ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಡಬದ ಯುವಕ ವಿದೇಶದಲ್ಲಿ ನೇಣಿಗೆ ಶರಣು

Twitter
Facebook
LinkedIn
WhatsApp
322365357 895363811785293 5194284923258096333 n 1

ಕಡಬ, ಮೇ 30 : ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32 ವರ್ಷ) ಎಂದು ಗುರುತಿಸಲಾಗಿದೆ.

ಇವರು ಕೊಲ್ಲಿ ರಾಷ್ಟ್ರದ ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.

ಆತ್ಮಹತ್ಯೆ ಮಾಡಿಕೊಂಡ ಸಂದೇಶ್ ಸಂಬಂಧಿಯಾದ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬ ಯುವಕ ಕೂಡಾ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಬೇಗ ಕರ್ತವ್ಯ ಮುಗಿಸಿ ಬಂದ ಸಂದೇಶ್ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ