SSLC Exam: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಎಸ್ಎಲ್ಸಿ (10ನೇ ತರಗತಿ) ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ(SSLC time table 2023) ಪ್ರಕಟವಾಗಿದೆ. ಇಂದು (ಜನವರಿ 18) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗಳು 2023 ಮಾಚ್೯ 31 ರಿಂದ ಏಪ್ರಿಲ್ 15 ವರೆಗೆ ನಡೆಯಲಿವೆ. ‘ಮಹಾವೀರ ಜಯಂತಿ’ ಸಾರ್ವತ್ರಿಕ ರಜೆಯು ಏಪ್ರಿಲ್ 3ರಿಂದ ಏಪ್ರಿಲ್ 4ಕ್ಕೆ ನಿಗದಿಯಾಗಿರುವ ಕಾರಣ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ದಿನಾಂಕದಲ್ಲಿ ಒಂದು ಮಾರ್ಪಾಡು ಮಾಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ್ದು ಪರೀಕ್ಷೆಗಳು ಬೆಳಗ್ಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರಗೆ ನಡೆಯಲಿವೆ.
SSLC ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ
- ಮಾರ್ಚ್ 31-ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಸಂಸ್ಕೃತ
- ಏಪ್ರಿಲ್ 3-ಗಣಿತ ಹಾಗೂ ಸಮಾಜ ಶಾಸ್ತ್ರ
- ಏಪ್ರಿಲ್ 6-ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ
- ಏಪ್ರಿಲ್ 8-ಅರ್ಥಶಾಸ್ತ್ರ, ಏಪ್ರಿಲ್ 10-ವಿಜ್ಞಾನ, ರಾಜ್ಯಶಾಸ್ತ್ರ
- ಏಪ್ರಿಲ್ 12-ತೃತೀಯ ಭಾಷೆ ಇಂಗ್ಲಿಷ್, ಹಿಂದಿ, ಕನ್ನಡ, ಸಂಸ್ಕೃತ
- ಏಪ್ರಿಲ್ 15ರಂದು ಸಮಾಜ ವಿಜ್ಞಾನ ಪರೀಕ್ಷೆ ನಿಗದಿ
ಕಳೆದ ಅಕ್ಟೋಬರ್ 29 2022-23ನೇ ಸಾಲಿನ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ (SSLC Annual Exam 2023) ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿತ್ತು. ಏಪ್ರಿಲ್ 1ರಿಂದ ಏ, 15ರವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿತ್ತು. ಅಲ್ಲದೇ ಇದಕ್ಕೆ ಯಾರದ್ದಾದರೂ ಆಕ್ಷೇಪಣೆ ಇದ್ದರೇ ನವೆಂಬರ್ 28ರವರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆಯಲ್ಲಿ ತಿಳಿಸಿತ್ತು.
ಇನ್ನು 2023ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಟ್ಟಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ದಿನಾಂಕ 09-3-2023 ರಿಂದ 29-3-2023ರ ವರೆಗೆ ಪರೀಕ್ಷೆಗಳು ನಡೆಯಲಿವೆ.