ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ!

Twitter
Facebook
LinkedIn
WhatsApp
ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ!

ಹಿರಿಯ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಹಲವು ವಿವಾದ ಮಾಡಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಸಾಯಲು ಮಹೇಶ್ ಭಟ್ ಕೂಡ ಕಾರಣ ಎಂಬ ಆರೋಪಗಳು ಎದುರಾಗಿದ್ದವು. ರಿಯಾ ಚಕ್ರವರ್ತಿಗೆ ಕುಮ್ಮಕ್ಕು ಕೊಟ್ಟಿದ್ದರ ಹಿಂದೆ ಇವರ ಕೈವಾಡ ಇದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ಮಹೇಶ್ ಭಟ್ (Alia Bhatt) ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 2’ಗೆ ತೆರಳಿದ್ದ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಗ್ ಬಾಸ್​ನಲ್ಲಿದ್ದ ಮಹಿಳಾ ಸ್ಪರ್ಧಿ ಜೊತೆ ಅವರು ನಡೆದುಕೊಂಡಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ.

ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ!

‘ಹಿಂದಿ ಬಿಗ್ ಬಾಸ್’ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್​ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ತೆರಳಿ ಮನಿಶಾ ರಾಣಿ ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಇದನ್ನು ಟೀಕಿಸಿದ್ದಾರೆ.

ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳ ಮನೆ ಮಂದಿ ದೊಡ್ಮನೆ ಪ್ರವೇಶಿಸುತ್ತಿದ್ದಾರೆ. ಮಹೇಶ್ ಭಟ್ ಮಗಳು ಪೂಜಾ ಭಟ್ ಕೂಡ ಬಿಗ್ ಬಾಸ್ ಮನೆ ಒಳಗೆ ಇದ್ದಾರೆ. ಹೀಗಾಗಿ, ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಅವರು ಮಗಳ ಜೊತೆ ಮಾತುಕತೆ ನಡೆಸುವ ಬದಲು ಮನಿಶಾ ರಾಣಿ ಕೈ ಹಿಡಿದು ಕುಳಿತಿದ್ದಾರೆ.

ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ!

ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಮಹೇಶ್ ಭಟ್ ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಮಹೇಶ್ ಅವರು ಮನಿಶಾ ರಾಣಿ ಜೊತೆ ಆಪ್ತವಾಗಿರುವುದನ್ನು ಬೇರೆ ರೀತಿಯುಲ್ಲಿ ಅರ್ಥೈಸಲಾಗಿದೆ. ಮನಿಶಾ ಮಗಳ ಸಮಾನರು. ಆ ರೀತಿಯಲ್ಲೇ ಮಹೇಶ್ ಭಟ್ ಅವರು ನೋಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಮಹೇಶ್ ಭಟ್ ಹಾಗೂ ರಿಯಾ ಚಕ್ರವರ್ತಿ ಒಟ್ಟಾಗಿದ್ದ ಫೋಟೋಗಳು ಈ ಮೊದಲು ವೈರಲ್ ಆಗಿತ್ತು. ಸುಶಾಂತ್​ನ ಜೀವನ ಕೊನೆಗೊಳಿಸುವಂತೆ ರಿಯಾಗೆ ಅವರೇ ಡೀಲ್ ನೀಡಿದ್ದರು ಎಂದು ನೆಟ್ಟಿಗರು ಆರೋಪಿಸಿದ್ದರು.

Salman Khan: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

ನಟ ಸಲ್ಮಾನ್​ ಖಾನ್​ (Salman Khan) ಅವರು ಸಿನಿಮಾ ಮಾತ್ರವಲ್ಲದೇ ಬಿಗ್​ ಬಾಸ್​ ನಿರೂಪಣೆ ಮಾಡುವ ಮೂಲಕವೂ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಅವರು ಈ ವರ್ಷದಿಂದ ಬಿಗ್​ ಬಾಸ್​ ಒಟಿಟಿ (Bigg Boss OTT season 2) ಆವೃತ್ತಿಗೂ ನಿರೂಪಕನಾಗಿದ್ದಾರೆ. ಕಳೆದ ವರ್ಷ ಕರಣ್​ ಜೋಹರ್​ ಅವರು ‘ಬಿಗ್​ ಬಾಸ್​ ಹಿಂದಿ ಒಟಿಟಿ’ ಶೋ ನಡೆಸಿಕೊಟ್ಟಿದ್ದರು. ಈ ಬಾರಿ ಸಲ್ಮಾನ್​ ಖಾನ್​ ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ನಿಭಾಯಿಸುತ್ತಿದ್ದಾರೆ. ಆದರೆ ಅವರು ಶೋನಿಂದ ಅರ್ಧಕ್ಕೆ ಹೊರನಡೆದಿದ್ದಾರೆ ಎಂಬ ವದಂತಿ ಹರಡಿತ್ತು. ಅದರಿಂದ ಸಲ್ಲು ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಆದರೆ ಸಲ್ಮಾನ್​ ಖಾನ್​ ಅವರು ಮತ್ತೆ ಬಿಗ್​ ಬಾಸ್ (Bigg Boss)​ ಒಟಿಟಿ ಶೋಗೆ ವಾಪಸ್​ ಬಂದಿದ್ದಾರೆ ಎಂಬುದು ಈಗ ಖಚಿತವಾಗಿದೆ.

ಸಲ್ಮಾನ್​ ಖಾನ್​ ಅವರಿಗೆ ಬಹಳ ಬೇಗ ಕೋಪ ಬರುತ್ತದೆ ಎಂಬುದು ನಿಜ. ಅನೇಕ ಸಂದರ್ಭಗಳಲ್ಲಿ ಅವರು ಕೂಗಾಡಿದ್ದುಂಟು. ಬಿಗ್​ ಬಾಸ್​ ಸ್ಪರ್ಧಿಗಳು ಮಿತಿ ಮೀರಿ ವರ್ತಿಸಿದಾಗ ಸಲ್ಮಾನ್​ ಖಾನ್​ ಅವರು ಸಿಟ್ಟು ಪ್ರದರ್ಶಿಸಿದ ಉದಾಹರಣೆ ಸಾಕಷ್ಟಿದೆ. ಇತ್ತೀಚೆಗೆ ಅವರು ಬಿಗ್​ ಬಾಸ್​ ಒಟಿಟಿ ಶೋ ನಿರೂಪಣೆ ಮಾಡುವಾಗ ಸಿಗರೇಟ್​ ಹಿಡಿದುಕೊಂಡಿದ್ದರು. ಅಲ್ಲದೇ, ಅವರ ಬಾಯಿಯಿಂದ ಕೆಲವು ಅಕ್ಷೇಪಾರ್ಹ ಪದಗಳು ಬಂದಿದ್ದವು. ನಂತರ ಅವರು ನಿರೂಪಣೆಯಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಹಬ್ಬಿತು.

ಈ ಘಟನೆ ಕುರಿತಂತೆ ಸುದ್ದಿ ಸಂಸ್ಥೆಯೊಂದಕ್ಕೆ ಸಲ್ಮಾನ್​ ಖಾನ್​ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಅಭಿಮಾನಿಗಳೇ ನನ್ನ ಪಾಲಿನ ಸಾಧನೆ ಮತ್ತು ಹೆಮ್ಮೆ. ಇಂದು ನಾನು ಏನಾಗಿದ್ದೇನೂ ಅದು ಅವರಿಂದಲೇ. ನನಗೆ ಕೋಪ ಬರುತ್ತದೆ ಮತ್ತು ನಾನು ಶೋನಿಂದ ಕೆಲವೊಮ್ಮೆ ಹೊರಬರುತ್ತೇನೆ ಎಂಬುದು ನಿಜ. ಆದರೆ ವೀಕೆಂಡ್​ ಕಾ ವಾರ್​ ಎಪಿಸೋಡ್​ನಲ್ಲಿ ನನ್ನನ್ನು ನೋಡಲು ತಾಳ್ಮೆಯಿಂದ ಕಾಯುವ ಅಭಿಮಾನಿಗಳಿಗಾಗಿ ನಾನು ವಾಪಸ್​ ಬರುತ್ತೇನೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಆ ಹಿನ್ನೆಲೆಯಲ್ಲಿ ಅವರು ಬುಲೆಟ್​ ಪ್ರೂಫ್​ ಕಾರುಗಳನ್ನು ಖರೀದಿಸಿದ್ದಾರೆ. ತಮ್ಮ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಂತ ಸಿನಿಮಾ ಮತ್ತು ನಿರೂಪಣೆ ಕೆಲಸಗಳಿಗೆ ಅವರು ಬ್ರೇಕ್​ ಹಾಕಿಲ್ಲ. ಎಂದಿನಂತೆ ಅವರು ಈ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಟೈಗರ್​ 3’ ಸಿನಿಮಾಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist