ಗುರುವಾರ, ಮಾರ್ಚ್ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಟೊಮ್ಯಾಟೋ ಮೇಲೆ ಕಣ್ಣು ಹಾಕಿದ ಉರ್ಫಿ ಜಾವೇದ್!

Twitter
Facebook
LinkedIn
WhatsApp
42 1

ಸಿಕ್ಕ ಸಿಕ್ಕ ವಸ್ತುಗಳಲ್ಲೇ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ (Urfi Javed)  ಈ ಬಾರಿ ಟೊಮ್ಯಾಟೋ ಮೇಲೆ ಕಣ್ಣು ಹಾಕಿದ್ದಾರೆ. ಟೊಮ್ಯಾಟೋ ಬೆಲೆ ಗಗನಕ್ಕೇರಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಟೊಮ್ಯಾಟೋದಿಂದ (Tomato) ಮಾಡಿದ ಕಿವಿಯೋಲೆಯನ್ನು ಅವರು ಧರಿಸಿದ್ದಾರೆ. ಈ ಮೂಲಕ ಅದ್ಯಾವ ಸಂದೇಶ ಸಾರಿದ್ದಾರೋ ಅವರನ್ನೇ ಕೇಳಬೇಕು.

ಮೊನ್ನೆಯಷ್ಟೇ ಉರ್ಫಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದು, ಅದರಿಂದಾಗಿ ಕಣ್ಣಿನ ಕೆಳಭಾಗ ನೋವುಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಕಣ್ಣಿನ ಸುತ್ತಲೂ ಒಂದು ರೀತಿಯ ಅಲರ್ಜಿಯಾಗಿದ್ದು, ಅದನ್ನು ಮೇಕಪ್ ನಿಂದ ಮುಚ್ಚಲೂ ಸಾಧ್ಯವಾಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಒಂದು ಕಡೆ ನಾನಾ ಅಡೆತಡೆಗಳು ಮತ್ತೊಂದು ಕಡೆ ಕೆಲಸವಿಲ್ಲದೇ ನಿರುದ್ಯೋಗಿ ಆಗಿರುವ ಕುರಿತು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಅವರು ಇದೀಗ ಕೆಲಸ ಹುಡುಕುತ್ತಿದ್ದಾರಂತೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ನಾನು ಫೇಮಸ್ ಆಗಿದ್ದೇನೆ, ಜನರು ನನ್ನನ್ನು ಗುರುತಿಸುತ್ತಾರೆ ಎಲ್ಲವೂ ನಿಜ. ಆದರೆ, ನನಗೆ ಕೆಲಸವಿಲ್ಲ (Work). ನನ್ನೊಂದಿಗೆ ಕೆಲಸ ಮಾಡಲು ಯಾರೂ ಒಪ್ಪುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ತಾವು ಕೆಲಸ ಮಾಡಲು ರೆಡಿಯಾಗಿದ್ದು, ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಲು ತಯಾರಿದ್ದರೂ, ನನ್ನೊಂದಿಗೆ ಕೆಲಸ ಮಾಡಲು ಯಾರೂ ಸಿದ್ದರಿಲ್ಲ. ಹಾಗಾಗಿ ನನಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗಾಗಿ ಯಾರಾದರೂ ಕೆಲಸ ಸೃಷ್ಟಿ ಮಾಡಿದರೆ ಹೋಗುವುದಾಗಿಯೂ ತಿಳಿಸಿದ್ದಾರೆ.

ಈ ಹಿಂದೆ ಉರ್ಫಿಗಾಗಿ ಕಾಸ್ಟ್ಯೂಮ್ (Costume) ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ. ಇತ್ತ ಮನೆಯಲ್ಲೂ ಗೌರವವಿಲ್ಲ, ಬೀದಿಯಲ್ಲೂ ಇಲ್ಲ. ಈ ವಿಚಾರವಾಗಿ ತಮಗೆ ತುಂಬಾ ನೋವಾಗಿದೆ ಎಂದಿದ್ದಾರೆ ಉರ್ಫಿ.

ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ತೇಜ್ ಕಾಫಿ ಡೇಟ್

ಟಾಲಿವುಡ್ (Tollywood) ಯಂಗ್ ಹೀರೋ ವರುಣ್ ತೇಜ್ (Varun Tej) ಅವರು ಇತ್ತೀಚಿಗೆ ಬಹುಕಾಲದ ಗೆಳತಿ ಲಾವಣ್ಯ (Lavanya Tripathi) ಜೊತೆ ಎಂಗೇಜ್ ಆಗುವ ಮೂಲಕ ಫೀಮೆಲ್ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಈಗ ಭಾವಿ ಪತ್ನಿ ಜೊತೆ ಮೆಗಾಸ್ಟಾರ್ ಮನೆಮಗ ಕಾಫಿ ಡೇಟ್ ಹೋಗಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತುವ ಮೂಲಕ ಲಾವಣ್ಯ- ವರುಣ್ ತೇಜ್ ಎಂಗೇಜ್ ಆಗಿದ್ದರು. ಈಗ ಈ ಲವ್ ಬರ್ಡ್ಸ್ ಫಾರಿನ್‌ಗೆ ಹಾರಿದ್ದಾರೆ. ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ಕಾಫಿ ಡೇಟ್ ಮಾಡ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ವೇಕೆಷನ್‌ಗೆ ವರುಣ್ ಸಹೋದರಿ ನಿಹಾರಿಕಾ ಕೂಡ ಸಾಥ್ ನೀಡಿದ್ದಾರೆ.

ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು `ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂ’ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು.

ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. 

ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.

ಇನ್ನೂ ನಿಹಾರಿಕಾ ಕೊನಿಡೆಲಾ (Niharika Konidela) ಅವರು ಇತ್ತೀಚಿಗೆ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಸದ್ಯ ನಿಹಾರಿಕಾ, ಚಿತ್ರರಂಗದಲ್ಲಿ ನಟಿ, ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist