ಬುಧವಾರ, ಫೆಬ್ರವರಿ 21, 2024
ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಂತಾರ ಸಿನಿಮಾದ ಫಸ್ಟ್ ಲುಕ್ ರಿಲೀಸ್..!

Twitter
Facebook
LinkedIn
WhatsApp
ಕಾಂತಾರ ಸಿನಿಮಾದ ಫಸ್ಟ್ ಲುಕ್ ರಿಲೀಸ್..!

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ (First Look) ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುವಷ್ಟು ಕಂಡಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ನಾನಾ ಚರ್ಚೆಗಳನ್ನು ಹುಟ್ಟು ಹಾಕುವಂತಿದೆ.

ಕಾಂತಾರ ಚಿತ್ರದ ಮೊದಲ ಅಧ್ಯಾಯಕ್ಕೆ  (Kantara Chapter 1) ಇಂದು ಮುಹೂರ್ತ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಮಾಡಿಸಲಿದೆ. ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಯಲಿದೆ. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು ಬಣ್ಣ ಬಣ್ಣದ ಹೂವಿನಿಂದ ಸಿಂಗಾರ ಮಾಡಲಾಗಿದೆ.

ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಟೀಮ್ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗದೇ ಇದ್ದರೂ, ಬಲ್ಲ ಮೂಲಗಳು ಮಾಹಿತಿಯನ್ನು ಹೊರ ಹಾಕುತ್ತಲೇ ಇವೆ. ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಹಾಗಾಗಿ ಅದ್ಧೂರಿ ಮೇಕಿಂಗ್ ಕೂಡ ಇರಲಿದೆಯಂತೆ.

ಮೊನ್ನೆಯಷ್ಟೇ ಸಿನಿಮಾ ಮುಹೂರ್ತದ (Muhurta) ಕುರಿತಂತೆ ಪಂಜುರ್ಲಿ (Panjurl) ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

ಮತ್ತೊಂದು ಸಮಾಚಾರವೆಂದರೆ, ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಕೂಡ ಇರಲಿದೆಯಂತೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕಾಂತರ ಕಥೆ ಹಾಟ್ ಕೇಕ್ ತರಹ ಮಾರಾಟವಾಗುತ್ತಿದೆ.

‘ಕಾಂತಾರ‘ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ‘ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2′ ಚಿತ್ರದ ಮುಹೂರ್ತ ಇಂದು ಸರಳವಾಗಿ ನಡೆದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’