ಶ್ರೀ ಕ್ಷೇತ್ರ ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ನಿಧನ..!
Twitter
Facebook
LinkedIn
WhatsApp
ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಲತಾ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದೆ ಎಂದು ವರದಿಯಾಗಿದೆ.
ಕಳೆದ 50 ವರ್ಷಗಳಿಂದ ಲತಾ ಆನೆ ದೇವರ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಶಿವರಾತ್ರಿ ದಿನವೇ ಲತಾ ಮೃತಪಟ್ಟಿದ್ದು, ಸ್ವಾಮಿ ಮಂಜುನಾಥನ ಭಕ್ತರಿಗೆ ತೀವ್ರ ದು:ಖವನ್ನುಂಟು ಮಾಡಿದೆ. ಶುಕ್ರವಾರ ಸಂಜೆ ಧರ್ಮಸ್ಥಳದಲ್ಲಿ ಲತಾ ಆನೆಯ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಧರ್ಮಸ್ಥಳದಲ್ಲೇ ಹುಟ್ಟಿ ಬೆಳೆದಿರುವ ಲತಾ ಆನೆ ಪ್ರತಿ ಕಳೆದ 50 ವರ್ಷಗಳಿಂದ ಲತಾ ಆನೆ ಧರ್ಮಸ್ಥಳದ ಜಾತ್ರಾ ಮಹೋತ್ಸವ, ಲಕ್ಷದೀಪ, ದೇವರ ಉತ್ಸವಗಳಲ್ಲಿ ಗಾಭೀರ್ಯದಿಂದ ಹೆಜ್ಜೆಯ ಮೂಲಕ ಭಕ್ತರ ಗಮನ ಸೆಳೆದಿದ್ದಳು. ಧರ್ಮಸ್ಥಳದಲ್ಲಿರುವ ಮೂರು ಆನೆಗಳ ಪೈಕಿ ಲತಾ ಆನೆ ಹಿರಿಯವಳಾಗಿದ್ದಳು. ಈಕೆಯೇ ಲಕ್ಷ್ಮೀ ಹಾಗೂ ಶಿವಾನಿ ಆನೆಗಳಿಗೆ ಮಾರ್ಗದರ್ಶಕಿಯಾಗಿದ್ದಳು.