ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Kolar: ಆಡಿ ಕಾರು ಮರಕ್ಕೆ ಡಿಕ್ಕಿ, ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

Twitter
Facebook
LinkedIn
WhatsApp
kolar audi car accident students

Kolar: ಆಡಿ ಕಾರೊಂದು (Audi Car) ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾದ ಪರಿಣಾಮ ಮೂವರು ವಿದ್ಯಾರ್ಥಿಗಳು (Students) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಬಚಾವಾದ ಘಟನೆ ಕೋಲಾರ (Kolar) ಹೊರವಲಯದಲ್ಲಿ ನಡೆದಿದೆ.

ಕೋಲಾರ ‌ಹೊರವಲಯದ ಸಹಕಾರ ನಗರದ ಬಳಿ ಭೀಕರ ಅಪಘಾತ ಸಂಭವಿಸಿದೆ. ಆಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಪವಾಡ ರೀತಿಯಲ್ಲಿ ಬಜಾವ್ ಆಗಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ (Accident) ಸಂಭವಿಸಿದ್ದು ಕಾರ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ (Death) ಘಟನೆ ಕೋಲಾರ ‌ಹೊರವಲಯದ ಸಹಕಾರ ನಗರದ ಬಳಿ ನಡೆದಿದೆ. ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್, ಕೋಲಾರ ಜಿಲ್ಲೆ ಬಂಗಾರಪೇಟೆಯ ನಿಶ್ಚಲ್ ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಮತ್ತೋರ್ವ ಆಶ್ಚರ್ಯ ರೀತಿಯಲ್ಲಿ ಬಜಾವ್ ಆಗಿದ್ದಾರೆ. ಅದೃಷ್ಟವಶಾತ್​ ಬಂಗಾರಪೇಟೆಯ ಸಾಯಿ ಗಗನ್ ದುರಂತದಲ್ಲಿ ಬಚಾವ್ ಆಗಿದ್ದಾರೆ.

ಮೃತಪಟ್ಟ ಮೂವರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿಗಗನ್ ಸೋದರಿ ಮದುವೆ ಆಮಂತ್ರಣ ಹಂಚಲು ಸ್ನೇಹಿತರೆಲ್ಲ ಕಾರಿನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಯಿ ಸಾವಿನಿಂದ ಬೇಸತ್ತು ರೈಲಿಗೆ ತಲೆ ಕೊಟ್ಟು ಅಕ್ಕ, ತಮ್ಮ ಆತ್ಮಹತ್ಯೆ..!

ಶಿಡ್ಲಘಟ್ಟ(ಆ.03): ತಾಯಿ ನಿಧನರಾದ ಕೊರಗಿನಿಂದ ಹೊರಬರಲಾಗದೆ ಯುವತಿ ಹಾಗೂ ಆಕೆಯ ಕಿರಿಯ ಸಹೋದರ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಪಟ್ಟಣದ ರೈಲು ನಿಲ್ದಾಣದಿಂದ ಸುಮಾರು ಒಂದು ಕಿಲೋ ಮೀಟರ್‌ ದೂರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಇಲ್ಲಿಯ ಪ್ರೇಮ ನಗರದ ನಿವಾಸಿ ನಟರಾಜ್ ಎಂಬುವವರ ಪುತ್ರಿ ಶಿಲ್ಪ ಅಲಿಯಾಸ್ ನವ್ಯ (23) ಹಾಗೂ ಆಕೆಯ ಸಹೋದರ ಪ್ರಭು (20) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

4 ತಿಂಗಳ ಹಿಂದೆ ನಟರಾಜ್ ಅವರ ಪತ್ನಿ ಲಲಿತಮ್ಮ ಮೃತಪಟ್ಟಿದ್ದರು. ಆದರೆ ತಾಯಿ ಮೃತಪಟ್ಟ ಕೊರಗಿನಿಂದ ನವ್ಯ ಹಾಗೂ ಪ್ರಭು ಹೊರ ಬಂದಿರಲಿಲ್ಲ. ತಾಯಿ ಮೃತಪಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಗುರುವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಮೂಲಕ ಕೋಲಾರಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ಇಬ್ಬರೂ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೃದ್ಧೆ ಮೇಲೆ ಅತ್ಯಾಚಾರ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ನವದೆಹಲಿ: 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 80 ವರ್ಷದ ಹಾಸಿಗೆ ಹಿಡಿದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯು “ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಗೆ ಹೊಡೆತ” ಎಂದು ನ್ಯಾಯಾಲಯ ತೀರ್ಪು ನೀಡಿದೆ. ತೀಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆಂಚಲ್ ಅವರು ವೃದ್ಧೆಯ ಸಾಕ್ಷ್ಯವನ್ನು ಗಮನಿಸಿದ್ದಾರೆ. ತನ್ನನ್ನು ಬಿಟ್ಟುಬಿಡುವಂತೆ ಆಕೆ ಅತ್ಯಾಚಾರಿಯ ಬಳಿ ಮನವಿ ಮಾಡಿದರೂ ಆತ ಸುಮ್ಮನಾಗಲಿಲ್ಲ. ಆ ವೃದ್ಧೆಯ ಕೈಗಳನ್ನು ಕಟ್ಟಿ ಅವನು ತನ್ನ ಲೈಂಗಿಕ ಕಾಮವನ್ನು ಪೂರೈಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎಂದು ಸಾಕ್ಷಿಗಳು ಸಾಬೀತುಪಡಿಸಿವೆ.

ಈ ಘಟನೆಯ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮುಖ, ಕೈ ಮತ್ತು ಎದೆಯ ಮೇಲೆ ಗಾಯಗಳಾಗಿರುವುದು ಕಂಡುಬಂದವು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಅಪರಾಧಿಯನ್ನು 30 ವರ್ಷದ ಅಂಕಿತ್ ಅಲಿಯಾಸ್ ಮೊಗ್ಲಿ ಎಂದು ಗುರುತಿಸಲಾಗಿದ್ದು, ಈತ ಅತ್ಯಾಚಾರ, ಮನೆ ಅತಿಕ್ರಮಣ, ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ.

ಪ್ರಾಸಿಕ್ಯೂಷನ್ ಪ್ರಕಾರ, ಅಪರಾಧಿಯು ವೃದ್ಧೆಯ ಮನೆಗೆ ಪ್ರವೇಶಿಸಿದಾಗ ಆಕೆ ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದಳು. ಆತ ವೃದ್ಧೆಯನ್ನು ಥಳಿಸಿ, ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.

ಈ ಅತ್ಯಾಚಾರದ ಅಪರಾಧಕ್ಕಾಗಿ ನ್ಯಾಯಾಲಯ ಅಪರಾಧಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ನ್ಯಾಯಾಲಯವು ಮನೆಗೆ ಅತಿಕ್ರಮಣವಾಗಿ ನುಗ್ಗಿದ್ದಕ್ಕೆ 5 ವರ್ಷ ಜೈಲು ಶಿಕ್ಷೆ, ಕಳ್ಳತನಕ್ಕಾಗಿ 1 ವರ್ಷ ಶಿಕ್ಷೆ ಮತ್ತು ನೋವುಂಟು ಮಾಡಿದ್ದಕ್ಕಾಗಿ 6 ತಿಂಗಳು ಶಿಕ್ಷೆ ವಿಧಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ