ಕಾರ್ಕಳ: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮುಗಿಸಿ ಕೈ ತೊಳೆಯುವ ವೇಳೆ ನೀರಿನ ಟ್ಯಾಂಕ್ ಒಡೆದು ಮಹಿಳೆ ಸಾವು...!
ಕಾರ್ಕಳ ಜನವರಿ 31: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮುಗಿಸಿ ಕೈ ತೊಳೆಯುವ ಸಂದರ್ಭ ಪಕ್ಕದಲ್ಲಿದ್ದ ಹಳೆಯ ನೀರಿನ ಟ್ಯಾಂಕ್ ಒಡೆದು ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಂದಳಿಕೆ ಎಂಬಲ್ಲಿ ಬುಧವಾರ ನಡೆದಿದೆ.
ಮೃತ ಮಹಿಳೆಯನ್ನು ಶ್ರೀಲತಾ (50) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಮಹಿಳೆಯ ಮಗಳು ಪೂಜಾ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಹಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮಾಡಿದ ಬಳಿಕ ಕೈ ತೊಳೆಯುವ ಸಂದರ್ಭದಲ್ಲಿ ನೆಲದ ಮೇಲೆ ಇರುವ ಹಳೆಯ ನೀರಿನ ಟ್ಯಾಂಕ್ ನೀರಿನ ಭಾರ ತಾಳಲಾರದೆ ಒಡೆದಿದ್ದು ಘಟನೆ ಸಂಭವಿಸಿದೆ.