ಕನ್ನಡದ ನಟಿ ನಭಾ ನಟೇಶ್ಗೆ ಸಿಗುತ್ತಿಲ್ಲ ಆಫರ್
Twitter
Facebook
LinkedIn
WhatsApp
ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿತು.
ಬಳಿಕ ಕೆಲವು ತೆಲುಗು ಸಿನಿಮಾಗಳಲ್ಲಿ ನಭಾ ನಟಿಸಿದರು. 2021ರ ಬಳಿಕ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. ಇದಕ್ಕೆ ಕಾರಣ ಅವರಿಗೆ ಆದ ಅಪಘಾತ.
2022ರಲ್ಲಿ ನಭಾ ನಟೇಶ್ ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಎಡಗೈ ಹಾಗೂ ಎಡ ಭುಜಕ್ಕೆ ಪೆಟ್ಟಾಗಿತ್ತು. ಇದರಿಂದ ಹಲವು ಬಾರಿ ಅವರು ಸರ್ಜರಿಗೆ ಒಳಗಾಗಿದ್ದರು.
ಈಗ ನಭಾ ನಟೇಶ್ ಚೇತರಿಕೆ ಕಂಡಿದ್ದಾರೆ. ಆದರೆ, ಅಂದುಕೊಂಡ ರೀತಿಯಲ್ಲಿ ಆಫರ್ಗಳು ಅವರನ್ನು ಹುಡುಕಿ ಬರುತ್ತಿಲ್ಲ.
ನಭಾ ನಟೇಶ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬಗೆಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.