ಎಲ್ ಐಸಿ ನೂತನ ಎಂಡಿಯಾಗಿ ಆರ್. ದೊರೈಸ್ವಾಮಿ ನೇಮಕ; ಸೆಪ್ಟೆಂಬರ್ ನಲ್ಲಿ ಅಧಿಕಾರ ಸ್ವೀಕಾರ
ನವದೆಹಲಿ (ಆ.15): ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಎಂಡಿ) ಆರ್. ದೊರೈಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಪ್ರಸ್ತುತ ದೊರೈಸ್ವಾಮಿ ಮುಂಬೈ ಕೇಂದ್ರೀಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಎಂಡಿ ಆಗಿರುವ ಐಪೆ ಮಿನಿ ಅವರ ಸ್ಥಾನಕ್ಕೆ ದೊರೈಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅವರು ಸೆಪ್ಟೆಂಬರ್ 1, 2023 ಅಥವಾ ಅದರ ನಂತರದ ದಿನದಲ್ಲಿ ಅಧಿಕಾರ ಸ್ವೀಕರಿಸಲಿದ್ದು, 2026ರ ಆಗಸ್ಟ್ 31 ಅಥವಾ ಮುಂದಿನ ಆದೇಶ ಬರುವ ತನಕ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ ಎಂದು ರೆಗ್ಯುಲೇಟರಿ ಫೈಲ್ಲಿಂಗ್ ನಲ್ಲಿ ಎಲ್ಐಸಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳ ನಿರ್ದೇಶಕರ ಮುಖ್ಯಸ್ಥರಾಗಿರುವ ಹಣಕಾಸು ಸೇವಾ ಸಂಸ್ಥೆಗಳ ವಿಭಾಗ (ಎಫ್ ಎಸ್ ಐಬಿ) ಜೂನ್ ನಲ್ಲಿ ಎಲ್ಐಸಿ ಎಂಡಿ ಹುದ್ದೆಗೆ ದೊರೈಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಎಫ್ ಎಸ್ ಐಬಿ ನೇತೃತ್ವ ವಹಿಸಿದ್ದಾರೆ. ಇನ್ನು ಈ ಹಿಂದೆ ಎಲ್ಐಸಿ ಎಂಡಿ ಉಷಾ ಸಂಗ್ವಾನ್, ಐಆರ್ ಡಿಎಐ ಮುಖ್ಯಸ್ಥ ದೇಬಶೀಶ್ ಪಾಂಡೆ, ಒರಿಯೆಂಟಲ್ ವಿಮಾ ಸಂಸ್ಥೆ ಎಂಡಿ ಎ.ವಿ.ಗಿರಿಜಾ ಕುಮಾರ್, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ ಎಫ್ ಎಸ್ ಐಬಿ ಇತರ ಸದಸ್ಯರಾಗಿದ್ದಾರೆ.
ಪ್ರಸ್ತುತ ಎಲ್ಐಸಿ ನಾಲ್ವರು ಎಂಡಿಗಳನ್ನು ಹೊಂದಿದೆ. ಮಿನಿ ಐಪೆ, ಎಂ. ಜಗನ್ನಾಥ್, ತಬ್ಲೇಷ್ ಪಾಂಡೆ ಹಾಗೂ ಸತ್ಪಲ್ ಭಾನೂ ಎಲ್ಐಸಿ ಎಂಡಿಗಳಾಗಿದ್ದಾರೆ. ಈಗ ಮಿನಿ ಐಪೆ ಅವರ ಸ್ಥಾನಕ್ಕೆ ಆರ್.ದೊರೈಸ್ವಾಮಿ ಅವರನ್ನು ನೇಮಿಸಲಾಗಿದೆ. ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಸತ್ಪಲ್ ಭಾನೂ ಅವರನ್ನು ಎಲ್ ಐಸಿ ಎಂಡಿಯನ್ನಾಗಿ ನೇಮಕ ಮಾಡಿತ್ತು.
ಪ್ರಸ್ತುತ ಎಲ್ಐಸಿ ನಾಲ್ವರು ಎಂಡಿಗಳನ್ನು ಹೊಂದಿದೆ. ಮಿನಿ ಐಪೆ, ಎಂ. ಜಗನ್ನಾಥ್, ತಬ್ಲೇಷ್ ಪಾಂಡೆ ಹಾಗೂ ಸತ್ಪಲ್ ಭಾನೂ ಎಲ್ಐಸಿ ಎಂಡಿಗಳಾಗಿದ್ದಾರೆ. ಈಗ ಮಿನಿ ಐಪೆ ಅವರ ಸ್ಥಾನಕ್ಕೆ ಆರ್.ದೊರೈಸ್ವಾಮಿ ಅವರನ್ನು ನೇಮಿಸಲಾಗಿದೆ. ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಸತ್ಪಲ್ ಭಾನೂ ಅವರನ್ನು ಎಲ್ ಐಸಿ ಎಂಡಿಯನ್ನಾಗಿ ನೇಮಕ ಮಾಡಿತ್ತು.
ಇನ್ಫೋಸಿಸ್ ಸಂಸ್ಥೆಯಲ್ಲಿ ಮ್ಯೂಚವಲ್ ಫಂಡ್ಸ್ ಹಾಗೂ ವಿಮಾ ಕಂಪನಿಗಳು ಒಟ್ಟು ಶೇ.31.33 ಷೇರುಗಳನ್ನು ಹೊಂದಿವೆ. ಇವುಗಳಲ್ಲಿ ಎಲ್ಐಸಿ ಇನ್ಫೋಸಿಸ್ ನ ಅತೀದೊಡ್ಡ ಷೇರುದಾರ ಸಂಸ್ಥೆಯಾಗಿದೆ. ಅಲ್ಲದೆ, ವಿಮಾ ಕಂಪನಿಗಳ ಪೈಕಿ ಅತೀಹೆಚ್ಚು ಷೇರುಗಳನ್ನು ಹೊಂದಿರುವ ಸಂಸ್ಥೆ ಕೂಡ ಆಗಿದೆ.
ರತನ್ ಟಾಟಾರ 750 ಕೋಟಿ ರೂ. ಕಂಪೆನಿ ಸಂಭಾಳಿಸ್ತಿರೋದು ನೈಕಾದ ಮಾಜಿ ಉದ್ಯೋಗಿ
ಭಾರತದ ಶ್ರೀಮಂತ ಉದ್ಯಮಿ ರತನ್ ಟಾಟಾರ ಕಂಪೆನಿಗಳ ಸಿಇಒ ಗೋಪಾಲ್ ಅಸ್ಥಾನ. ಗೋಪಾಲ್ ಅಸ್ಥಾನ ನೈಕಾದಲ್ಲಿ ಮುಖ್ಯ ವ್ಯಾಪಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಶಾಪರ್ಸ್ ಸ್ಟಾಪ್‌ನಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ರತನ್ ಟಾಟಾ ಅವರ 750 ಕೋಟಿ ರೂ. ಕಂಪನಿಯ ಸಿಇಒ. Nykaaದ ಮಾಜಿ ಉದ್ಯೋಗಿ ಈಗ ಭಾರತದಲ್ಲಿ ರಾಲ್ಫ್ ಲಾರೆನ್, ರೇ-ಬಾನ್‌ನ್ನು ಮಾರಾಟ ಮಾಡುತ್ತಿದ್ದಾರೆ.
ರತನ್ ಟಾಟಾ ಅವರ ಟಾಟಾ ಗ್ರೂಪ್ ಒಡೆತನದ ಅನೇಕ ಸಮೃದ್ಧ ಕಂಪನಿಗಳಲ್ಲಿ ಒಂದಾಗಿದೆ ಟಾಟಾ ಕ್ಲಿಕ್ಯೂ (ರೂ. 750 ಕೋಟಿ), ಟಾಟಾ ಡಿಜಿಟಲ್‌ನ ಆನ್‌ಲೈನ್ ಸಣ್ಣ ಭಾಗವಾಗಿದೆ. ಟಾಟಾ CLiQ ಮೂಲಕ ಭಾರತೀಯ ಮಾರುಕಟ್ಟೆಗೆ ಹಲವು ಉನ್ನತ ಮಟ್ಟದ ಬ್ರ್ಯಾಂಡ್‌ಗಳನ್ನು ತರಲಾಗಿದೆ.
ಗೋಪಾಲ್ ಅಸ್ಥಾನ ಟಾಟಾ ಗ್ರೂಪ್‌ನ ಪ್ರೀಮಿಯಂ ಉಡುಪುಗಳ ಶ್ರೇಣಿಯಾದ ಟಾಟಾ ಕ್ಲಿಕ್ಯೂನ ಸಿಇಒ.
ಗೋಪಾಲ್ ಅಸ್ಥಾನ ಜಬಲ್‌ಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ವ್ಯವಹಾರ ಆಡಳಿತ ಮತ್ತು ನಿರ್ವಹಣೆಯಲ್ಲಿ ಪದವಿಯನ್ನು ಪಡೆಯಲು ಇಂಡಿಯನ್ ಬ್ಯುಸಿನೆಸ್ ಸ್ಕೂಲ್‌ಗೆ ಸೇರಿದರು. ಟಾಟಾ CLiQನ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಟಾಟಾ ಫ್ಯಾಶನ್ ಬ್ರ್ಯಾಂಡ್‌ನ ಅದೇ ಉದ್ಯಮದಲ್ಲಿ ಪ್ರತಿಸ್ಪರ್ಧಿ ಸಂಸ್ಥೆಯಾದ Nykaaದಲ್ಲಿ ಮುಖ್ಯ ವ್ಯಾಪಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಸಿಇಒ ಅಸ್ತಾನಾ ಅವರು ಬಜೆಟ್‌ಗಳನ್ನು ನಿರ್ವಹಿಸುವಲ್ಲಿ, ಮುನ್ಸೂಚಿಸುವಲ್ಲಿ, ಫ್ಯಾಷನ್ ಪ್ರವೃತ್ತಿಗಳನ್ನು ಗುರುತಿಸುವಲ್ಲಿ, ವಾಣಿಜ್ಯೀಕರಣ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಾರ್ಯತಂತ್ರದ ಖರೀದಿಯಲ್ಲಿ ಪರಿಣತಿ ಹೊಂದಿದ್ದಾರೆ.
ನಂತರದ ದಿನಗಳಲ್ಲಿ ಅವರು ಟಾಟಾ ಕ್ಲಿಕ್ಯೂಗೆ ಸೇರಿದರು. ಇದು ಐಷಾರಾಮಿ ಉತ್ಪನ್ನಗಳ ಅತಿದೊಡ್ಡ ಆನ್‌ಲೈನ್ ಕಂಪೆನಿಯಾಗಿದೆ. ಇದು ರಾಲ್ಫ್ ಲಾರೆನ್, ಟಾಮ್ ಫೋರ್ಡ್, ರೇ-ಬಾನ್, ವೈವ್ಸ್ ಸೇಂಟ್ ಲಾರೆಂಟ್, ಡೈಸನ್ ಮತ್ತು ಟಿಸ್ಸಾಟ್‌ನಂತಹ ಬಿಲಿಯನ್-ಡಾಲರ್ ಐಷಾರಾಮಿ ಬ್ರಾಂಡ್‌ಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ವ್ಯಾಪಾರವು ಇತ್ತೀಚೆಗೆ ಬಾಲ್ಡಿನಿನಿ, BCBG, ಆಸ್ಪಿನಲ್ ಆಫ್ ಲಂಡನ್, ಲಿಯು ಜೋ, ಲೋಕಿ, ಪೊಲ್ಲಿನಿ, ಮಲ್ಬೆರಿ ಮತ್ತು ಟ್ವಿನ್‌ಸೆಟ್ ಸೇರಿದಂತೆ 13 ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದೆ.