ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Jacqueline Fernandez: ‘ನನ್ನ ಜೀವನವನ್ನು ನರಕ ಮಾಡಿದ’; ಸುಕೇಶ್ ಕರ್ಮಕಾಂಡವನ್ನು ಬಿಚ್ಚಿಟ್ಟ ನಟಿ ಜಾಕ್ವೆಲಿನ್ ಫರ್ನಾಂಡಿಸ್

Twitter
Facebook
LinkedIn
WhatsApp
jacqueline fernandez

ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರು ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ (Jacqueline Fernandez) ಸಂಕಷ್ಟ ಉಂಟಾಗಿದೆ. ಸುಕೇಶ್ ಜತೆ ಆಪ್ತವಾಗಿದ್ದ ಕಾರಣಕ್ಕೆ ಅವರು ಕೂಡ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈಗ ದೆಹಲಿ ಕೋರ್ಟ್​ಗೆ ಹಾಜರಾಗಿರುವ ಜಾಕ್ವೆಲಿನ್ ಅವರು, ‘ಸುಕೇಶ್ ನನ್ನ ಭಾವನೆಗಳ ಜತೆ ಆಟ ಆಡಿದ ಹಾಗೂ ನನ್ನ ಜೀವನವನ್ನು ನರಕ ಮಾಡಿದ’ ಎಂದು ಹೇಳಿದ್ದಾರೆ. ಸುಕೇಶ್ ಚಂದ್ರಶೇಖರ್ ಮಾಡಿದ ಮೋಸದ ಬಗ್ಗೆ ಅವರು ಕೋರ್ಟ್​ಗೆ ವಿವರಿಸಿದ್ದಾರೆ.

May be an image of 1 person, standing and activewear

ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ಜಾಕ್ವೆಲಿನ್​ಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು. ‘ನಾನು ಸನ್ ಟಿವಿ ಮಾಲೀಕ’ ಎಂದು ಕೂಡ ಸುಕೇಶ್ ಹೇಳಿಕೊಂಡಿದ್ದ. ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಆತ ಹೇಳಿಕೊಂಡಿದ್ದ.

No photo description available.

‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್​ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್​​ಗಳು ಲೈನಪ್​ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

No photo description available.

‘ಸುಕೇಶ್ ಅರೆಸ್ಟ್​ ಆದ ನಂತರವೇ ಆತನ ನಿಜವಾದ ಹೆಸರು ನನಗೆ ಗೊತ್ತಾಗಿತ್ತು. ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತಾಯಿತು. ಪಿಂಕಿ ನನಗೆ ಮೋಸ ಮಾಡಿದಳು. ಆತನ ಹಿನ್ನೆಲೆ ಬಗ್ಗೆ ಪಿಂಕಿ ಎಂದಿಗೂ ಹೇಳಿಲ್ಲ. ಸುಕೇಶ್ ಹಿನ್ನಲೆ ಬಗ್ಗೆ ಆಕೆಗೆ ಗೊತ್ತಿತ್ತು’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಜನವರಿ 27ಕ್ಕೆ ಕೆಲಸದ ನಿಮಿತ್ತ ದುಬೈಗೆ ಹಾರಲು ಅವಕಾಶ ನೀಡಬೇಕು ಎಂದು ಜಾಕ್ವೆಲಿನ್ ಕೋರಿದ್ದಾರೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.

May be an image of 1 person, standing and outdoors

ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಕ್ವೆಲಿನ್ ಅವರು ಬಹ್ರೇನ್​​ಗೆ ತೆರಳಲು ಅವಕಾಶ ಕೋರಿದ್ದರು. ತಾಯಿಗೆ ಅನಾರೋಗ್ಯ ಇರುವ ಕಾರಣ ಅವರನ್ನು ನೋಡಲು ಅಲ್ಲಿಗೆ ಹೋಗಬೇಕು ಎಂದು ಕೋರಿದ್ದರು. ಕೋರ್ಟ್ ಈ ಬಗ್ಗೆ ಆಸಕ್ತಿ ತೋರದ ಕಾರಣ ಅವರು ಅರ್ಜಿಯನ್ನು ಹಿಂಪಡೆದಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ