ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಲ್ಡರ್ಸ್​ ಮನೆಗಳ ಮೇಲೆ ಐಟಿ ದಾಳಿ!

Twitter
Facebook
LinkedIn
WhatsApp
ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಲ್ಡರ್ಸ್​ ಮನೆಗಳ ಮೇಲೆ ಐಟಿ ದಾಳಿ!

ಬೆಂಗಳೂರು, (ನವೆಂಬರ್ 03): ಕರ್ನಾಟಕದಲ್ಲಿ ಐಟಿ ಅಧಿಕಾರಿಗಳ ಬೇಟೆ(IT official raid) ಮುಂದುವರೆದಿದೆ. ಇಂದು(ನವೆಂಬರ್ 03) ಬೆಳ್ಳಂಬೆಳಗ್ಗೆ ಬೆಂಗಳೂರಿನ (Bengaluru) ಹಲವೆಡೆ ಬಿಲ್ಡರ್ಸ್​ ಮನೆಗಳ ಮೇಲೆ ಐಟಿ ದಾಳಿಯಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯದ ಹಲವೆಡೆ ಜ್ಯುವೆಲರ್ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, ಈ ಬಾರಿ  ಬಿಲ್ಡರ್ಸ್​ಗೆ ಶಾಕ್ ಕೊಟ್ಟಿದ್ದಾರೆ.

ಕಳೆದ ಹಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ದಾಳಿಯಾಗುತ್ತಲೇ ಇದೆ. ಮೊನ್ನೇ ಅಷ್ಟೇ ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಐಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಅಲ್ಲದೇ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಜ್ಯುವೆಲ್ಲರಿ ಹಾಗೂ ಅಂಗಡಿ ಮಾಲೀಕರ ಮನೆಗಳ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದೀಪಾವಳಿಗೆ ಪಟಾಕಿ ಹಾರಿಸಲು ಮತ್ತು ಮಾರಲು ಸರ್ಕಾರದಿಂದ ಸ್ಟ್ರಿಕ್ಟ್​ ಗೈಡ್ ಲೈನ್ಸ್​​​ ಬಿಡುಗಡೆ

ಬೆಂಗಳೂರು ನ.03: ಹಾವೇರಿಯ (Haveri) ಆಲದಟ್ಟಿ ಪಾಟಾಕಿ (Firecrackers) ದುರಂತದಲ್ಲಿ ನಾಲ್ವರು ಮತ್ತು ಅತ್ತಿಬೆಲೆಯಲ್ಲಿನ ಪಟಾಕಿ ದುರುಂತದಲ್ಲಿ 17 ಜನ ಸಾವನ್ನಪ್ಪಿದ ಬಳಿಕ, ರಾಜ್ಯ ಸರ್ಕಾರ (Karnataka Government) ಈ ಬಾರಿಯ ದೀಪಾವಳಿಗೆ (Deepawali) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೊಂದಿದವರು ಮಾತ್ರ ಪಟಾಕಿ ಮಾರುವುದಕ್ಕೆ ಅವಕಾಶ ನೀಡಿದೆ. ತಾತ್ಕಾಲಿಕ ಅನುಮತಿ ಪಡೆದು ಮೈದಾನಗಳಲ್ಲಿ ಪಟಾಕಿ ಅಂಗಡಿ ಹಾಕುತ್ತಿದ್ದವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಕೇವಲ ಖಾಯಂ ಲೈಸೆನ್ಸ್ ಪಡೆದವರಿಗೆ ಮಾತ್ರ ಪಟಾಕಿ ಮಾರಲು ಅವಕಾಶ ನೀಡಿದೆ. ಮೈದಾನಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.

ಗ್ರೀನ್ ಪಟಾಕಿಗಳನ್ನು ಮಾರುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪಟಾಕಿ ಮಳಿಗೆಗಳನ್ನ ಪರಿಶೀಲಿಸಿ, ಗ್ರೀನ್ ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಇದ್ದರೇ ಮುಟ್ಟುಗೋಲು ಹಾಕಿಕೊಂಡು ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಗ್ರೀನ್ ಪಟಾಕಿಗಳ ಪ್ಯಾಕೆಟ್​ಗಳ ಮೇಲೆ ಚಿಹ್ನೆ ಇದ್ದು, ಕ್ಯುಆರ್ ಕೋಡ್ ಸಹ ಇರುತ್ತೆ.

ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಮಕ್ಕಳು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಪಟಾಕಿ ಹೊಡೆಯಬೇಕು. ಒಂದು ವೇಳೆ ನಿಯಮ ಮೀರಿ ಅಕ್ರಮವಾಗಿ ಪಟಾಕಿ ಮಾರಿದರೇ ಅಥವಾ ಹೊಡೆದರೇ ಪ್ರಕರಣ ದಾಖಲಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಪೊಲೀಸ್ ಇಲಾಖೆ, ತಹಶೀಲ್ದಾರ್, ಪರಿಸರ ಇಲಾಖೆ, ಅಗ್ನಿಶಾಮಕ ಇಲಾಖೆಯ ಕಾರ್ಯಪಡೆ ರಚಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ