ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವಕಪ್ ಫೈನಲ್ ಪಂದ್ಯವನ್ನು ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

Twitter
Facebook
LinkedIn
WhatsApp
ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ
ಬೆಂಗಳೂರು: ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ಫೈನಲ್ ಪಂದ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸಂಬಂಧ ಸರ್ಕಾರದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನಾಡಿನ ಸಮಸ್ತ ಕ್ರಿಕೆಟ್ ಪ್ರಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಾಳಿನ ವಿಶ್ವಕಪ್ (World Cup 2023) ಪಂದ್ಯಾಕೂಟದ ಫೈನಲ್ ಪಂದ್ಯವನ್ನು ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

 

ಕ್ರಿಕೆಟ್ ಅಭಿಮಾನಿಗಳು ಈ ಅವಕಾಶವನ್ನು ಬಳಸಿಕೊಂಡು ಫೈನಲ್ ಪಂದ್ಯದ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿಶ್ವಕಪ್ ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ, ಬಾಲಿವುಡ್ ತಾರೆಯರು, ಸಚಿನ್ ತೆಂಡುಲ್ಕರ್ ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ