೇ ಪುಟ್ಟ ಕಂದಮ್ಮನ ಆಗಮನವಾಗಿತ್ತು. ವಿಧಿಯಾಟ ಸಂತಸದ ಕ್ಷಣದಲ್ಲಿ ಸೂತಕದ ಛಾಯೆ ಮೂಡಿಸಿದೆ.
10 ವರ್ಷಗಳ ಬಳಿಕ ಮೊನ್ನೆಯಷ್ಠೇ ಅವರ ಪತ್ನಿಗೆ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು ನೋಡಲು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುವಾಗ ದೇರಳಕಟ್ಟೆ ಆಸ್ಪತ್ರೆಯ ಬಳಿಯೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಫಾರೂಕ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.