ಕನ್ನಡ ಕಿರುತೆರೆಯ ಗಟ್ಟಿಮೇಳ (Gattimela) ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durga Parameshwari) ಭೇಟಿ ನೀಡಿದ್ದಾರೆ. ಕರಾವಳಿ ನಟಿ ಅನ್ವಿತಾ ಸಾಗರ್ (Anvitha Sagar) ಜೊತೆ ನಿಶಾ ದಕ್ಷಿಣ ಕನ್ನಡದ ಕಟೀಲಿಗೆ ಬಂದಿದ್ದಾರೆ.
Kateel Durga Parameshwari ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ
ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಮಂಗಳೂರಿಗೆ ಹೋಗಿ ದೇವರ ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಅಲ್ಲಿನ ಆನೆಯ ಜೊತೆ ಸೆಲ್ಫಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ನಟಿಯರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ
ಸಿಂಗರ್, ಡ್ಯಾನ್ಸರ್ ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಹನುಮಂತ (Hanumantha) ಮತ್ತೆ ಹಂಗಾಮಾ ಮಾಡ್ತಿದ್ದಾರೆ. ಅಕುಲ್ ಮಾತು ಹನುಮಂತನ ಡ್ಯಾನ್ಸ್ ನೋಡಿ ಕ್ರೇಜಿ ಸ್ಟಾರ್ ನಕ್ಕರು, ರಚಿತಾ ಒನ್ಸಮೋರ್ ಅಂದ್ರು. ಇದು ಹನುಮಂತನ ಡ್ಯಾನ್ಸ್ ಜೊತೆಗೆ ರಾಕಿಭಾಯ್ ಅವತಾರದಲ್ಲಿ ನೋಡಿ ಖುಷಿ ಪಡುವ ಟೈಮ್. ರಚಿತಾ ರಾಮ್ (Rachita Ram) ತರ ಹುಡುಗಿ ಸಿಗಬೇಕು ಅಂತ ಹನುಮ ಅನೌನ್ಸ್ ಮಾಡಿದ್ದಾನೆ.
ಸಿಂಗರ್ ಆಗಿ ವಾಹಿನಿ ವೇದಿಕೆಗೆ ಎಂಟ್ರಿ ಕೊಟ್ಟ ಹನುಮಂತ ಈಗ ಭರ್ಜರಿ ಬ್ಯಾಚುಲರ್ ಆಗಿ ಮಿಂಚ್ತಿದ್ದಾನೆ. ಹಳ್ಳಿ ಹುಡುಗನ ಮುಗ್ಧತೆಗೆ, ಹಾವೇರಿ ಸೊಗಡಿನ ಮಾತುಗಳಿಗೆ ಕನ್ನಡ ಹೃದಯಗಳು ಮನಸೋತು ಬಹಳ ವರ್ಷಗಳಾಗಿದೆ. ಹನುಮಂತ ಏನು ಮಾಡಿದ್ರು ಚಂದ ಅನ್ನೋ ವಾತಾವರಣ ಈಗ. ಸದ್ಯ ಹನುಮಂತ ವಿಕೇಂಡ್ನಲ್ಲಿ ಆಡಿಯನ್ಸ್ಗೆ ಕಿಕ್ ಕೊಡಲು ರಾಕಿಭಾಯ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಕೆಜಿಎಫ್ ಹಾಡಿಗೆ ಪಾಟ್ನರ್ ಜೊತೆ ಹೆಜ್ಜೆ ಹಾಕಿದ್ದಾನೆ.
ಹನುಮಂತನ ಹಾಡು ಕೇಳಿದ ಜನಕ್ಕೆ ಇವನ ಡ್ಯಾನ್ಸ್ ಕೂಡ ಬಹಳ ಇಷ್ಟ ಆಗಿತು. ಈಗ ಭರ್ಜರಿ ಬ್ಯಾಚುಲರ್ಸ್ ಮೂಲಕ ಮತ್ತಷ್ಟು ಕಮಾಲ್ ಮಾಡ್ತಿದ್ದಾನೆ. ಹನುಮಂತನ ಡ್ಯಾನ್ಸ್ ನೋಡಿದ ಬ್ಯಾಚುಲರ್ ಸದಸ್ಯರು ಸಖತ್ ಎಂಜಾಯ್ ಮಾಡಿದ್ದರು. ರಚಿತಾ ರಾಮ್ ಚಪ್ಪಾಳೆ ತಟ್ಟಿ ನಕ್ಕು ನಲಿದ್ರು. ಹನುಮಂತ ಸದ್ಯ ಡ್ಯಾನ್ಸ್ನಲ್ಲೂ ಸೈ ಅನಿಸಿಕೊಂಡಿದ್ದಾನೆ. ಹೈದನ ಜೊತೆ ಮಾತುಗಾರ ಮಲ್ಲ ಅಕುಲ್ (Akul) ಸೇರಿ ಶೋನ ಕಿಕ್ ಮತ್ತಷ್ಟು ಹೆಚ್ಚಿಸಿದ್ದರು. ರಾಕಿಭಾಯ್ ಲುಕ್ನಲ್ಲಿದ್ದ ಹನುಮಂತ ರಾಕಿಂಗ್ ಸ್ಟಾರ್ (Yash) ಡೈಲಾಗ್ ಹೇಳಿದ. ಆ ಡೈಲಾಗ್ ಸ್ಟೈಲ್ ನೋಡಿ ತುಂಬಾ ಜನ ಎಂಜಾಯ್ ಮಾಡಿದ್ದರು. ಮತ್ತಷ್ಟು ಜನ ಒಳ್ಳೆಯ ಪ್ರಯತ್ನ ಕಣೋ ಹನುಮಂತ ಮಾಡು ಮುಂದೆ ಇನ್ನೂ ಚೆನ್ನಾಗಿ ಮಾಡ್ತೀಯಾ ಅಂತಾ ಜೋಶ್ ತುಂಬಿದ್ದರು.
ರಚಿತಾ ರಾಮ್ (Rachita Ram) ಕೇಳಿದ ಮದುವೆ (Wedding) ಸಮಾಚಾರಕ್ಕೆ ಹನುಮಂತ ಥಟ್ ಅಂತ ಉತ್ತರ ಕೊಟ್ಟ. ಹನುಮನ ಉತ್ತರ ಕೇಳಿ ಖುದ್ದು ರಚಿತಾ ರಾಮ್ ಶಾಕ್ ಆಗಿ ಒಂದು ಸೆಕೆಂಡ್ ಸೈಲೆಂಟ್ ಆದ್ರು. ನಿಮ್ಮ ತರ ಹುಡುಗಿ ಸಿಕ್ಕಿರೆ ಸಾಕು ಅಂತ ಹನುಮಂತ ಹೇಳಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿತ್ತು. ಈ ಉತ್ತರ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಒಟ್ನಲ್ಲಿ ವಿಕೇಂಡ್ನಲ್ಲಿ ಭರ್ಜರಿ ಬ್ಯಾಚುಲರ್ಸ್ ಮೂಲಕ ಒಳ್ಳೆಯ ಮನರಂಜನೆ ಕೊಟ್ಟಿದ್ದಾರೆ. ಹನುಮಂತ ಮತ್ತಷ್ಟು ವಿಭಿನ್ನ ಪ್ರಯತ್ನಗಳಿಗೆ ಸಜ್ಜಾಗ್ತಿದ್ದಾರೆ.