ಕಾಸರಗೋಡು : ರಾತ್ರಿ ಊಟ ಮಾಡಿ ತಾಯಿ ಜೊತೆ ಮಲಗಿದ್ದ ಯುವತಿ ಬೆಳಗ್ಗೆ ಮತ್ತೊಂದು ಕೊಠಡಿಯಲ್ಲಿ ನೇಣಿಗೆ ಶರಣು..!
ಕಾಸರಗೋಡು : ಕೇರಳ ಕಾಸರಗೋಡಿನ ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ಯುವತಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಅಡ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ರಾತ್ರಿ ಊಟ ಮಾಡಿ ಅಮ್ಮನ ಜೊತೆ ಮಲಗಲು ಹೋಗಿದ್ದ ಈಕೆ ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಅಮ್ಮ ಎದ್ದಾಗ ರಾಣಾ ಫಾತಿಮಾ ಕಾಣಲಿಲ್ಲ.
ಹುಡುಕಾಡಿದಾಗ ಇನ್ನೊಂದು ಮಲಗುವ ಕೋಣೆ ಬೀಗ ಹಾಕಿರುವುದು ಕಂಡು ಬಂತು. ಬಾಗಿಲು ಒಡೆದು ನೋಡಿದಾಗ ರಾಣಾ ಫಾತಿಮಾ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 19 ವರ್ಷದ ಯುವತಿಗೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಫಾತಿಮಾ ಅವರ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಉಳ್ಳಾಲ: ಪರಿಶಿಷ್ಟ ವರ್ಗದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಮಹಮ್ಮದ್ ರಝೀನ್ ಬಂಧನ..!
ಉಳ್ಳಾಲ : ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ದಲಿತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ನಿವಾಸಿ ರಝೀನ್ 17 ವರ್ಷ ವಯಸ್ಸಿನ ಬಾಲಕಿ ಹಾಗೂ ಪರಿಶಿಷ್ಟ ಜಾತಿ ಯವರಾಗಿದ್ದು, ಈಕೆ ಅಪ್ರಾಪ್ತ ಹಾಗೂ ಪರಿಶಿಷ್ಟ ಜಾತಿಯವರೆಂದು ತಿಳಿದೂ ಮುಸ್ಲಿಂ ಧರ್ಮದವನಾದ ಆರೋಪಿ ಮಹಮ್ಮದ್ ರಝೀನ್ ಎಂಬಾತನು ಪ್ರೀತಿಸುವುದಾಗಿ ಹೇಳಿ ಸುಮಾರು 4 ತಿಂಗಳ ಹಿಂದೆ ನೊಂದ ಅಪ್ರಾಪ್ತ ಬಾಲಕಿಯನ್ನು ಮೂಡಿಗೆರೆ ತಾಲೂಕಿನ ಆಣಜೂರಿನ ಗ್ರಾಮದಿಂದ ಮಂಗಳೂರಿನ ಪಂಪ್ ವೆಲ್ ಗೆ ಬಸ್ಸಿನಲ್ಲಿ, ಬರಮಾಡಿಸಿಕೊಂಡು ಬಳಿಕ ಆತನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಒತ್ತಾಯಪೂರ್ವಕವಾಗಿ ನೊಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಮೊಹಮ್ಮದ್ ರಝೀನ್ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿತನಿಗೆ ನ್ಯಾಯಾಂಗ ಬಂಧನವಾಗಿರುತ್ತದೆ. ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.