ಭಾನುವಾರ, ಜನವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Karwar: ಉದ್ಯಮಿಯ ಬರ್ಬರ ಹತ್ಯೆ, ಪತ್ನಿ ಗಂಭೀರ!

Twitter
Facebook
LinkedIn
WhatsApp
ಪ್ರೇಮ ಪ್ರಕರಣ

Karwar: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯೊಬ್ಬರನ್ನು (Businessman) ಬೆಳ್ಳಂಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನಲ್ಲಿ ನಡೆದಿದೆ. ಮಹಾರಾಷ್ಟ್ರದ (maharashtra) ಪುಣೆ ಮೂಲದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ವ್ಯಕ್ತಿ. ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ನಡೆದ ಘಟನೆ ನಡೆದಿದೆ.

ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಾಕೆಯನ್ನ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಉದ್ಯಮಿ ವಿನಾಯಕ ನಾಯ್ಕ ತಮ್ಮ ಪತ್ನಿಯೊಂದಿಗೆ ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಹಣಕೊಣ ಗ್ರಾಮಕ್ಕೆ ಬಂದಿದ್ದರು. ಭಾನುವಾರ (ಇಂದು) ಬೆಳಗ್ಗೆ ಪುಣೆಗೆ ಹೊಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಅಷ್ಟರಲ್ಲೇ ಕೊಲೆ ನಡೆದಿರುವುದು ಭಾರಿ ಅನುಮಾನ ಹುಟ್ಟಿಸಿದೆ. ಕೊಲೆ ಯಾರೂ ಮಾಡಿದ್ರು ಮತ್ತು ಯಾಕೆ ಮಾಡಿದ್ರು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಚಾಕುವಿನಿಂದ ಇರಿದು ಪದವಿ ವಿದ್ಯಾರ್ಥಿಯ ಬರ್ಬರ ಕೊಲೆ

ಇನ್ನು ಮತ್ತೊಂದೆಡೆ ಕಲಬುರಗಿ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಚಾಕುವಿನಿಂದ ಇರಿದು ಪದವಿ ವಿದ್ಯಾರ್ಥಿಯ ಬರ್ಬರ ಕೊಲೆ ಮಾಡಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ಸುಮೀತ್ ಎಂಬ ಯುವಕ ನಾಲ್ಕೈದು ದಿನಗಳ ಹಿಂದೆಯಷ್ಟೇ ತಾಯಿಯೊಂದಿಗೆ ಊರಿಗೆ ಬಂದಿದ್ದ. ಯುವತಿಯೊಬ್ಬಳ ಜೊತೆ ಸುಮಿತ್‌ ಸೋದರ ಸಚಿನ್ ಸ್ನೇಹ ಹೊಂದಿದ್ದ. ಸಚಿನ್ ಮೇಲಿನ ಕೋಪಕ್ಕೆ ಸುಮಿತ್‌ ಜೊತೆ ಯುವತಿ ಕಡೆಯವರು ಗಲಾಟೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸುಮಿತ್‌ ತಾಯಿ ಜೊತೆ ನಾಲ್ಕೈದು ಜನರು ಗಲಾಟೆ ಮಾಡಿದ್ದರು. ಈ ಗಲಾಟೆ ವೇಳೆ ಸುಮೀತ್‌ ಮಲ್ಲಾಬಾದ್(19)ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯುವತಿಯ ಕುಟುಂಬಸ್ಥರಿಂದ ಸಚಿನ್ ಸೋದರ ಸುಮೀತ್‌ ಹತ್ಯೆ ನಡೆದಿದೆ. ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳ, ಕೊಲೆಯಲ್ಲಿ ಅಂತ್ಯ!

ಬೆಂಗಳೂರು(ಸೆ.22): ಮಾಟ ಮಂತ್ರ ಮಾಡಿ ಗೆಳೆತಿಯನ್ನು ಒಲಿಸಿಕೊಂಡಿದ್ದಾನೆ ಎಂದು ಸಿಟ್ಟಿಗೆದ್ದು ತನ್ನ ಬಾಲ್ಯದ ಗೆಳೆಯನನ್ನು ಹುಟ್ಟುಹಬ್ಬದ ದಿನವೇ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್‌ (24) ಹತ್ಯೆಯಾದ ದುರ್ದೈವಿ. ಈ ಕೊಲೆ ಕೃತ್ಯ ಎಸಗಿದ ಸ್ನೇಹಿತ ದಿವೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ಹುಟ್ಟುಹಬ್ಬದ ನಿಮಿತ್ತ ಆತನ ಮನೆಗೆ ಶುಕ್ರವಾರ ರಾತ್ರಿ ಬಂದಿದ್ದ ದಿವೇಶ್‌, ರಾತ್ರಿ ಪಾರ್ಟಿ ಬಳಿಕ ಗೆಳೆಯನ ಮನೆಯಲ್ಲೇ ಇದ್ದ. ಆಗ ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಡುಪಿ ಜಿಲ್ಲೆ ಕುತ್ಪಡಿ ಗ್ರಾಮದ ವರುಣ್ ಕೋಟ್ಯಾನ್ ಹಾಗೂ ಆರೋಪಿ ದಿವೇಶ್ ಬಾಲ್ಯ ಸ್ನೇಹಿತರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜಯನಗರ ಸಮೀಪದ ಗೆದ್ದಲಹಳ್ಳಿಯಲ್ಲಿ ವರುಣ್ ವಾಸವಾಗಿದ್ದ. ಈ ಗೆಳೆಯರಿಗೆ ಬಾಲ್ಯದ ಸ್ನೇಹಿತೆ ಇದ್ದು, ಕೆಲ ದಿನಗಳಿಂದ ವರುಣ್‌ ಜತೆ ಆಕೆ ಆತ್ಮೀಯವಾಗಿದ್ದಳು. ಈ ವಿಚಾರ ತಿಳಿದು ಗೆಳೆಯನ ಮೇಲೆ ದಿವೇಶ್ ಅಸಮಾಧಾನಗೊಂಡಿದ್ದ.

ವರುಣನ ಹುಟ್ಟಹಬ್ಬದ ಆಚರಣೆಗೆ ಶುಕ್ರವಾರ ರಾತ್ರಿ ಆತನ ಗೆಳತಿ, ದಿವೇಶ್ ಹಾಗೂ ದೀಕ್ಷಿತ್‌ ಮನೆಗೆ ಬಂದಿದ್ದರು. ಬಳಿಕ ಈ ನಾಲ್ವರು ಸ್ನೇಹಿತರು ಮನೆಯಿಂದ ಹೊರ ಹೋಗಿ ಬರ್ತ್‌ ಡೇ ಪಾರ್ಟಿ ಮುಗಿಸಿ ಮತ್ತೆ ವರುಣ್‌ ಮನೆಗೆ ಬಂದಿದ್ದರು. ಆಗ ರೂಮ್‌ನಲ್ಲಿ ಇವರ ಸ್ನೇಹಿತೆ ಮಲಗಿದರೆ, ಮತ್ತೊಂದು ರೂಮ್‌ನಲ್ಲಿ ಮೂವರು ಗೆಳೆಯರು ನಿದ್ರೆ ಜಾರಿದ್ದರು. ಆ ವೇಳೆ ಸ್ನೇಹಿತೆ ವಿಚಾರವಾಗಿ ವರುಣ್‌ ಮತ್ತು ದಿವೇಶ್ ಮಧ್ಯೆ ಜಗಳ ಶುರುವಾಗಿದೆ. ಕೊನೆಗೆ ಮತ್ತೊಬ್ಬ ಸ್ನೇಹಿತ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದ್ದ. 

ಮುಂಜಾನೆ ನಿದ್ರೆಯಿಂದ ಎದ್ದಾಗ ಮತ್ತೆ ವರುಣ್ ಹಾಗೂ ದಿವೇಶ್ ಮಧ್ಯೆ ಜಗಳ ಆರಂಭವಾಗಿದೆ. ನೀನು ಮಾಟ ಮಂತ್ರ ಮಾಡಿ ಆಕೆಯನ್ನು ವಶೀಕರಣ ಮಾಡಿಕೊಂಡಿದ್ದೀಯಾ ಎಂದು ದಿವೇಶ್ ಕೂಗಾಡಿದ್ದಾನೆ. ಆಗ ತಳ್ಳಾಟ ನೂಕಾಟ ಮಾಡಿಕೊಂಡು ಮನೆಯಿಂದ ಇಬ್ಬರು ಹೊರಗೆ ಬಂದಿದ್ದಾರೆ. ಈ ಹಂತದಲ್ಲಿ ಸಿಟ್ಟಿಗೆದ್ದ ದಿವೇಶ್‌, ಮನೆ ಮುಂದೆ ಬಿದ್ದಿದ್ದ ಸಿಮೆಂಟ್‌ ಇಟ್ಟಿಗೆ ತೆಗೆದುಕೊಂಡು ವರುಣ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ವರುಣ್ ಕೊನೆಯುಸಿರೆಳೆದಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ದಿವೇಶ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಸ್ನೇಹದ ವಿಚಾರವಾಗಿ ಬಾಲ್ಯದ ಗೆಳೆಯರು ಪರಸ್ಪರ ಬಡಿದಾಡಿಕೊಳ್ಳುವ ವೇಳೆ ಅದೇ ಮನೆಯಲ್ಲಿ ಸ್ನೇಹಿತೆ ನಿದ್ರೆ ಮಾಡುತ್ತಿದ್ದಳು. ಹತ್ಯೆ ವಿಚಾರ ತಿಳಿದ ಕೂಡಲೇ ಭೀತಿಗೊಂಡು ಆಕೆ ತನ್ನ ಮನೆಗೆ ತೆರಳಿದ್ದಳು. ಬಳಿಕ ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ನಿರ್ದೋಷಿ ಎಂಬುದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗಳ 19 ವರ್ಷದ ಗೆಳೆಯನ ಇರಿದು ಕೊಂದ ಅಪ್ಪ:

ಮಗಳನ್ನು ಪ್ರೀತಿಸುತ್ತಿದ್ದ 19 ವರ್ಷದ ಯುವಕನನ್ನು ಹುಡುಗಿಯ ಅಪ್ಪನೇ ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ.  ಮೃತ ಯುವಕನನ್ನು ಅರುಣ್‌ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕೊಲ್ಲಂ ಜಿಲ್ಲೆಯ ಇರ್ವಿಪುರಂ ನಿವಾಸಿಯಾಗಿದ್ದು, ಗಲ್ಫ್‌ನಲ್ಲಿ ಕೆಲಸದಲ್ಲಿ ಇದ್ದ. ಇತ್ತೀಚೆಗಷ್ಟೇ ಈತ ತನ್ನೂರಿಗೆ ಬಂದಿದ್ದ. . 

ಕೊಲೆ ಮಾಡಿದ ವ್ಯಕ್ತಿಯನ್ನು 46 ವರ್ಷದ ಪ್ರಸಾದ್ ಎಂದು ಗುರುತಿಸಲಾಗಿದೆ.  ಮಗಳ ಗೆಳೆಯನ್ನು ಕೊಲೆ ಮಾಡಿದ ಆರೋಪಿ ಪ್ರಸಾದ್ ಬಳಿ ಸಕ್ತಿಕುಲಂಗರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈಗ ಪಶ್ಚಿಮ ಕೊಲ್ಲಂನ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿ ಪ್ರಸಾದ್‌ನ 17 ವರ್ಷದ ಮಗಳು ಸಂಬಂಧಿಕರೊಬ್ಬರ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಅರುಣ್ ಹಾಗೂ ಆ ಹುಡುಗಿಯ ಮಧ್ಯೆ ಪ್ರೇಮ ಸಂಬಂಧವಿತ್ತು. ಹಾಗೂ ಆಕೆಯ ಆಹ್ವಾನದ ಹಿನ್ನೆಲೆಯಲ್ಲಿ ಅರುಣ್ ಆಗಾಗ ಹುಡುಗಿ ಇದ್ದ ಮನೆಗೆ ಹೋಗುತ್ತಿದ್ದ. ಈ ವಿಚಾರ ಇತ್ತೀಚೆಗೆ ಹುಡುಗಿಯ ತಂದೆ ಪ್ರಸಾದ್‌ಗೆ ಗೊತ್ತಾಗಿದ್ದು, ಅರುಣ್‌ ಕುಮಾರ್‌ ಜೊತೆ ಇದೇ ವಿಚಾರವಾಗಿ ಹುಡುಗಿಯ ಅಪ್ಪ ಪ್ರಸಾದ್ ಜಗಳವಾಡಿದ್ದಾನೆ. ಇದಾದ ನಂತರ ಅವರಿಬ್ಬರು ಇರ್ಟಕಾಡ್‌ನಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಈ ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇರ್ಟಕಾಡ್‌ನಲ್ಲಿರುವ ಆರೋಪಿಯ ಪತ್ನಿಯ ಹಿರಿಯ ಸೋದರಿಯ ಮನೆ ಸಮೀಪ ಈ ಘಟನೆ ನಡೆದಿದೆ. 

ಘಟನೆಯ ನಂತರ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109ರ ಅಡಿ ಬಂಧಿಸಿದ್ದಾರೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ ಅರುಣ್‌ ಕುಮಾರ್, ಪ್ರಸಾದ್ ಪುತ್ರಿಯನ್ನು ಮನೆಯಿಂದ ಕರೆದುಕೊಂಡು ಹೋಗಲು ನೋಡಿದಾಗ ಘಟನೆ ನಡೆದಿದೆ. ಅರುಣ್‌ ಕುಮಾರ್‌ ವರ್ತನೆಯಿಂದ ಸಿಟ್ಟಿಗೆದ್ದ ಆರೋಪಿ ಪ್ರಸಾದ್‌ ಚಾಕುವಿನಿಂದ ಅರುಣ್ ಕುಮಾರ್‌ನ ಎದೆಗೆ ಇರಿದಿದ್ದಾನೆ. ನಂತರ ಕೂಡಲೇ ಅರುಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಆತ ಬದುಕುಳಿಯಲಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist