ಕೊನೆಯ ಎಸೆತದಲ್ಲಿ ಗೆದ್ದ ಶ್ರೀಲಂಕಾ; ರೋಚಕ ವಿಡಿಯೋ ವೈರಲ್!

ಗುರುವಾರ ಏಷ್ಯಾಕಪ್ 2023 ಸೂಪರ್-4ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ (Pakistan vs Sri Lanka) ತಂಡಗಳು ಮುಖಾಮುಖಿ ಆಗಿದ್ದವು. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಶ್ರೀಲಂಕಾ ಎರಡು ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಶನಕಾ ಪಡೆ ಏಷ್ಯಾಕಪ್ 2023 ಫೈನಲ್ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಭಾರತ ವಿರುದ್ಧ ಕಾದಾಡಲಿದೆ. ಮಳೆ ಬಾಧಿತ ಪಂದ್ಯದಲ್ಲಿ ಲಂಕಾಗೆ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಯ ಹಂತದಲ್ಲಿ ದೊಡ್ಡ ಡ್ರಾಮವೇ ನಡೆದು ಹೋಯಿತು.
ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಉಭಯ ತಂಡಗಳಿಗೆ ತಲಾ 42 ಓವರ್ ಅನ್ನು ನಿಗದಿ ಪಡಿಸಲಾಗಿತ್ತು. ಶ್ರೀಲಂಕಾ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 12 ರನ್ ಬೇಕಾಗಿದ್ದವು. 5 ವಿಕೆಟ್ ಕಳೆದುಕೊಂಡಿತ್ತು. 41ನೇ ಓವರ್ನ ಶಾಹೀನ್ ಶಾ ಅಫ್ರಿದಿ ಬೌಲಿಂಗ್ನಲ್ಲಿ ಲಂಕಾ 2 ವಿಕೆಟ್ ಕಳೆದುಕೊಳ್ಳುವ ಜೊತೆಗೆ ಕಲೆಹಾಕಿದ್ದು ಕೇವಲ 4 ರನ್. ಹೀಗಾಗಿ ಕೊನೆಯ ಓವರ್ನಲ್ಲಿ 8 ರನ್ ಬೇಕಾಯಿತು. ಬೌಲಿಂಗ್ ಮಾಡಿದ್ದು ಝಮಾನ್ ಖಾನ್.
Go big, or go home ??
— Disney+ Hotstar (@DisneyPlusHS) September 14, 2023
Sri Lanka takes that spot in the finals as they end Pakistan's journey in this tournament ??
Watch #AsiaCup2023 only on #DisneyPlusHotstar, free on the mobile app.#PAKvSL #FreeMeinDekhteJaao #AsiaCupOnHotstar #Cricket pic.twitter.com/PFFTuwo2CO
ಮೊದಲ ಎಸೆತದಲ್ಲಿ ಪ್ರಮೋದ್ ಒಂದು ರನ್ ಗಳಿಸಿದರೆ, ಎರಡನೇ ಎಸೆತವನ್ನು ಅಸಲಂಕ ಡಾಟ್ ಮಾಡಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತಷ್ಟೆ. ನಾಲ್ಕನೇ ಎಸೆತದಲ್ಲಿ ಪ್ರಮೋದ್ ರನೌಟ್ಗೆ ಬಲಿಯಾದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ 6 ರನ್ ಬೇಕಾಯಿತು. ಐದನೇ ಎಸೆತದಲ್ಲಿ ಅಸಲಂಕ ಚೆಂಡನ್ನು ಬೌಂಡರಿಗೆ ಅಟ್ಟಿದರು. 6ನೇ ಎಸೆತದಲ್ಲಿ ಎರಡು ರನ್ ಕಲೆಹಾಕುವ ಮೂಲಕ ಲಂಕಾ ರೋಚಕ ಜಯ ಕಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಶಫಿಕ್ 69 ಎಸೆತಗಳಲ್ಲಿ 52 ರನ್ ಗಳಿಸಿದರು. ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಮೊಹಮ್ಮದ್ ರಿಝ್ವಾನ್ 73 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿದರು. ಇಫ್ತಿಖರ್ ಅಹ್ಮದ್ 40 ಎಸೆತಗಳಲ್ಲಿ 47 ರನ್ ಗಳಿಸಿದರು. ಶ್ರೀಲಂಕಾ ಪರ ಮಥೀಶಾ ಪಥಿರನಾ 3 ಹಾಗೂ ಪ್ರಮೋದ್ 2 ವಿಕೆಟ್ ಪಡೆದರು.
ಡಕ್ವರ್ತ್ ಲುಯಿಸ್ ನಿಯಮದ ಪ್ರಕಾರ, ಲಂಕಾಕ್ಕೆ ಗೆಲ್ಲಲು 42 ಓವರ್ಗಳಲ್ಲಿ 252 ರನ್ಗಳ ಟಾರ್ಗೆಟ್ ನೀಡಲಾಯಿತು. ಉತ್ತಮ ಆರಂಭ ಪಡೆದುಕೊಳ್ಳದಿದ್ದರೂ ಕುಸಲ್ ಮೆಂಡಿಸ್ 87 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಜಯಕ್ಕೆ ಹೋರಾಡಿದರು. ಸದೀರಾ ಸಮರವಿಕ್ರಮ 51 ಎಸೆತಗಳಲ್ಲಿ 48 ಬಾರಿಸಿದರು. ಕೊನೆಯ ವರೆಗೂ ಬ್ಯಾಟಿಂಗ್ ಮಾಡಿದ ಚರಿತಾ ಅಸಲಂಕ 47 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಗೆಲುವು ತಂದುಕೊಟ್ಟರು. ಪಾಕ್ ಪರ ಇಫ್ತಿಖರ್ 3 ಹಾಗೂ ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದರು.