ಬುಧವಾರ, ಫೆಬ್ರವರಿ 21, 2024
ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್

Twitter
Facebook
LinkedIn
WhatsApp
ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್

ಬೆಳಗಾವಿ: ಬೆಳಗಾವಿ ವಿಧಾನಸಭೆಯ ಅಧಿವೇಶನದಲ್ಲಿ ದಿವ್ಯಾಂಗರ, ಅಂಗವಿಕಲರ ಕಲ್ಯಾಣದ ಕುರಿತಂತೆ ವಿಧಾನ ಪರಿಷತ್ತು ಸದಸ್ಯರಾದ ಹರೀಶ್ ಕುಮಾರ್ ಮಹತ್ವದ ಗಮನ ಸೆಳೆಯುವ ವಿಷಯವನ್ನು ಮಂಡಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಸಮಿತಿಗಳ ನೇಮಕದ ವಿಷಯದಲ್ಲಿ ಆಗಬೇಕಾದ ಬದಲಾವಣೆಯ ಕುರಿತು ಅವರ ಮಂಡಿಸಿದ ವಿಷಯಕ್ಕೆ ಸರಕಾರ ಸಹಮತ ಸೂಚಿಸಿದೆ.

ಈ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿಮ್ಮ ಕಾಳಜಿಯನ್ನು ಹಾಗೂ ಸಲಹೆಯನ್ನು ಪರಿಗಣಿಸಿ, ಈ ಕೂಡಲೇ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮೂಲಕ ದಿವ್ಯಾಂಗರಿಗೆ ಅನುಕೂಲವಾಗುವಂತೆ ವಿಧಾನ ಪರಿಷತ್ತಿನಲ್ಲಿ ಹರೀಶ್ ಕುಮಾರ್ ಸರಕಾರದ ಗಮನ ಸೆಳೆದಿದ್ದಾರೆ.

ಶುಚಿ ಯೋಜನೆಗೆ ಮರು ಚಾಲನೆ – ಜನವರಿಯಿಂದ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ ವಿತರಣೆ: ದಿನೇಶ್ ಗುಂಡೂರಾವ್

ಬೆಳಗಾವಿ: 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ (Shuchi Scheme) ಮರು ಚಾಲನೆ ನೀಡಲಾಗುತ್ತಿದ್ದು ಜನವರಿಯಿಂದ ಶಾಲೆಯ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ (Napkin) ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಸೋಮವಾರ ಬೆಳಗಾವಿ ಅಧಿವೇಶನದಲ್ಲಿ (Belagavi Session) ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಶುಚಿ ಒಂದು ಮಹತ್ವವಾದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ. ಆದರೆ ಕಳೆದ 4 ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ 4 ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

10 ವರ್ಷದಿಂದ 18 ವರ್ಷದ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತ್ತಿತ್ತು. ಈ ಬಾರಿ ನೇರವಾಗಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್‌ಗಳನ್ನು ವಿತರಿಸುವಂತೆ ಏಜೆನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

40.50 ಕೋಟಿ ರೂ.ಯ ಯೋಜನೆ ಇದಾಗಿದ್ದು, ಸಂಪೂರ್ಣ ಹಣಕಾಸನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೆರವು ಸಿಕ್ಕಿಲ್ಲ. ಪ್ರಾಯೋಗಿಕವಾಗಿ ಮೆನ್‌ಸ್ಟ್ರುವಲ್ ಮುಟ್ಟಿನ ಕಪ್‌ಗಳನ್ನು ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’