ನಟಿ ಊರ್ಮಿಳಾ ಸಾಫ್ಟ್ ಪೋರ್ನ್ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!

ಕೆಲವು ನಟಿಯರನ್ನು ತಂದೂರಿ ಕೋಳಿ, ಐಟಮ್ ಗರ್ಲ್, ಶೀಲಾ ಕಿ ಜವಾನಿ ಎಂದೆಲ್ಲಾ ಕರೆಯಲಾಗುತ್ತದೆ. ಆ ಪದಗಳು ಕೆಲವು ನಟಿಯರಿಗೆ ಅಹಿತಕರ ಎನಿಸೋದಿಲ್ಲ. ಹೀಗಾಗಿ ನನ್ನ ಹೇಳಿಕೆ ಆಕ್ಷೇಪಾರ್ಹ ಏಕಾಗುತ್ತೆ ಎಂದು ಕಂಗನಾ ರಾಣಾವತ್ ಪ್ರಶ್ನಿಸಿದ್ದಾರೆ. ಅವರು ಆ ರೀತಿಯ ಹೆಸರುಗಳ ವಿಚಾರದಲ್ಲಿ ಖುಷಿಯಾಗಿದ್ದರೆ, ಅದನ್ನು ನಾಚಿಕೆಗೇಡಿನ ಸಂಗತಿ ಎಂದು ಏಕೆ ಭಾವಿಸಬೇಕು? ಊರ್ಮಿಳಾ ಮಾತೋಂಡ್ಕರ್ ವಿಚಾರವನ್ನೇ ಹೇಳೋದಾದರೆ ನಾನು ಅವರಿಗೆ ವೈಯಕ್ತಿವಾಗಿ ನಿಂದಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಏಕೆಂದರೆ ಊರ್ಮಿಳಾ ಅವರು ಆ ಪಾತ್ರದಲ್ಲಿ ಖುಷಿಯಾಗಿದ್ದಾರೆ ಎಂದು ಕಂಗನಾ ರಾಣಾವತ್ ಹೇಳಿದ್ಧಾರೆ.
ಕಾಂಗ್ರೆಸ್ ನಾಯಕಿಯೂ ಆಗಿರುವ ಊರ್ಮಿಳಾ ಮಾತೋಂಡ್ಕರ್ ವಿರುದ್ಧ 2020ರಲ್ಲಿ ಕಂಗನಾ ರಾಣಾವತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದದ ಕುರಿತಾಗಿ ಇದೀಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂಗನಾ ರಾಣಾವತ್, ತಾವು ತಮ್ಮ ಸಿನಿಮಾಗಳಲ್ಲಿ ಪಾತ್ರಗಳ ಆಯ್ಕೆ ವೇಳೆ ಆದಷ್ಟೂ ಸಮತೋಲನ ಕಾಯ್ದುಕೊಂಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ನಾನು ಎಂದಿಗೂ ಐಟಂ ಡ್ಯಾನ್ಸ್ ಮಾಡಲಿಲ್ಲ. ಆದರೆ ಊರ್ಮಿಳಾ ಮಾತೋಂಡ್ಕರ್ ಅವರು ಅವರ ಸಿನಿಮಾ ಜೀವನದ ರೀತಿಯದ್ದೇ ಆದ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಂಗನಾ ರಾಣಾವತ್ ಟಾಂಗ್ ಕೊಟ್ಟಿದ್ದಾರೆ.