ಸೋಮವಾರ, ಏಪ್ರಿಲ್ 29, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾಟಿ ವೈದ್ಯ ಪರಂಪರೆಯ ಜಲಪಾತಗಳ ಗ್ರಾಮ ಕೊಡಗಿನ ಕರಿಕೆಯಲ್ಲಿ ನಡೆಯಲಿದೆ' ಕನ್ನಡದ ಗಡಿ ಉತ್ಸವ'

Twitter
Facebook
LinkedIn
WhatsApp
ನಾಟಿ ವೈದ್ಯ ಪರಂಪರೆಯ ಜಲಪಾತಗಳ ಗ್ರಾಮ ಕೊಡಗಿನ ಕರಿಕೆಯಲ್ಲಿ ನಡೆಯಲಿದೆ' ಕನ್ನಡದ ಗಡಿ ಉತ್ಸವ'

ಮಡಿಕೇರಿ: ನಾಟಿ ವೈದ್ಯ ಹಾಗೂ ಆಯುರ್ವೇದ ಪರಂಪರೆಗೆ ಬಹುದೊಡ್ಡ ಹೆಸರುವಾಸಿಯಾಗಿರುವ ಹಾಗೂ ಭಾರತದ ಜಲಪಾತಗಳ ಗ್ರಾಮ ಎಂದು ಕರೆಯಲ್ಪಡುವ ಕೊಡಗಿನ ಕರಿಕೆಯಲ್ಲಿ ಜನವರಿ 26ರಂದು ಗಡಿನಾಡ ಉತ್ಸವ ಜರಗಲಿದೆ.

ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಕರಿಕೆ ಕರ್ನಾಟಕದ ವಿಶಿಷ್ಟ ಗ್ರಾಮವಾಗಿ ಗಮನ ಸೆಳೆದಿದೆ. ಸುಮಾರು ಮೂವತ್ತಕ್ಕೂ ಅಧಿಕ ಜಲಪಾತಗಳು ಈ ಗ್ರಾಮದಲ್ಲಿವೆ.

ನಾಟಿ ವೈದ್ಯ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿರುವ ಕಲಿಕೆ ಗ್ರಾಮ ಹಲವಾರು ನಾಟಿ ವೈದ್ಯರನ್ನು ನಾಡಿಗೆ ಕೊಡುಗೆ ನೀಡಿದೆ. ಇಲ್ಲಿ ಮುಖ್ಯವಾಗಿ ಗಮನ ಸೆಳೆದವರು ವೈದ್ಯರತ್ನ ಬೇಕಲ್ ಸೋಮನಾಥ್. ರಾಜ್ಯದ ಗಮನ ಸೆಳೆದ ನಾಟಿ ವೈದ್ಯರುಗಳಲ್ಲಿ ಅವರು ಒಬ್ಬರು. ಇಂದಿಗೂ ಅವರ ಕುಟುಂಬ ಆ ವೈದ್ಯ ಪದ್ಧತಿಯನ್ನು ಮುಂದುವರಿಸಿರುವುದು ಕರಿಕೆ ಗ್ರಾಮದ ಹೆಗ್ಗಳಿಕೆಗಳಲ್ಲಿ ಒಂದು.

ನಾಟಿ ವೈದ್ಯ ಪರಂಪರೆಯ ಜಲಪಾತಗಳ ಗ್ರಾಮ ಕೊಡಗಿನ ಕರಿಕೆಯಲ್ಲಿ ನಡೆಯಲಿದೆ' ಕನ್ನಡದ ಗಡಿ ಉತ್ಸವ'

ಇದು ಅಲ್ಲದೆ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡುಗಳಲ್ಲಿ ಜನರಿಂದ ಆರಾಧಿಸಲ್ಪಡುವ ಕೋಟಿ ಚೆನ್ನಯ್ಯರ ಮಾತೆ ದೇಯಿ ಬೈದತಿ ನಾಟಿ ವೈದ್ಯೆಯಾಗಿ 550 ವರ್ಷಗಳ ಹಿಂದೆ ಕಾರ್ಯನಿರ್ವಹಿಸಿದ ಐತಿಹಾಸಿಕ ಇತಿಹಾಸವಿದೆ.

ದೇಯಿ ಬೈದತಿ ಈ ವಿದ್ಯೆಯನ್ನು ತನ್ನ ಮಾವ ಸಾಯನ ಬೈದರಿಂದ ಪಡೆದಿದ್ದರು. ಸಾಯನ ಬೈದ್ಯ ಈ ನಾಟಿ ವೈದ್ಯ ವಿದ್ಯೆಯನ್ನು ಕರಿಕೆ ಗ್ರಾಮದಲ್ಲಿ ಪಡೆದರು ಎಂಬ ಪ್ರತೀತಿಯಿದೆ.

ಈ ರೀತಿಯಾಗಿ ನಾಟಿ ವೈದ್ಯ ಪರಂಪರೆಯ ಬಹುದೊಡ್ಡ ಐತಿಹಾಸಿಕ ಗ್ರಾಮ ಕರಿಕೆಯಲ್ಲಿ ಈ ಬಾರಿ ಕನ್ನಡದ ಬಹುದೊಡ್ಡ ಗಡಿ ಉತ್ಸವ ಜರುಗಲಿದೆ.

ನಾಟಿ ವೈದ್ಯ ಪರಂಪರೆಯ ಜಲಪಾತಗಳ ಗ್ರಾಮ ಕೊಡಗಿನ ಕರಿಕೆಯಲ್ಲಿ ನಡೆಯಲಿದೆ' ಕನ್ನಡದ ಗಡಿ ಉತ್ಸವ'
ಕೊಡಗಿನ ಕುಂದಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಶಿವಲಿಂಗ ಪತ್ತೆ

ಮಡಿಕೇರಿ: ದಕ್ಷಿಣ ಕೊಡಗಿನ (Kodagu) ಕುಂದ ಗ್ರಾಮದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಪಾಂಡವರ (Pandavas) ಕಾಲದ್ದು ಎನ್ನಲಾದ 4 ಅಡಿ ಎತ್ತರದ ಶಿವಲಿಂಗವೊಂದು (Shivalinga) ಪತ್ತೆಯಾಗಿದೆ.

ಗ್ರಾಮದ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಕಾಫಿ ತೋಟದಲ್ಲಿ ಬೃಹತ್ ಮರದ ಬುಡದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಸುಮಾರು 800 ವರ್ಷ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದ್ದು, ಕುಟುಂಬಸ್ಥರು ಸಂತೋಷಗೊಂಡಿದ್ದಾರೆ.

ಗೋಳಿಮರದ ಅಡಿಯಲ್ಲಿ ಈ 4 ಅಡಿ ಎತ್ತರದ 3 ಅಡಿ ಅಗಲದ ಪುರಾತನ ಕಾಲದ ಬೃಹತ್ ಶಿವಲಿಂಗ ಪತ್ತೆಯಾಗಿರುವುದರಿಂದ ಇದು ಅಪಾರವಾದ ಶಕ್ತಿಯನ್ನು ಹೊಂದಿರುವುದಾಗಿ ಸ್ಥಳಕ್ಕಾಗಮಿಸಿದ ಹಿರಿಯ ಅರ್ಚಕರು ಹಾಗೂ ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಿವಲಿಂಗದೊಂದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ. ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಸ್ವಲ್ಪ ಅಂತರದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಪಾಂಡವರು ಈ ಭಾಗದಲ್ಲಿ ಸಂಚರಿಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು ಎಂದು ಕಾರ್ಕಳದ ಶಿಲ್ಪಿಗಳಾದ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಮಣ್ಣಿನ ಅಡಿಯಲ್ಲಿ ಲಭಿಸಿರುವ ಶಿವಲಿಂಗದ 2 ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಆಗಿನ ಕಾಲದ ಬಿಳಿಕಲ್ಲಿನಿಂದ ಹಾಗೂ ಕಾಡು ಸವಕಲ್ಲಿನಿಂದ ಈ ಶಿವಲಿಂಗ ಮಾಡಲಾಗಿದೆ. ಶಿವಲಿಂಗ ಪತ್ತೆಯಾದ ಸ್ಥಳದಿಂದ ಅನತಿ ದೂರದ ಎತ್ತರದ ಕುಂದಬೆಟ್ಟದಲ್ಲಿ ಇಂದಿಗೂ ಶಿವನು ನೆಲೆಸಿರುವ, ಒಂದೇ ರಾತ್ರಿಯಲ್ಲಿ ಕಟ್ಟಿರುವ ಬಾಗಿಲು ಇಲ್ಲದಿರುವ ಕಲ್ಲಿನ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ.

ಮಣ್ಣಿನಡಿಯಲ್ಲಿದ್ದ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಶಿವಲಿಂಗ ಹೊರಗೆ ತೆಗೆಯಲಾಗಿದೆ. ಈ ವೇಳೆ ಶಿವಲಿಂಗವನ್ನು ಎಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಜ್ಜಪ್ಪನವರ ನುಡಿಯಂತೆ ಕರುವಿನ ಸಹಾಯದಿಂದ ಶಿವಲಿಂಗಕ್ಕೆ ಹಗ್ಗ ಕಟ್ಟಿ ಮೇಲೆ ಎತ್ತಲಾಗಿದೆ. ಇದರೊಂದಿಗೆ ಭೂಮಿ ಅಡಿಯಲ್ಲಿ ಸಿಕ್ಕಿರುವ ಹಲವು ವಸ್ತುಗಳನ್ನು ಜೋಡಿಸಿ ಸ್ಥಳದಲ್ಲಿ ಶೇಖರಿಸಿ ಇಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ