ವಕೀಲರ ಮೇಲೆ ಹೆಲ್ಮೆಟ್ ವಿಚಾರಕ್ಕೆ ಪೊಲೀಸ್ ದೌರ್ಜನ್ಯದ ಆರೋಪ ;ಬಂಟ್ವಾಳದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ!
ಬಂಟ್ವಾಳ : ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ಪ್ರೀತಮ್ ಎಂಬವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರುದ್ದ ಹಾಗೂ ಘಟನೆಯಿಂದ ಅನ್ಯಾಯಕ್ಕೊಳಗಾದ ವಕೀಲ ಪ್ರೀತಮ್ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ವಕೀಲರ ಸಂಘ (ರಿ ) ಬಂಟ್ವಾಳದ ವತಿಯಿಂದ ಜೆ ಎಂ ಎಫ್ ಸಿ ಕೋರ್ಟ್ ಆವರಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ ಅವರು ಪೋಲೀಸರು ವಕೀಲರ ಮೇಲೆ ನಡೆಸಿದ ಗೂಂಡ ವರ್ತನೆ ಖಂಡನೀಯವಾಗಿದ್ದು, ಬಂಟ್ವಾಳದ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.ಈ ಘಟನೆಯನ್ನು ಲಘುವಾಗಿ ತೆಗೆದುಕೊಳ್ಳದೆ, ಸರಕಾರ ಗಂಭೀರವಾಗಿ ಪರಿಗಣಿಸಿ ವಕೀಲರ ವೃತ್ತಿಗೆ ಅಡ್ಡಿ ಯಾಗದಂತೆ ನ್ಯಾಯ ಒದಗಿಸಿಕೊಡುವಂತೆ ತಿಳಿಸಿದರು.
ಸಂಘದ ಸದಸ್ಯ ಮೋಹನ್ ಕಡೇಶಿವಾಲಯ ಮಾತನಾಡಿ, ವಕೀಲರ ರಕ್ಷಣಾ ಕಾಯ್ದೆ ಶೀಘ್ರವಾಗಿ ಜಾರಿಯಾಗಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು, ಅತ್ಯಂತ ಶೀಘ್ರವಾಗಿ ಗೃಹ ಸಚಿವರು ಪೋಲೀಸ್ ಇಲಾಖೆಯನ್ನು ಹದ್ದುಬಸ್ತಿನಲ್ಲಿಡಬೇಕು. ಗೂಂಡಗಿರಿಯನ್ನು ನಿಲ್ಲಿಸಲು ಸೂಚನೆ ನೀಡಬೇಕು ಎಂದು ಒತ್ತಾಯ ಮಾಡಿದರು. ಪೋಲೀಸರ ವರ್ತನೆ ಮಿತಿಮೀರಿದ್ದು, ಕಾನೂನು ಪಾಲನೆ ಮಾಡುವ ನಮಗೆ ಬೂಟಿನಿಂದ ತುಳಿಯುವುದು ಗೊತ್ತು ಎಂದು ಅಕ್ರೋಶ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ ಎಮ್, ಕಾರ್ಯದರ್ಶಿ ಚಂದ್ರಶೇಖರ ಡಿ.ಬೈರಿಕಟ್ಟೆ, ಉಪಾಧ್ಯಕ್ಷ ರಾಜೇಶ್ ಬೊಲ್ಲುಕಲ್ಲು, ಕೋಶಾಧಿಕಾರಿ ನಿರ್ಮಲ, ಜೊತೆ ಕಾರ್ಯದರ್ಶಿ ಸುನೀತಾ ಕೆ, ಸಾಂಸ್ಕೃತಿಕ ಕಾರ್ಯದರ್ಶಿ ವೀರೇಂದ್ರ ಎಮ್ ಸಿದ್ದಕಟ್ಟೆ ಹಾಗೂ ಹಿರಿಯ ,ಕಿರಿಯ ವಕೀಲರು ಭಾಗವಹಿಸಿದರು.
ಮಂಗಳೂರು ನಗರದ ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷ : ನಗರವಾಸಿಗಳಲ್ಲಿ ಆತಂಕ..!
ಮಂಗಳೂರು: ಮಂಗಳೂರು ನಗರದಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿದ್ದು ನಗರವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಮಂಗಳೂರು ನಗರದ ಕದ್ರಿ , ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ರಾತ್ರಿ ಹಗಲು ಸುತ್ತಾಡುತ್ತಿದ್ದು ಸ್ಥಳಿಯ ಜನ ಸಹಜವಾಗಿಯೇ ಆತಂಕ್ಕೀಡಾಗಿದ್ದಾರೆ.
ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ , ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ. ರಾತ್ರಿ ವೇಳೆ ಕಾಡುಕೋಣಗ ಸಂಚಾರ ಜೋರಾಗಿಯೇ ಇದ್ದು ಸ್ಥಳೀಯ ಸಿಸಿಟಿವಿಯಲ್ಲಿ ಚಲನವಲನ ದಾಖಲಾಗಿದೆ. ಅರಣ್ಯ ಇಲಾಖಾ ಸಿಬಂದಿ ಮತ್ತು ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ.
ಸೋಮವಾರ ಹಗಲಿನಲ್ಲಿ ಸಹ ಕೋಣ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುವುದರಿಂದ ಅರಣ್ಯ ಇಲಾಖೆ ರಾತ್ರಿಗಾಗಿ ಕಾದು ಕಾರ್ಯಚರಿಸುವುದಾಗಿ ಮಾಹಿತಿ ನೀಡಿದೆ.
ಸ್ಥಳೀಯ ಮಂಗಳೂರು ನಗರ ಪಾಲಿಕೆಯ ಸದಸ್ಯರಾದ ಮನೋಹರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಿಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಡೌನ್ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ಕಾಡುಕೋಣಗಳು ಲಗ್ಗೆ ಇಟ್ಟಿದ್ದುವು, ಇದೀಗ ಮೂರನೇ ಮಾಡಿ ನಗರದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ.