ಕಗ್ಗಂಟಾದ ದಕ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ; ಸೊರಕೆ, ಪದ್ಮರಾಜ್ ವಿಷಯದಲ್ಲಿ ನಾಯಕರಲ್ಲಿ ಭಿನ್ನಾಭಿಪ್ರಾಯ. ಕಿರಣ್ ಬುಡ್ಲೇ ಗುತ್ತು ಲೋಕಸಭೆ ಅಭ್ಯರ್ಥಿ?
Twitter
Facebook
LinkedIn
WhatsApp
ಮಂಗಳೂರು:ಸೊರಕೆ, ಪದ್ಮರಾಜ್ ಅಭ್ಯರ್ಥಿತನಕ್ಕೆ ಪಕ್ಷದಲ್ಲಿ ಆಂತರಿಕ ವಲಯದಲ್ಲಿ ಹಾಗೂ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಲ್ಲಿ ಪರಸ್ಪರ ವ್ಯಾಪಕ ವಿರೋಧ ಇದೆ ಎಂದು ತಿಳಿದುಬಂದಿದೆ. ಎರಡು ಅಭ್ಯರ್ಥಿಗಳ ಪರವಾಗಿ ನಾಯಕರುಗಳು ಬಣವಾಗಿ ವಿಭಜನೆಗೊಂಡಿದ್ದಾರೆ ಎಂದು ಕಾಂಗ್ರೆಸ್ನ ಆಂತರಿಕ ಮೂಲಗಳು ಹೇಳಿಕೊಂಡಿವೆ.
ಈ ನಡುವೆ ಮೂರನೇ ಅಭ್ಯರ್ಥಿ ಕಿರಣ್ ಬುಡ್ಲೇ ಗುತ್ತು ಪರ ಹೈಕಮಾಂಡ್ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಮಂಗಳೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಗ್ಗಂಟಾದ ವಿಷಯ ಪರಿಗಣಿಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಬಿಟ್ಟು ಇನ್ನೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾರ್ಯಕರ್ತರು ಒಲವುಳ್ಳವರಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡು ಅಭ್ಯರ್ಥಿ ಗಳಿಗೆ ಪಕ್ಷದಲ್ಲಿ ಬಹಳಷ್ಟು ವಿರೋಧ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಈ ನಡುವೆ ಯುವ ನಾಯಕ, ಸುಳ್ಯ ಮೂಲದ ಕಿರಣ್ ಬುಡ್ಲೆ ಗುತ್ತು ಹೆಸರು ಹೈಕಮಾಂಡ್ ನ ಗಂಭೀರ ಪರಿಶೀಲನೆಯಲ್ಲಿ ಇದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.