ಅಪಾರ್ಟ್ಮೆಂಟ್ನಿಂದ ಜಿಗಿದು ಯುವತಿ ಸಾವು
ಬೆಂಗಳೂರು: ಈ ಹಿಂದೆ ಧರ್ಮಸ್ಥಳದಲ್ಲಿ (Dharmasthala) ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅಪಾಟ್ಮೆರ್ಂಟ್ನಿಂದ ಜಿಗಿದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ವಿಜಯಲಕ್ಷ್ಮಿ (17) ವರ್ಷ ಮೃತ ಯುವತಿ. ಈ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಖಿನ್ನತೆಗೊಳಗಾಗಿ ವಿದ್ಯಾರ್ಥಿನಿ ಇಲ್ಲಿನ ಬ್ರೈಡ್ ಅಪಾರ್ಟ್ ಮೆಂಟ್ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಳ್ಳಲು ಧರ್ಮಸ್ಥಳಕ್ಕೆ ಹೋಗಿದ್ದಳು. ಅಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಸ್ಥಳೀಯ ರಬ್ಬರು ರಕ್ಷಣೆ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ರು. ಪೋಷಕರಿಗೆ ಫೋನ್ ಮಾಡಿ ತಿಳಿ ಹೇಳಿ ಯುವತಿ ಯನ್ನು ವಾಪಸ್ ಕಳುಹಿಸಿದ್ರು. ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸ್ ಬಂದು ಅಪಾರ್ಟ್ ಮೆಂಟ್ ನ ಟೆರೇಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇತ್ತ ಪುತ್ರಿ ಕಾಣೆಯಾಗಿದ್ದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ಕೂಡ ದಾಖಲಾಗಿತ್ತು. ಸದ್ಯ ಯುವತಿ ಆತ್ಮಹತ್ಯೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಡಿಕೇರಿ : ಮರಕ್ಕೆ ಢಿಕ್ಕಿ ಹೊಡೆದ ಶಾಲಾ ಮಕ್ಕಳಿದ್ದ KSRTC ಬಸ್: ತಪ್ಪಿದ ಅನಾಹುತ..!
ಮಡಿಕೇರಿ : ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳೇ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಎಂಬಲ್ಲಿ ನಡೆದಿದೆ.
ಮಡಿಕೇರಿಯಿಂದ ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿದ್ದ KSRTC ಬಸ್ ಕುಂಬಾರಗಡಿಗೆ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿಯಾಗಿದೆ.
ಬಸ್ ನಲ್ಲಿ ಹೆಚ್ಚಾಗಿ ಶಾಲಾ ಮಕ್ಕಳೆ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮರಕ್ಕೆ ಢಿಕ್ಕಿಯಾಗದೆ ಮುಂದೆ ಚಲಿಸಿದಲ್ಲಿ ಬಸ್ 50 ಅಡಿ ಪ್ರಪಾತಕ್ಕೆ ಉರುಳಿ ಬೀಳುವ ಆತಂಕ ಎದುರಾಗಿತ್ತು.
ಸೂರ್ಲಬ್ಬಿ ರಸ್ತೆ ಕಿರಿದಾಗಿದ್ದು, ತಿರುವುಗಳೇ ಹೆಚ್ಚಾಗಿರುವ ಇಲ್ಲಿ ಯಾವುದೇ ನಾಮಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.