ಕಲಬುರಗಿ : ನಾಪತ್ತೆಯಾಗಿದ್ದ ವ್ಯಕ್ತಿ ರಸ್ತೆ ಬದಿ ನೀರಿನ ಹೊಂಡದಲ್ಲಿ ಕಾರು ಸಮೇತ ಶವವಾಗಿ ಪತ್ತೆ
ಆ ವ್ಯಕ್ತಿ ತಾನಾಯಿತು ತನ್ನ ಕೆಲಸವಾಯಿತು ಅಂತಾ ಜೀವನ ಸಾಗಿಸುತ್ತಿದ್ದನು.. ಆದರೆ ಅದೇನಾಯ್ತೋ ಗೊತ್ತಿಲ್ಲ, ಜನವರಿ 11 ರಂದು ಕಾರಿನ ಸಮೇತ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ರಸ್ತೆ ಬದಿಯ ನೀರಿನ ಹೊಂಡದಲ್ಲಿ ಬಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹ ಹೊರಗಡೆ ತೆಗೆಯಲಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಮುಳುಗಡೆಯಾಗಿರೋ ಕಾರು….. ಕಾರಿನಿಂದ ಹೊರ ತೆಗೆಯುತ್ತಿರೋ ಮೃತದೇಹ.. ಮತ್ತೊಂದೆಡೆ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ತಾಲೂಕಿನ ಫಿರೋಜಬಾದ್ ಬಳಿ..
ಈ ಫೋಟೊದಲ್ಲಿ ಕಾಣ್ತಾಯಿರೋ 40 ವರ್ಷದ ವ್ಯಕ್ತಿಯ ಹೆಸರು ಅಮೃತ್.. ಕಲಬುರಗಿ ನಗರದ ಸುಂದರ ನಗರ ಬಡಾವಣೆಯ ನಿವಾಸಿಯಾದ ಅಮೃತ್, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಜನವರಿ 11 ರಂದು ಕಾರಿನ ಸಮೇತ ನಾಪತ್ತೆಯಾಗಿದ್ದ. ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಗರದ ಬ್ರಹ್ಮಪುರ ಠಾಣೆಯಲ್ಲಿ ಅಮೃತ್ ನಾಪತ್ತೆಯಾಗಿರೋ ಬಗ್ಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಮೃತ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಜ. 23 ಫಿರೋಜಬಾದ್ ಗ್ರಾಮದ ಬಳಿಯ ಹೊಂಡದಲ್ಲಿ ಕಾರು ಸಮೇತ ಮೃತದೇಹ ಪತ್ತೆಯಾಗಿದೆ. ಹೀಗಾಗೇ ಅಮೃತ್ ಸಾವಿನ ಸುತ್ತ ನೂರೆಂಟು ಅನುಮಾನದ ಹುತ್ತ ಬೆಳೆದಿದ್ದು, ನಾಪತ್ತೆಯಾಗಿದ್ದ ಅಮೃತ್ ಕೊಲೆಯಾದ್ರಾ.. ಅಥವಾ ಅಪಘಾತದಿಂದ ಮೃತಪಟ್ಟನಾ ಎನ್ನೋ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ.
ಜನವರಿ 11 ರಂದು ಅಮೃತ್ ನಾಪತ್ತೆಯಾದ ನಂತರ ಆತ ಕಾರಿನಲ್ಲಿ ಎಲ್ಲಿಗೆ ಹೊರಟಿದ್ದರು. ಆತನ ಜೊತೆಗೆ ಇನ್ನೂ ಯಾರು ಯಾರು ಇದ್ದರು ಅನ್ನೊದೆಲ್ಲ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಅಮೃತ್ ನಿಗೂಢವಾಗಿ ಸಾವನ್ನಪ್ಪಿದ್ದರ ಹಿಂದೆ ಅನುಮಾನಗಳು ಕಾಡಲಾಂಭಿಸಿವೆ.
ಅಷ್ಟಕ್ಕೂ ಅಮೃತ್‌ನ್ನ ಯಾರಾದರೂ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹ ಸಮೇತ ಕಾರನ್ನ ಹೊಂಡದಲ್ಲಿ ಬಿಸಾಕಿದ್ದಾರಾ ಅನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಹೊಂಡದಲ್ಲಿ ಕಾರು ಬಿದ್ದಿದ್ದನ್ನ ಕುರಿಗಾಹಿಯೋರ್ವ ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.
ತಕ್ಷಣ ಟ್ರಾಫಿಕ್ 1 ಪೊಲೀಸರು ಹಾಗೂ ಫರಹತ್ತಬಾದ್ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಹೊಂಡದಲ್ಲಿ ಬಿದ್ದಿದ್ದ ಕಾರನ್ನ ಮೇಲಕ್ಕೆ ಎತ್ತಿ ಮೃತದೇಹವನ್ನ ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ. ಫರಹತ್ತಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ರೌಡಿ ಶೀಟರ್ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್
ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ರೌಡಿ ಶೀಟರ್ ಒಬ್ಬನನ್ನು (Rowdy Sheeter Murder) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿವೇಕ್ ನಗರದ ಮಾಯಾ ಬಜಾರ್ ಸ್ಲಂನಲ್ಲಿ (Maya bazar Slum) ನಡೆದ ಘಟನೆ ಇದಾಗಿದ್ದು, ಕೊಲೆಯಾದ ರೌಡಿ ಶೀಟರ್‌ನನ್ನು ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಎಂದು ಗುರುತಿಸಲಾಗಿದೆ (Murder Case).
ಮಿಲಿಟ್ರಿ ಸತೀಶ್ ಮಾಯಾ ಬಜಾರ್ ಸ್ಲಂನಲ್ಲಿ ವಾಸಿಸುತ್ತಿದ್ದು, ಮಂಗಳವಾರ ರಾತ್ರಿ ಮನೆಯ ಹೊರಗಡೆ ಮಲಗಿದ್ದ. ಬೆಳಗ್ಗಿನ ಜಾವ ಮೂರು ಗಂಟೆಯ ಹೊತ್ತಿಗೆ ಆತನ ಮನೆಯ ವಠಾರಕ್ಕೆ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಪರಾರಿಯಾಗಿದ್ದಾರೆ.
ಹಳೇ ವೈಷಮ್ಯ ಅಥವಾ ವೈಯಕ್ತಿಕ ಕಾರಣಕ್ಕೆ ಕೊಲೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಲೆಗಾರರು ಮಿಲಿಟ್ರಿ ಸತೀಶ್‌ಗೆ ಪರಿಚಿತರೇ ಆಗಿರುವುದರಿಂದ ಪೊಲೀಸರಿಗೆ ಕೆಲವು ಸಂಶಯಗಳಿವೆ. ಜತೆಗೆ ಸ್ಥಳದ ಸಿಸಿ ಟಿವಿ ಫೂಟೇಜ್ ಪಡೆದು ತಪಾಸಣೆ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ವಿವೇಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ. ನಡೆಸಿದ್ದಾರೆ.