ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Kashmir: ಕಾಶ್ಮೀರದಲ್ಲಿ ಕಳೆದ ಶನಿವಾರ ಕಾಣೆಯಾಗಿದ್ದ ಸೈನಿಕ ಪತ್ತೆ- ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ ; ಕಾಶ್ಮೀರ ಪೊಲೀಸರು

Twitter
Facebook
LinkedIn
WhatsApp
Kashmir: ಕಾಶ್ಮೀರದಲ್ಲಿ ಕಳೆದ ಶನಿವಾರ ಕಾಣೆಯಾಗಿದ್ದ ಸೈನಿಕ ಪತ್ತೆ- ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ ; ಕಾಶ್ಮೀರ ಪೊಲೀಸರು

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ಶನಿವಾರ ಸಂಜೆ ನಾಪತ್ತೆಯಾಗಿದ್ದ ಸೇನಾ ಜವಾನ ಗುರುವಾರ ಪತ್ತೆಯಾಗಿದ್ದು, ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.ನಾಪತ್ತೆಯಾಗಿರುವ ಸೇನಾ ಯೋಧ ಜಾವೇದ್ ಅಹ್ಮದ್ ವಾನಿಯನ್ನು ಕುಲ್ಗಾಮ್ ಪೊಲೀಸರು ಇಂದು ಪತ್ತೆ ಮಾಡಿದ್ದಾರೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಅವರು ಟ್ವೀಟ್‌ ಮಾಡಿದ್ದಾರೆ.

ವೈದ್ಯಕೀಯ ತಪಾಸಣೆಯ ಬಳಿಕ ಯೋಧನ ಜಂಟಿ ವಿಚಾರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.25 ವರ್ಷದ ಜಾವೇದ್ ಅಹ್ಮದ್ ವಾನಿ ಅವರನ್ನು ಲೇಹ್ ಲಡಾಖ್‌ನಲ್ಲಿ ನಿಯೋಜಿಸಲಾಗಿತ್ತು. ಅವರು ಶನಿವಾರ ಸಂಜೆ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಅಸ್ತಲ್ ಗ್ರಾಮದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸಲು ಮನೆಯಿಂದ ಹೊರಟ ನಂತರ ನಾಪತ್ತೆಯಾಗಿದ್ದರು.

2014ರಲ್ಲಿ ಸೇನೆಗೆ ಸೇರಿದ್ದ ಜಾವೇದ್ ಅವರು ರಜೆಯ ಮೇಲಿದ್ದರು ಮತ್ತು ಭಾನುವಾರ ಮತ್ತೆ ಕೆಲಸಕ್ಕೆ ಹಾಜರಾಗಬೇಕಿತ್ತು.ಆದರೆ ದಿಢೀರ್ ನಾಪತ್ತೆಯಾಗಿದ್ದು, ಉಗ್ರರು ಆತನನ್ನು ಅಪಹರಿಸಿರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು. ಜಾವೇದ್ ನನ್ನು ಬಿಡುಗಡೆ ಮಾಡುವಂತೆ ಆತನ ಕುಟುಂಬ ಸದಸ್ಯರು ಮನವಿ ಮಾಡಿದ್ದರು.

ಯೋಧ ನಾಪತ್ತೆಯಾದ ನಂತರ, ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನೆ ಭಾರಿ ಶೋಧ ಕಾರ್ಯಾಚರಣೆ ನಡೆಸಿತು. ಭದ್ರತಾ ಸಿಬ್ಬಂದಿ ಸುಮಾರು ಎರಡು ಡಜನ್ ಜನರನ್ನು ವಿಚಾರಣೆಗೆ ಒಳಪಡಿಸಿದ್ದರು ಮತ್ತು ಕಾಣೆಯಾದ ಸೈನಿಕನ ಕರೆ ದಾಖಲೆಗಳು ಮತ್ತು ಮೊಬೈಲ್ ಡೇಟಾವನ್ನು ಸಹ ಪರಿಶೀಲಿಸಿದ್ದರು.

ಮಣಿಪುರ: ಬಿಷ್ಣುಪುರದಲ್ಲಿ ಮತ್ತೊಂದು ಘರ್ಷಣೆ, 17 ಮಂದಿಗೆ ಗಾಯ; ಇಂಫಾಲ ಕಣಿವೆಯಲ್ಲಿ ಕರ್ಫ್ಯೂ ಜಾರಿ

ಇಂಫಾಲ: ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶದಲ್ಲಿ ಗುರುವಾರ ಘರ್ಷಣೆ ಸಂಭವಿಸಿದ್ದು, ಈ ವೇಳೆ ಸೇನೆ ಮತ್ತು ಆರ್‌ಎಎಫ್ (ರಾಯಲ್ ಏರ್ ಫೋರ್ಸ್) ಸಿಬ್ಬಂದಿ ಇಬ್ಬರೂ ಅಶ್ರುವಾಯು ಪ್ರಯೋಗಿಸಿದ್ದರ ಪರಿಣಾಮವಾಗಿ ಹದಿನೇಳು ಜನರು ಗಾಯಗೊಂಡಿದ್ದಾರೆ. 

ಮುಂಜಾಗ್ರತಾ ಕ್ರಮವಾಗಿ ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ತಮ್ಮ ಜಿಲ್ಲೆಗಳಲ್ಲಿ ಈ ಹಿಂದೆ ಘೋಷಿಸಲಾಗಿದ್ದ ಕರ್ಫ್ಯೂ ಸಡಿಲಿಕೆಗಳನ್ನು ಹಿಂಪಡೆದಿದ್ದಾರೆ. ಪರಿಣಾಮವಾಗಿ ಇಡೀ ಇಂಫಾಲ್ ಕಣಿವೆಯಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ

ಘರ್ಷಣೆಗೂ ಮೊದಲು ಗುರುವಾರ ಬೆಳಿಗ್ಗೆ ರಾಜ್ಯ ಹೈಕೋರ್ಟ್ ಚುರಾಚಂದ್‌ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಸಾವಿಗೀಡಾದ ಕುಕಿ-ಜೋಮಿ ಜನರ ಸಾಮೂಹಿಕ ಸಮಾಧಿ ಕಾರ್ಯ ಸ್ಥಗಿತಗೊಂಡಿತು. ಅಪೆಕ್ಸ್ ಬುಡಕಟ್ಟು ಸಂಸ್ಥೆಯಾದ ಐಟಿಎಲ್‌ಎಫ್, ಬಿಷ್ಣುಪುರದ ಗಡಿಯಲ್ಲಿರುವ ಚುರಾಚಂದ್‌ಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಥಳದಲ್ಲಿ 35 ಜನರ ಸಾಮೂಹಿಕ ಸಮಾಧಿ ಕಾರ್ಯವನ್ನು ಮುಂದೂಡುತ್ತಿರುವುದಾಗಿ ಹೇಳಿದೆ.

ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ.

ಮಹಿಳೆಯರ ನೇತೃತ್ವದಲ್ಲಿ ಸ್ಥಳೀಯರು ಸೇನೆ ಮತ್ತು ಆರ್‌ಎಎಫ್ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್ ಅನ್ನು ದಾಟಲು ಪ್ರಯತ್ನಿಸಿದರು. ಸಾಮೂಹಿಕ ಸಮಾಧಿ ಸ್ಥಳವಾದ ಟುಯಿಬುಂಗ್‌ಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ಹಿಂತೆಗೆದುಕೊಂಡಿದೆ. ಇಂಫಾಲ ಪೂರ್ವ ಮತ್ತು ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಕರ್ಫ್ಯೂವನ್ನು ಪುನಃ ವಿಧಿಸಲು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ