ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Kangana Ranaut: ಕಂಗನಾ ರಣಾವತ್ ಸಂಸದ ಸ್ಥಾನಕ್ಕೆ ಕುತ್ತು? ಬಿಜೆಪಿ ಸಂಸದೆಗೆ ಹಿಮಾಚಲ ಹೈಕೋರ್ಟ್ ನೋಟಿಸ್!

Twitter
Facebook
LinkedIn
WhatsApp
Kangana Ranaut

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಆಯ್ಕೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಬೆನ್ನಲ್ಲೇ ಹಿಮಾಚಲ ಹೈಕೋರ್ಟ್​, ಸಂಸದೆ ಕಂಗನಾಗೆ ನೋಟಿಸ್ ಜಾರಿ ಮಾಡಿದೆ.

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶ ಹೈಕೋರ್ಟ್ ಬುಧವಾರ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ (Kangana Ranaut) ಮಂಡಿ ಲೋಕಸಭಾ ಕ್ಷೇತ್ರದಿಂದ ತನ್ನ ಆಯ್ಕೆಯನ್ನು ಕೈಬಿಡುವಂತೆ ಸಲ್ಲಿಸಿದ ಅರ್ಜಿಯ ಮೇಲೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರಾದ ಲಾಯಕ್ ರಾಮ್ ನೇಗಿ ಅವರು ಮಂಡಿಯಿಂದ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.
 
ಒಂದು ವೇಳೆ ನನ್ನ ನಾಮಪತ್ರವನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ರದ್ದು ಮಾಡದಿದ್ದರೆ, ನಾನೇ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು ಎಂದು ಅವರು ವಾದಿಸಿದ್ದಾರೆ. ಚುನಾವಣಾಧಿಕಾರಿ (ಡೆಪ್ಯುಟಿ ಕಮಿಷನರ್, ಮಂಡಿ) ತಪ್ಪಾಗಿ ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಚುನಾವಣಾ ಅಧಿಕಾರಿಯನ್ನೂ ಅವರು ಆರೋಪಿಯನ್ನಾಗಿ ಮಾಡಿದ್ದಾರೆ.

ನೇಗಿ ಅವರು ವಿದ್ಯುತ್, ನೀರು ಮತ್ತು ದೂರವಾಣಿ ಇಲಾಖೆಯಿಂದ “ಬಾಕಿಯಿಲ್ಲದ ಪ್ರಮಾಣಪತ್ರ” ನೀಡುವಂತೆ ಕೇಳಿದ ನಂತರ ಒಂದು ದಿನದಲ್ಲಿ ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿದರು. ನೇಗಿ ಅವರು ತಮ್ಮ ಪತ್ರಗಳನ್ನು ಚುನಾವಣಾಧಿಕಾರಿ ಸ್ವೀಕರಿಸಲಿಲ್ಲ ಮತ್ತು ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಿದರು ಎಂದು ಪಿಟಿಐ ವರದಿ ಮಾಡಿದೆ. 

ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನೇಗಿ ಅವರು ಮೇ 14 ರಂದು ಚುನಾವಣಾ ಪತ್ರಗಳನ್ನು ಸಲ್ಲಿಸಿ ಮೇ 15 ರಂದು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದರು ಎಂದು ಹೇಳಿದರು. ಆದರೆ ಚುನಾವಣಾಧಿಕಾರಿ ಅವುಗಳನ್ನು ಸ್ವೀಕರಿಸಲಿಲ್ಲ ಎಂದು ಆರೋಪಿಸಿದರು.

ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ನೋಟಿಸ್ ಜಾರಿ ಮಾಡುವಾಗ, ಆಗಸ್ಟ್ 21 ರೊಳಗೆ ಉತ್ತರವನ್ನು ಸಲ್ಲಿಸುವಂತೆ ರನೌತ್ ಅವರಿಗೆ ಸೂಚಿಸಿದ್ದಾರೆ.

ನೇಗಿ ಅವರು ತಮ್ಮ ಪತ್ರಗಳನ್ನು ಅಂಗೀಕರಿಸಿದ್ದರೆ ಚುನಾವಣೆಯಲ್ಲಿ ಗೆಲ್ಲಬಹುದಿತ್ತು ಮತ್ತು ಚುನಾವಣೆಯನ್ನು ಬದಿಗಿರಿಸುವಂತೆ ಕೇಳಿಕೊಂಡರು.

ಮಂಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಕಂಗನಾ ರಣಾವತ್ ಗೆಲುವು ಸಾಧಿಸಿದ್ದು, 4,62,267 ಮತಗಳನ್ನು ಗಳಿಸಿದ್ದರೆ, ರಣಾವತ್ 5,37,002 ಮತಗಳನ್ನು ಗಳಿಸಿದ್ದಾರೆ.

ಸಂಸತ್​ನಲ್ಲಿ ಒಟ್ಟಿಗೇ ಕಾಣಿಸಿಕೊಂಡ ಸೋನಿಯಾ ಗಾಂಧಿ- ಜಯಾ ಬಚ್ಚನ್

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಜಯಾ ಬಚ್ಚನ್ ಅವರು ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಬಿಜೆಪಿಯೇತರ ಸರ್ಕಾರದ ಆಡಳಿತದ ರಾಜ್ಯಗಳ ವಿರುದ್ಧದ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಂಡಿಯಾ ಬಣದ ಭಾಗವಾಗಿದ್ದಾರೆ. ಈ ವೇಳೆ ಸೋನಿಯಾ ಗಾಂಧಿಯೊಂದಿಗೆ ನಗುತ್ತಾ ಕಾಣಿಸಿಕೊಂಡ ಜಯಾ ಬಚ್ಚನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕಲಾಪದಲ್ಲಿ ಭಾಗವಹಿಸಲು ಸಂಸತ್ತಿನ ಆವರಣವನ್ನು ತಲುಪಿದಾಗ ಎಸ್‌ಪಿ ಸಂಸದೆ ಜಯಾ ಬಚ್ಚನ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಬಳಿಗೆ ಬಂದಿದ್ದಾರೆ. 

ಆಗ ಇಬ್ಬರೂ ಮಾತನಾಡಿಕೊಂಡು, ಜೋರಾಗಿ ನಗುತ್ತಿರುವುದು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿದೆ. ಕೇಂದ್ರ ಬಜೆಟ್‌ನಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧದ ತಾರತಮ್ಯವನ್ನು ಪ್ರತಿಭಟಿಸಿ ಇಂಡಿಯಾ ಬ್ಲಾಕ್ ಸಂಸದರು ಬುಧವಾರ ಲೋಕಸಭೆಯಲ್ಲಿ ವಾಕ್‌ಔಟ್ ನಡೆಸಿದರು.

ಒಂದು ಕಾಲದಲ್ಲಿ ಗಾಂಧಿ ಕುಟುಂಬಸ್ಥರು ಮತ್ತು ಬಚ್ಚನ್ ಕುಟುಂಬದವರು ತುಂಬಾ ಸ್ನೇಹದಿಂದ ಇರುತ್ತಿದ್ದರು ಎಂಬುದನ್ನು ಉಲ್ಲೇಖಿಸುವುದು ಸೂಕ್ತ. ನಂತರ ಸಮಯ ಬದಲಾದಂತೆ, ಈ ಸಂಬಂಧವು ದುರ್ಬಲಗೊಂಡಿತು. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತುಂಬಾ ಆತ್ಮೀಯರಾಗಿದ್ದರು. ರಾಜೀವ್ ಗಾಂಧಿ, ಸಂಜಯ್ ಗಾಂಧಿ ಮತ್ತು ಅಮಿತಾಬ್ ಬಚ್ಚನ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ನವದೆಹಲಿಯ ನಿವಾಸಿಯಾಗಿದ್ದಾಗ ಒಟ್ಟಿಗೆ ಸಮಯ ಕಳೆದಿದ್ದರು ಎಂದು ಹೇಳಲಾಗುತ್ತದೆ.

ರಾಜೀವ್ ಗಾಂಧಿಯವರ ಕೋರಿಕೆಯ ಮೇರೆಗೆ ಅಮಿತಾಭ್ ಬಚ್ಚನ್ 1984ರಲ್ಲಿ ಅಲಹಾಬಾದ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಆದರೆ ಬೋಫೋರ್ಸ್ ಹಗರಣದಲ್ಲಿ ಅವರ ಹೆಸರು ಬಂದಾಗ ಅಮಿತಾಬ್ ಬಚ್ಚನ್ ಲೋಕಸಭೆಗೆ ರಾಜೀನಾಮೆ ನೀಡಿದರು. ಅದಾದ ನಂತರ ರಾಜೀವ್ ಗಾಂಧಿ ಅಮಿತಾಬ್ ಬಚ್ಚನ್ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಅದಾದ ನಂತರ ಎರಡೂ ಕುಟುಂಬಗಳ ನಡುವಿನ ಗೆಳೆತನವೂ ಹದಗೆಡತೊಡಗಿತು ಎನ್ನಲಾಗುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist