Tuesday, November 29, 2022
ಖಡ್ಗ ಹಿಡಿದು ಶ್ರದ್ಧಾ ಹಂತಕ ಅಫ್ತಾಬ್ ಮೇಲೆ ದಾಳಿಗೆ ಯತ್ನ; ಪೊಲೀಸ್‌ ವಾಹನದ ಮೇಲೆ ಮುಗಿಬಿದ್ದ ಗುಂಪು!-ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..-ಪಾನಿಪುರಿ ತಿನ್ನುತ್ತಿದ್ದ ಅಕ್ಕತಂಗಿಯರ ಮೇಲೆ ಹರಿದ ಕಾರು: ತಂಗಿ ಸಾವು-ಒಂದೇ ಓವರ್​ನಲ್ಲಿ 7 ಸಿಕ್ಸರ್..! 16 ಸಿಕ್ಸರ್, 10 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಸಿಡಿಸಿದ ರುತುರಾಜ್..!-ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಹೀರೋ ಯಾರು?-ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!-ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೇ ಚಾಲಕನಿಗೆ ಚಾಕು ಇರಿದ ಪುಂಡರು!-ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ-50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!-ವಿದ್ಯುತ್ ಟವರ್‌ನಲ್ಲಿ ಸಿಕ್ಕಿಹಾಕಿಕೊಂಡ ಮಿನಿ ವಿಮಾನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Kamal Haasan: ಬಹುಭಾಷಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

Twitter
Facebook
LinkedIn
WhatsApp

ಬಹುಭಾಷಾ ನಟ ಕಮಲ್ ಹಾಸನ್ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವೆಂಬರ್ 23ರಂದು ಅರೋಗ್ಯದಲ್ಲಿ ಕೊಂಚ ಏರುಪೇರು ಕಂಡ ಕಾರಣ ಚಿಕಿತ್ಸೆಗೆಂದು ತಿಳಿದು ಬಂದಿದೆ. ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು ತ್ರೀವ್ರವಾದ ಕಾರಣ ದಾಖಲಾಗಿದ್ದಾರೆ.  ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಆನಂತರ ಡಿಸ್ಚಾರ್ಜ್‌ ಆಗಬಹುದು ಎನ್ನಲಾಗಿದೆ. 

ಕಮಲ್ ಹಾಸನ್ ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಇಂಡಿಯಾ 2 ಸಿನಿಮಾ, ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನಿರೂಪಣೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಂಕರ್ ಮತ್ತು ಲೂಕಾ ಪ್ರೊಡಕ್ಷನ್ ನಡುವೆ ಕಾನೂನು ಹೋರಾಟಗಳಿಂದಾಗಿ ಇಂಡಿಯನ್ 2 ಹಲವಾರು ವಿವಾದಗಳಲ್ಲಿ ಮುಳುಗಿದೆ ಜೊತೆಗೆ ಸೆಟ್‌ನಲ್ಲಿ ನಡೆದಿರುವ ಅವಘಡದಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದು ಕೆಲವು ದಿನಗಳ ಹಿಂದೆ ಚಿತ್ರೀಕರಣ ಶುರು ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಖ್ಯಾತ ನಿರ್ದೇಶಕರಾದ ಕೆ ವಿಶ್ವನಾಥ್‌ ಅವರನ್ನು ಕಮಲ್ ಹಾಸನ್ ನಿವಾಸದಲ್ಲಿ ಭೇಟಿ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ‘ಮಾಸ್ಟರ್ ನಿರ್ದೇಶಕ ಕೆ ವಿಶ್ವನಾಥ್‌ ಸರ್‌ ಅವರನ್ನು ನಿವಾಸದಲ್ಲಿ ಭೇಟಿ ಮಾಡಿರುವೆ.  ತುಂಬಾ ಹಳೆ ನೆನಪುಗಳು..ಗೌರವ ಹೆಚ್ಚಾಗಿದೆ’ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದರು. 

ಹುಟ್ಟುಹಬ್ಬದ ದಿನ ಕಮಲ್ ಹಾಸನ್ ಮಣಿ ರತ್ನಂ ಜೊತೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು. 1987ರಲ್ಲಿ ನಾಯಕ ಸಿನಿಮಾದಲ್ಲಿ ಮಣಿರತ್ನಂ ಮತ್ತು ಕಮಲ್ ಒಟ್ಟಿಗೆ ಕೆಲಸ ಮಾಡಿದ್ದರು. ’35 ವರ್ಷಗಳ ಹಿಂದೆ ನಾನು ಮಣಿರತ್ನಂ ಜೊತೆ ಕೆಲಸ ಮಾಡಲು ಎಷ್ಟು ಖುಷಿ ಇತ್ತು ಅಷ್ಟೇ ಖುಷಿ ಈಗಲೂ ಇದೆ. ಒಂದೇ ಮೈಂಡ್‌ಸೆಟ್‌ ಇರುವವರ ಜೊತೆ ಕೆಲಸ ಮಾಡುವುದಕ್ಕೆ ಸಂತೋಷವಿದೆ. ಈ ಚಿತ್ರದಲ್ಲಿ ರೆಹೆಮಾನ್‌ ಕೂಡ ಕೈ ಜೋಡಿಸಲಿದ್ದಾರೆ’ಎಂದು ಬರೆದುಕೊಂಡಿದ್ದರು.

ಕಮಲ್ ಜೀವನಶೈಲಿ:

ಚಲನಚಿತ್ರಗಳು ಅವರ ನೆಟ್‌ವರ್ಥ್‌ನ ದೊಡ್ಡ ಭಾಗವಾಗಿದೆ. ಆದರೆ ಅವರು ರಾಜಕೀಯ  ಕ್ಷೇತ್ರವನ್ನು ಪ್ರವೇಶಿಸಿದಾಗ ಅದು ಹೆಚ್ಚಾಯಿತು.  ಕಮಲ್ ಹಾಸನ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಯುನೈಟೆಡ್ ಕಿಂಗ್‌ಡಂನ ಲಂಡನ್‌ನಲ್ಲಿರುವ ಆಸ್ತಿಯನ್ನು ಇತ್ತೀಚೆಗೆ ನವೀಕರಿಸಿಲಾಗಿದೆ. ಅಲ್ಲಿ ನಟ  17 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ 131 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ.ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಪಾಶ್ ರೆಸಿಡೆನ್ಶಿಯಲ್ ಸೊಸೈಟಿಗಳಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಈ ಎರಡು ಫ್ಲಾಟ್‌ಗಳ ಅಂದಾಜು ಬೆಲೆ 19.5 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇವುಗಳ ಹೊರತಾಗಿ, ಹಾಸನ್ ಅವರು ಚೆನ್ನೈನಲ್ಲಿ ಹೊಂದಿರುವ ವಾಣಿಜ್ಯ ಮತ್ತು ವಸತಿ ಆಸ್ತಿಗಳ ಬೆಲೆ ಸುಮಾರು 92.5 ಕೋಟಿ ರೂಪಾಯಿ ಎಂದು ವರದಿಯಾಗಿದೆ.ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಹೊಂದಿರುವ ಬಹು ಆಸ್ತಿಗಳ ಹೊರತಾಗಿ,  ಲಂಡನ್‌ನಲ್ಲಿ ಅವರ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಿದ್ದಾರೆ. ವರದಿಗಳ ಪ್ರಕಾರ ಅವರ ಲಂಡನ್ ಮನೆ ಸುಮಾರು 2.5 ಕೋಟಿ ರೂ.

ಕಮಲ್ ಹಾಸನ್ ಅವರು ಸರ್ಕಾರಕ್ಕೆ ಮಾಡಿದ ಅಧಿಕೃತ ಘೋಷಣೆಯ ಪ್ರಕಾರ, ಅವರ ಎಲ್ಲಾ ಆಸ್ತಿಯನ್ನು ಒಳಗೊಂಡಂತೆ ಅವರ ನಿವ್ವಳ ಮೌಲ್ಯವು ಸರಿಸುಮಾರು 177 ಕೋಟಿ ಎಂದು ಹೇಳಲಾಗುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ