ಪುಟ್ಟ ಬಾಲಕಿ ಮೇಲೆ ಚಿರತೆ ದಾಳಿ; ತೀವ್ರ ಗಾಯ
Twitter
Facebook
LinkedIn
WhatsApp

ಹನೂರು: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕಾಡಂಚಿನ ಕಗ್ಗಲಗುಂದಿ ಗ್ರಾಮದಲ್ಲಿ ಜರುಗಿದೆ.
ಕಗ್ಗಲಗುಂದಿ ಗ್ರಾಮದ ಸುಶೀಲ(6) ಎಂಬಾಕೆಯೇ ಗಾಯಗೊಂಡ ಬಾಲಕಿಯಾಗಿದ್ದು ಈಕೆ ಸೋಮವಾರ ಸಂಜೆ ಮನೆಯ ಮುಂಭಾಗ ಆಟವಾಡುತ್ತಾ ಕುಳಿತಿದ್ದಳು ಈ ಸಂದರ್ಭದಲ್ಲಿ ಚಿರತೆಯೊಂದು ಬಂದು ಮಗುವನ್ನು ಎಳೆದೊಯ್ದಿದೆ. ಈ ಸಂದರ್ಭದಲ್ಲಿ ಮಗುವಿನ ಚೀರಾಟವನ್ನು ಕೇಳಿ ಗ್ರಾಮಸ್ಥರು ಹೊರ ಬಂದಾಗ ಚಿರತೆ ಬಂದಿರುವುದನ್ನು ಕಂಡು ಜೋರಾಗಿ ಕೂಗಾಡಿದ್ದಾರೆ .ಈ ವೇಳೆ ಚಿರತೆ ಬಾಲಕಿಯನ್ನು ಗಾಯಗೊಳಿಸಿ ಬಿಟ್ಟು ಹೋಗಿದೆ.
ಕೂಡಲೇ ಗಾಯಾಳು ಬಾಲಕಿಯನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಇನ್ನು ಮಗುವಿನ ಗಂಟಲಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.