ಕಲಬುರಗಿ ನೂತನ ಡಿಸಿಪಿಯಾಗಿ ಕನ್ನಿಕಾ ಸಿಕ್ರಿವಾಲ್ ಅಧಿಕಾರ ಸ್ವೀಕಾರ
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಐಪಿಎಸ್ ಅಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಅಧಿಕಾರ ವಹಿಸಿಕೊಂಡರು.
ನಿರ್ಗಮಿತ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರಿಂದ ಸಿಕ್ರಿವಾಲ್ ಅವರು ಅಧಿಕಾರ ವಹಿಸಿಕೊಂಡರು. ಕನ್ನಿಕಾ ಅವರು ಸಿಐಡಿ ಎಸ್ಪಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. 2018ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಪೊಲೀಸ್ ಆಯುಕ್ತ ಚೇತನ ಅವರನ್ಬು ಭೇಟಿ ಮಾಡಿ ಚರ್ಚೆ ನಡೆಸಿದರು. ಅಲ್ಲದೆ ಕಲಬುರಗಿ ಎಸ್ಪಿಯಾಗಿ ವರ್ಗಾವಣೆಗೊಂಡ ಶ್ರೀನಿವಾಸುಲು ಅವರೊಂದಿಗೆ ಸಮಾಲೋಚನೆ ನಡೆಸಿದರು. ನಗರದ ವಿವಿಧ ಠಾಣೆಗಳ ಪಿಐಗಳು ಹಾಗೂ ಎಸಿಪಿಗಳು ಶುಭ ಕೋರಿದರು. ಬಳಿಕ ಅವರೊಂದಿಗೆ ಔನಪಚಾರಿಕ ಸಭೆ ನಡೆಸಿದರು.
ಜೆಸ್ಕಾಂ ನೂತನ ಎಂಡಿ ರವೀಂದ್ರ ಅಧಿಕಾರ ಸ್ಚೀಕಾರ
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಕೆಎಎಸ್ ಅಧಿಕಾರಿ ರವೀಂದ್ರ ಕರಿಲಿಂಗಣ್ಣನವರ ಅಧಿಕಾರ ವಹಿಸಿಕೊಂಡರು.
ಇದುವರೆಗೂ ಅವರು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಸರ್ಕಾರ ಜೆಸ್ಕಾಂ ಎಂಡಿಯಾಗಿ ವರ್ಗಾವಣೆಗೊಳಿಸಿದೆ.
ಕಲಬುರಗಿ ನಗರದಲ್ಲಿರುವ ಜೆಸ್ಕಾಂ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಪ್ರಭಾರಿ ತಾಂತ್ರಿಕ ನಿರ್ದೇಶಕರು ಆರ್.ಡಿ. ಚಂದ್ರಶೇಖರ , ಮುಖ್ಯ ಅಭಿಯಂತರರು( ಕಾ ) ಎಚ್. ವೆಂಕಟೇಶಪ್ರಸಾದ. ಸಿಎಫ್ಓ ರೇಣುಕಾ, .ಕಾರ್ಯ ನಿರ್ವಾಹಕ ಅಭಿಯಂತರರು ವಿಭಾಗ -2 ರ ಎಂ.ಎ.ಮಠಪತಿ.. ಕಾರ್ಯ ನಿರ್ವಾಹಕ ಅಭಿಯಂತರರು ಯಾದಗಿರಿ ಡಿ.ರಾಘವೇಂದ್ರ.. ರಮೇಶ್ ಪವಾರ್ ಸಂತೋಷ ಹಿಬಾರೆ. ರಾಘವೇಂದ್ರ ಪಿ.ಎಸ್, ಮಿಹಾಜುದ್ದಿನ್..ಪವಕುಮಾರ ಸಂತೋಷ ಡಂಗೆ ಶಿವಕುಮಾರ್ ಕಿರಣ್ ರಂಜೊಳ್ಕರ್ ಚನ್ನುಗೌಡ ಯಡ್ರಾಮಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಶುಭ ಕೋರಿದರು. ಬಳಿಕ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.