Kavya Maran: ಸನ್‍ರೈಸರ್ಸ್ ಹೈದರಾಬಾದ್ ಸಹಮಾಲೀಕರಾದ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ
ಜೋಹನ್ಸ್ ಬರ್ಗ್: ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಫ್ರಾಂಚೈಸ್ ಮಾಲೀಕರಾದ ಕಲಾನಿಧಿ ಮಾರನ್ ಅವರ ಮಗಳು ಕಾವ್ಯ ಮಾರನ್ (Kavya Maran) ಐಪಿಎಲ್‍ನ (IPL) ಬಿಡ್ಡಿಂಗ್ ವೇಳೆ ಕಾಣಿಸಿಕೊಂಡು ಗಮನಸೆಳೆದಿದ್ದರು. ಆ ಬಳಿಕ ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 (SA20) ಲೀಗ್‍ನಲ್ಲಿ ಕಾವ್ಯ ಮಾರನ್‍ಗೆ ಪ್ರೇಕ್ಷಕನೋರ್ವ ಮದುವೆ ಪ್ರಸ್ತಾಪವಿಟ್ಟಿದ್ದಾನೆ.
ದಕ್ಷಿಣ ಆಫ್ರಿಕಾ ಟಿ20 ಲೀಗ್‍ನಲ್ಲಿ ಆಡುತ್ತಿರುವ ತಂಡ ಸನ್‍ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಸಹಮಾಲೀಕರಾದ ಕಾವ್ಯ ಮಾರನ್‍ರನ್ನು ನೋಡಿ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕನೋರ್ವ Will You Marry Me ಎಂಬ ಪೋಸ್ಟರ್ ಹಿಡಿದು ಮದುವೆ ಪ್ರಸ್ತಾಪವಿಟ್ಟಿದ್ದಾನೆ. ಈ ಮೂಲಕ ಐಪಿಎಲ್‍ನಲ್ಲಿ ಲಕ್ಷಾಂತರ ಹುಡಗರ ಮನಸ್ಸು ಕದ್ದಿದ್ದ ಚೆಲುವೆ ಇದೀಗ ಇಂಟರ್‌ನ್ಯಾಷನಲ್ ಕ್ರಶ್ ಆಗಿದ್ದಾರೆ.
ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾವ್ಯ ಮಾರನ್ (Kavya Maran) ಕಾಣಿಸಿಕೊಂಡಿದ್ದರು. ಜೊತೆಗೆ ಐಪಿಎಲ್ ಹರಾಜು ವೇಳೆ ಕೂಡ ಕಾವ್ಯ ಮಾರನ್ ಆ್ಯಕ್ಟಿವ್ ಆಗಿದ್ದರು.
ಕಾವ್ಯ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರು ಸನ್ ಟಿವಿ ನೆಟ್‍ವರ್ಕ್‍ನ ಮಾಲೀಕರಾಗಿದ್ದು, ಟಿವಿ ಚಾನೆಲ್ ಮತ್ತು ಎಫ್‍ಎಂ ಚಾನೆಲ್ ಹೊಂದಿದ್ದಾರೆ. ಕಾವ್ಯ ಮಾರನ್ ಚೆನ್ನೈನ ಸ್ಟೆಲಿಯಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಪದವಿ ಬಳಿಕ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿದ್ದಾರೆ. ಆ ನಂತರ ತಮ್ಮ ಸನ್ ಟಿವಿಯಲ್ಲೇ ಒಂದು ವರ್ಷ ಕೆಲಸ ಮಾಡಿ, ಸನ್ ಟಿವಿ ನೆಟ್‍ವರ್ಕ್ ಬೋರ್ಡಿನ ನಿರ್ದೇಶಕರಾಗಿದ್ದಾರೆ. ಐಪಿಎಲ್ ಫ್ರಾಂಚೈಸ್‍ನ ಸಹಮಾಲೀಕರಾದ ಉದ್ಯಮ ಜೊತೆ ಕ್ರೀಡಾ ರಂಗದಲ್ಲಿ ಮಿಂಚುತ್ತಿದ್ದಾರೆ.