ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Jharkhand: ಅತ್ಯಾಚಾರ ಯತ್ನ, ಒಲ್ಲೆ ಎಂದಿದ್ದಕ್ಕೆ ಕೋಪಗೊಂಡು ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ

Twitter
Facebook
LinkedIn
WhatsApp
768 512 17440094 thumbnail 3x2 don

ಅತ್ಯಾಚಾರ ಯತ್ನ ಸಫಲವಾಗಿಲ್ಲ ಎಂದು ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿತ್ತು. ಇದೀಗ ಘಟನೆ ನಡೆದು ಒಂದು ತಿಂಗಳ ಬಳಿಕ ಮಹಿಳೆಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಜನವರಿ 7 ರಂದು ಹಜಾರಿಬಾಗ್​ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯು ಶೇ.70ರಷ್ಟು ಸುಟ್ಟುಹೋಗಿದ್ದಳು. ಅತ್ಯಾಚಾರ ಯತ್ನವನ್ನು ವಿರೋಧಿಸಿದ್ದಕ್ಕಾಗಿ ನಾಲ್ವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಆರೋಪಿಗಳಲ್ಲಿ ಮೂವರು ಆಕೆಯ ಸಂಬಂಧಿಕರು ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆಯನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಚಿಕಿತ್ಸೆ ನೀಡಲಾಗುತ್ತಿತ್ತು.

ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳಲ್ಲದೆ, ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಮಹಿಳೆ ಮತ್ತು ಆಕೆಯ ಪತಿ ನೀಡಿರುವ ಹೇಳಿಕೆಗಳಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ನಾಲ್ವರು ಆರೋಪಿಗಳಲ್ಲಿ ಮೂವರು ಸಂಬಂಧಿಕರು ಸಹ ಸೇರಿದ್ದಾರೆ ಎಂದು ಎಸ್‌ಪಿ ಹೇಳಿದರು, ಸಹಾಯಕ್ಕಾಗಿ ಕೂಗಿದಾಗ ನೆರೆಹೊರೆಯವರು ತನ್ನನ್ನು ರಕ್ಷಿಸಿದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಳು. ಆದರೆ ಪತಿ ತನ್ನನ್ನು ರಕ್ಷಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಪತಿಗೆ ಈಗಾಗಲೇ ಮದುವೆಯಾಗಿದ್ದು, ಸಂತ್ರಸ್ತೆ ಆತನ ನಾಲ್ಕನೇ ಪತ್ನಿ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಲ್ಲಿ ಒಬ್ಬ ಮಹಿಳೆ ಮತ್ತು ಅವಳು ಸಂತ್ರಸ್ತೆಯ ಸೊಸೆಯಾಗಿರುವುದರಿಂದ ಅತ್ಯಾಚಾರಕ್ಕೆ ಯತ್ನಿಸಿದ ಮಹಿಳೆಯ ಆರೋಪದ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅತ್ತಿಗೆಯ ಪುತ್ರರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಪೊಲೀಸ್ ಪ್ರಕರಣದ ತನಿಖೆ ನಡೆಸುತ್ತಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅನುಜ್ ಓರಾನ್ ಮಾತನಾಡಿ, ಎಫ್‌ಐಆರ್‌ನಲ್ಲಿ ಸಂತ್ರಸ್ತೆ ಮಾಡಿರುವ ಆರೋಪಗಳು ನಮ್ಮ ಪ್ರಾಥಮಿಕ ತನಿಖೆಗೆ ಹೊಂದಿಕೆಯಾಗುವುದಿಲ್ಲ.

ಆರೋಪಿಗಳ ವಿರುದ್ಧ ನಮಗೆ ಇದುವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಗಾಗಿ ಕಾಯುತ್ತಿದ್ದೇವೆ ಎಂದರು. ಇದೇ ವೇಳೆ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ