ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜಾಂಡೀಸ್ ನಿಂದಾಗಿ 40ನೇ ವಯಸ್ಸಿನ ಹರಿಯಾಣದ ಗಾಯಕ ರಾಜು ಪಂಜಾಬಿ ನಿಧನ

Twitter
Facebook
LinkedIn
WhatsApp
ಜಾಂಡೀಸ್ ನಿಂದಾಗಿ 40ನೇ ವಯಸ್ಸಿನ ಹರಿಯಾಣದ ಗಾಯಕ ರಾಜು ಪಂಜಾಬಿ ನಿಧನ

ಹರಿಯಾಣದ ಜನಪ್ರಿಯ ಗಾಯಕ ರಾಜು ಪಂಜಾಬಿ ಹಿಸಾರ್‌ನ ಖಾಸಗಿ ಆಸ್ಪತ್ರೆಯಲ್ಲಿ 40ನೇ ವಯಸ್ಸಿನಲ್ಲಿ ನಿಧನರಾದರು. 

ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ನಂತರ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಕನ ಅಂತಿಮ ವಿಧಿವಿಧಾನಗಳನ್ನು ಅವರ ಸ್ಥಳೀಯ ಗ್ರಾಮವಾದ ರಾಜಸ್ಥಾನದ ರಾವತ್ಸರ್‌ನಲ್ಲಿ ನಡೆಸಲಾಗುತ್ತದೆ.

ರಾಜು ಪಂಜಾಬಿ ನಿಧನಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದು ಹರಿಯಾಣ ಸಂಗೀತ ಉದ್ಯಮಕ್ಕೆ ‘ಭರಿಸಲಾಗದ ನಷ್ಟ’ ಎಂದು ಹೇಳಿದರು. ದೇವರು ಅವರ ಪವಿತ್ರ ಪಾದದಲ್ಲಿ ಗಾಯಕನ ಆತ್ಮಕ್ಕೆ ಸ್ಥಾನ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಗಾಯಕ ಹರ್ಯಾನ್ವಿ ಸಂಗೀತ ಉದ್ಯಮದಲ್ಲಿ ‘ದೇಸಿ ದೇಸಿ’, ‘ಅಚಾ ಲಗೇ ಸೆ’, ‘ತು ಚೀಜ್ ಲಜ್ವಾಬ್’, ‘ಭಾಂಗ್ ಮೇರೆ ಯಾರಾ ನೆ’, ‘ಲಾಸ್ಟ್ ಪೆಗ್’ ಮುಂತಾದ ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಅಲ್ಲದೆ ಅವರು ಜನಪ್ರಿಯ ಗಾಯಕಿ ಸಪ್ನಾ ಚೌಧರಿ ಅವರೊಂದಿಗೆ ಕೆಲಸ ಮಾಡಿದರು. ಅವರ ಸಾವಿನಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ.

ಕುಡಿತದ ಚಟಕ್ಕೆ ಬಿದ್ದು ಪತಿ- ಮಗಳಿಂದ ದೂರವಾದೆ: ನಟಿ ಊರ್ವಶಿ ಕಣ್ಣೀರ ಕಥೆ

ಬೆಂಗಳೂರು: ಬಹುಭಾಷಾ ನಟಿ ಊರ್ವಶಿ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ, ವಿವಾಹವಾದ 8 ವರ್ಷದ ಬಳಿಕ ನಟಿ ಊರ್ವಶಿ ಡಿವೋರ್ಸ್ ಪಡೆದಿದ್ದರು. “ಅದಕ್ಕೆ ಕಾರಣ ನನ್ನ ಕುಡಿತ” ಎಂದು ಊರ್ವಶಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ನಟಿ ಊರ್ವಶಿ ಮಾತನಾಡಿ, 23 ವರ್ಷಗಳ ಹಿಂದೆ ಊರ್ವಶಿ ಅವರು ಮಲಯಾಳಂ ನಟ ಮನೋಜ್ ಕೆ. ಜಯನ್ ಅವರ ಕೈ ಹಿಡಿದಿದ್ದರು. ʻನಮ್ಮ ವಿಚ್ಛೇದನಕ್ಕೆ ಒಂದೇ ಕಾರಣವೆಂದರೆ ಅದು ಕುಡಿತದ ಚಟ. ಮನೋಜ್ ಕೆ. ಜಯನ್ ಅವರ ಕುಟುಂಬದಲ್ಲಿ ಎಲ್ಲರಿಗೂ ಕುಡಿತದ ಅಭ್ಯಾಸವಿತ್ತು. ಮನೋಜ್‌ ನನಗೆ ಆರಂಭದಲ್ಲಿ ಮದ್ಯ ಸೇವಿಸುವಂತೆ ಒತ್ತಾಯಿಸಿದರು. ನಾನು ಮುಂದೆ ಇದಕ್ಕೆ ತುಂಬ ಅಡಿಕ್ಟ್‌ ಆಗಿಬಿಟ್ಟೆ. ಮುಂದೆ ಈ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಯಿತು. ಈ ಸಾಂಸಾರಿಕ ಗಲಾಟೆಯಲ್ಲಿ ನನ್ನ ಮಗಳು ನನ್ನಿಂದ ದೂರ ಆಗುವಂತಾಯಿತು. ಕೊನೆಗೂ ನನ್ನ ಮಗಳು ನನ್ನ ಕೈಗೆ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಎರಡನೆಯ ಮದುವೆಗೂ ಮುಂಚೆ ತಾವು ಅನುಭವಿಸಿದ್ದ ನೋವಿನ ಕುರಿತು ಊರ್ವಶಿ ಮಾತನಾಡಿದ್ದಾರೆ. ನನ್ನ ಮಗಳನ್ನು ಕಳುಹಿಸಿಕೊಡುವಂತೆ ಕೋರ್ಟ್​ ಮೊರೆ ಹೋಗಿದ್ದೆ. ಮನೋಜ್​ ನಮ್ಮ ಮಗಳನ್ನು ನನ್ನ ಬಳಿ ಬಿಡುತ್ತಿರಲಿಲ್ಲ. ನಾನು ಕುಡಿತದ ದಾಸಿಯಾಗಿದ್ದೆ ಎಂಬ ಕಾರಣ ಹೇಳುತ್ತಿದ್ದ. ಇದರಿಂದ ನಾನು ಒಂಟಿಯಾಗಿ ಖಿನ್ನತೆಗೆ ಜಾರಿದ್ದೆ.  ಹೀಗೆ ಆರು ವರ್ಷ ನೊಂದು ಬೆಂದು ಹೋದೆ ಎಂದಿರುವ ನಟಿ, ನಂತರ  ಶಿವಪ್ರಸಾದ್‌ ಅವರ ಜೊತೆ ಮದುವೆಯಾದರು. ಆಗ ನನಗೆ 40 ವರ್ಷ ವಯಸ್ಸಾಗಿತ್ತು. ಇದಕ್ಕೂ ಜನ ಸಾಕಷ್ಟು ಕುಹಕವಾಡಿದರು ಎಂದಿದ್ದಾರೆ.

ಊರ್ವಶಿ ತಮ್ಮ 10ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ದಿಗ್ಗಜ ಕಲಾವಿದರ ಜತೆ ನಾಯಕಿಯಾಗಿ ಮಿಂಚಿದ ಚೆಲುವೆ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಆದರೆ ನಟಿಯ ವೈಯಕ್ತಿಕ ಜೀವನ ಮಾತ್ರ ಚೆನ್ನಾಗಿರಲಿಲ್ಲ. 23 ವರ್ಷಗಳ ಹಿಂದೆ ಊರ್ವಶಿ ಮಲಯಾಳಂ ನಟ ಮನೋಜ್ ಕೆ. ಜಯನ್ ಕೈ ಹಿಡಿದಿದ್ದರು. ಇವರಿಗೆ ತೇಜ ಲಕ್ಷ್ಮಿ ಎನ್ನುವ ಮಗಳು ಇದ್ದಾಳೆ. ಆದರೆ ಮದುವೆಯಾದ 8 ವರ್ಷಕ್ಕೆ ಈ ದಂಪತಿ ಬೇರೆಯಾದರು. ವಿಚ್ಛೇದನದ 6 ವರ್ಷಗಳ ಬಳಿಕ ಚೆನ್ನೈ ಮೂಲದ ಶಿವಪ್ರಸಾದ್ ಎಂಬುವವರನ್ನು ಊರ್ವಶಿ ಮದುವೆಯಾದರು. ದಂಪತಿಗೆ ಒಬ್ಬ ಮಗ ಇದ್ದಾನೆ. ಮನೋಜ್ ಸಹ ಆಶಾ ಎಂಬುವವರ ಜತೆ 2ನೇ ಮದುವೆ ಆಗಿದ್ದಾರೆ.

ವಿಚ್ಛೇದನದ ನಂತರ, ಊರ್ವಶಿ 2013ರಲ್ಲಿ ಚೆನ್ನೈ ಮೂಲದ ಶಿವಪ್ರಸಾದ್ ಅವರನ್ನು ವಿವಾಹವಾದರು. ದಂಪತಿಗೆ ಇಶಾನ್ ಪ್ರಜಾಪತಿ ಎಂಬ ಮಗನಿದ್ದಾನೆ. ಮನೋಜ್ ಕೆ ಜಯನ್ ಅವರು 2011ರಲ್ಲಿ ಆಶಾ ಎಂಬ ಮಹಿಳೆಯನ್ನು ಮರು ಮದುವೆ ಮಾಡಿಕೊಂಡರು. ಅವರಿಬ್ಬರಿಗೂ ಅಮೃತ್ ಎಂಬ ಮಗನಿದ್ದಾನೆ.

ವೈಯಕ್ತಿಕ ಜೀವನದಲ್ಲಿನ ಕಹಿ ಘಟನೆಗಳ ನಡುವೆಯೂ ಊರ್ವಶಿ 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಊರ್ವಶಿ ಅವರು ಮಲಯಾಳಂ ಮತ್ತು ತಮಿಳು ಚಲನಚಿತ್ರೋದ್ಯಮಗಳಲ್ಲಿ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಹೋದರಿಯರಾದ ಕಲಾರಂಜಿನಿ ಮತ್ತು ಕಲ್ಪನಾ ಕೂಡ ಜನಪ್ರಿಯ ನಟಿಯರಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist