ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ಯಾಲೆಸ್ತೀನ್ ಮೇಲೆ ಅಧಿಕೃತವಾಗಿ ಯುದ್ಧವನ್ನು ಘೋಷಣೆ ಮಾಡಿದ ಇಸ್ರೇಲ್!

Twitter
Facebook
LinkedIn
WhatsApp
ಪ್ಯಾಲೆಸ್ತೀನ್ ಮೇಲೆ ಅಧಿಕೃತವಾಗಿ ಯುದ್ಧವನ್ನು ಘೋಷಣೆ ಮಾಡಿದ ಇಸ್ರೇಲ್!

ಜೆರುಸಲೇಂ: ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಣಭೀಕರ ಸಮರ (Israel Palestine War) ಸಾರಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳ ದಾಳಿ ಜತೆಗೆ ನೂರಾರು ಉಗ್ರರು ಇಸ್ರೇನ್‌ ನಗರಗಳಲ್ಲಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೆ ಸಿಕ್ಕಸಿಕ್ಕವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ (Hamas Terrorists) ದಾಳಿಗೆ ಇದುವರೆಗೆ ಇಸ್ರೇಲ್‌ನ 500ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. 1800 ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, “ಹಮಾಸ್‌ ಉಗ್ರರು ಇಸ್ರೇಲ್‌ನ 100ಕ್ಕೂ ಅಧಿಕ ನಾಗರಿಕರು ಹಾಗೂ ಯೋಧರನ್ನು ಅಪಹರಣ ಮಾಡಿದ್ದಾರೆ” ಎಂದು ಇಸ್ರೇಲ್‌ ತಿಳಿಸಿದೆ. ಈ ಮಧ್ಯೆ, ಹಮಾಸ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲ್, ಗಾಜಾಪಟ್ಟಿಯಲ್ಲಿ ಅಧಿಕೃತವಾಗಿ ಯುದ್ಧವನ್ನು ಘೋಷಣೆ ಮಾಡಿದೆ ಮತ್ತು ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಇಸ್ರೇಲ್‌ನಲ್ಲಿ ಸಿಲುಕಿದ್ದ ನಟಿ ನುಶ್ರತ್ ಭರುಚ್ಚಾ ಅವರು ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಹಮಾಸ್ ಜತೆಗೆ ಹೆಜ್ಬುಲ್ಲಾ ಉಗ್ರರೂ ಕೂಡಾ ದಾಳಿ ಮಾಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

 

ಇಸ್ರೇಲ್‌ನ ಟೆಲ್‌ಅವಿವ್‌ ಸೇರಿ ಹಲವು ನಗರಗಳ ಮೇಲೆ ಸಮುದ್ರ, ಭೂಮಿ ಹಾಗೂ ವಾಯು ಮಾರ್ಗದ ಮೂಲಕ ಹಮಾಸ್‌ ಉಗ್ರರು ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ, ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಇಸ್ರೇಲ್‌ನ 26 ಯೋಧರು ಮೃತಪಟ್ಟಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ, ಭಾನುವಾರವೂ (ಅಕ್ಟೋಬರ್‌ 8) ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ದಾಳಿ ಮುಂದುವರಿಸಿರುವುದು ಜನರ ಆತಂಕ ಇಮ್ಮಡಿಗೊಳಿಸಿದೆ.

 

ಇಸ್ರೇಲ್‌ ಮೇಲೆ ಉಗ್ರರು ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಡ ಗಾಜಾ ಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯಿಂದಾಗಿ ಇದುವರೆಗೆ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್‌ ಉಗ್ರರ ಕಟ್ಟಡಗಳನ್ನೇ ಗುರಿಯಾಗಿಸಿ ಇಸ್ರೇಲ್‌ ವಾಯುದಾಳಿ ಮಾಡಿದ್ದು, ಗಾಜಾ ಪಟ್ಟಿಯು ಕೂಡ ಮಸಣದಂತಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ಅವರ ರಕ್ಷಣೆಗೆ ಹರಸಾಹಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

 
 

ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಅತಂತ್ರ!

ಇಸ್ರೇಲ್‌ ಮೇಲೆ ಸುಮಾರು 5 ಸಾವಿರಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ನಡೆಸಿದ ದಾಳಿಯಿಂದಾಗಿ (Israel Palestine War) ಮೃತಪಟ್ಟವರ ಸಂಖ್ಯೆ 300 ದಾಟಿದೆ. ಟೆಲ್‌ಅವಿವ್‌ ಸೇರಿ ಇಸ್ರೇಲ್‌ನ ಹಲವು ನಗರಗಳ ಮೇಲೆ ನಡೆದ ದಾಳಿಗೆ ಜನ ಅಕ್ಷರಶಃ ನಲುಗಿಹೋಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು (Indian Students) ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆರಾತ್‌ ವಿಶ್ವವಿದ್ಯಾಲಯ ಸೇರಿ ಹಲವೆಡೆ ಓದುತ್ತಿರುವ ಭಾರತದ ವಿದ್ಯಾರ್ಥಿಗಳು ಉಗ್ರರ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಾರು ವಿದ್ಯಾರ್ಥಿಗಳು ನಿರಾಶ್ರಿತರಾಗಿದ್ದು, ಇಸ್ರೇಲ್‌ ಸೇನೆಯ ಆಶ್ರಯದಲ್ಲಿದ್ದಾರೆ. ಗೋಕು ಮನವಳನ್‌ ಎಂಬ ವಿದ್ಯಾರ್ಥಿಯು ಭಾರತದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ನನಗೆ ತುಂಬ ಭಯವಾಗುತ್ತಿದೆ. ಪುಣ್ಯಕ್ಕೆ ಇಸ್ರೇಲ್‌ ಪೊಲೀಸರು ನಮಗೆ ಆಶ್ರಯ ನೀಡಿದ್ದಾರೆ. ಸದ್ಯದ ಮಟ್ಟಿಗೆ ನಾವು ಸುರಕ್ಷಿತವಾಗಿದ್ದರೂ ಭಯ ಇದೆ. ಭಾರತದ ರಾಯಭಾರ ಕಚೇರಿ ಜತೆ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

 

ಹಮಾಸ್‌ ಬೆನ್ನಲ್ಲೇ ಲೆಬನಾನ್‌ನ ಹೆಜ್ಬುಲ್ಲಾ ಉಗ್ರರ ದಾಳಿ

ಗಾಜಾಪಟ್ಟಿಯ ಹಮಾಸ್‌ ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸಿ, ಗಾಜಾ ಪಟ್ಟಿಯ ಮೇಲೆ ರಾಕೆಟ್‌ ದಾಳಿ ಮೂಲಕ ಪ್ರತಿರೋಧ ಒಡ್ಡುತ್ತಿರುವ ಇಸ್ರೇಲ್‌ಗೆ (Israel Palestine War) ಮತ್ತೊಂದು ಸಂಕಷ್ಟ ಎದುರಾಗಿದೆ. ಲೆಬನಾನ್‌ ಮೂಲದ, ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಬಂಡುಕೋರರು ಕೂಡ ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಇಸ್ರೇಲ್‌ ಈಗ ಹಮಾಸ್‌ ಉಗ್ರರ ಜತೆಗೆ ಹೆಜ್ಬುಲ್ಲಾ (Hezbollah) ಬಂಡುಕೋರರನ್ನೂ ಹಿಮ್ಮೆಟ್ಟಿಸುವ ಸವಾಲು ಎದುರಿಸುತ್ತಿದೆ.

ಇಸ್ರೇಲ್‌ ನಿಯಂತ್ರಣದಲ್ಲಿರುವ, ವಿವಾದಿತ ಭೂಪ್ರದೇಶ ಎನಿಸಿರುವ ಶೀಬಾ ಫಾರ್ಮ್ಸ್‌ ಪ್ರದೇಶದಲ್ಲಿ ಇಸ್ರೇಲ್ ನಿರ್ಮಿಸಿರುವ ಮೌಲ ಸೌಕರ್ಯಗಳ ಮೇಲೆ ಲೆಬನಾನ್‌ ಗಡಿಯಿಂದ ಹೆಜ್ಬುಲ್ಲಾ ಬಂಡುಕೋರರು ಮೋರ್ಟರ್‌ಗಳ ಮೂಲಕ ದಾಳಿ ನಡೆಸಿದ್ದಾರೆ. ಹತ್ತಾರು ಮೋರ್ಟರ್‌ ಶೆಲ್‌ಗಳ ಮೂಲಕ ಹೆಜ್ಬುಲ್ಲಾ ಬಂಡುಕೋರರು ದಾಳಿ ನಡೆಸಿದ ವಿಡಿಯೊ ಲಭ್ಯವಾಗಿದೆ. ಇದರ ಬೆನ್ನಲ್ಲೇ, ಮೋರ್ಟರ್‌ ಶೆಲ್‌ಗಳ ದಾಳಿಯನ್ನು ಹೆಜ್ಬುಲ್ಲಾ ಸಂಘಟನೆಯು ಹೊತ್ತುಕೊಂಡಿದೆ.

ಹೆಜ್ಬುಲ್ಲಾ ಬಂಡುಕೋರರಿಗೂ ಇಸ್ರೇಲ್‌ ತಿರುಗೇಟು

ಗಾಜಾಪಟ್ಟಿಯ ಹಮಾಸ್‌ ಉಗ್ರರಿಗೆ ತಿರುಗೇಟು ನೀಡಿದಂತೆ ಹೆಜ್ಬುಲ್ಲಾ ಉಗ್ರರಿಗೂ ಇಸ್ರೇಲ್‌ ಸೈನಿಕರು ತಿರುಗೇಟು ನೀಡಿದ್ದಾರೆ. ಚೆಬಾ ಫಾರ್ಮ್ಸ್‌ ಹಾಗೂ ಕ್ಫಾರ್‌ ಚೌಬಾ ಪ್ರದೇಶಗಳ ಮೇಲೆ ಹೆಜ್ಬುಲ್ಲಾ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸೈನಿಕರೂ ಗುಂಡಿನ ದಾಳಿ ಮೂಲಕ ಪ್ರತಿರೋಧ ಒಡ್ಡಿದ್ದಾರೆ. ಇಸ್ರೇಲ್‌ಗೆ ಹಮಾಸ್‌ ಉಗ್ರರಂತೆ, ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಉಗ್ರರು ಕೂಡ ಶತ್ರುಗಳಾಗಿದ್ದಾರೆ. ಈ ಹಿಂದೆಯೂ ಹೆಜ್ಬುಲ್ಲಾ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸುವ ಮೂಲಕ ಉಪಟಳ ಮಾಡಿದ್ದರು. ಇದಕ್ಕೆಲ್ಲ ಇಸ್ರೇಲ್‌ ತಕ್ಕ ಪಾಠ ಕಲಿಸಿದೆ. ಈಗ ಹಮಾಸ್‌ ಉಗ್ರರ ದಾಳಿ ಬೆನ್ನಲ್ಲೇ ಮತ್ತೆ ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ಬಂಡುಕೋರರು ದಾಳಿ ನಡೆಸಿದ್ದಾರೆ.

ಹಮಾಸ್‌ ಉಗ್ರರ ಅಡಗುತಾಣವಾದ ಗಾಜಾಪಟ್ಟಿ ಮೇಲೆ ಭಾನುವಾರವೂ ಇಸ್ರೇಲ್‌ ದಾಳಿ ಮುಂದುವರಿಸಿದೆ. ಶನಿವಾರ ರಾತ್ರಿ ಪೂರ್ತಿ ಗಾಜಾಪಟ್ಟಿಯ ಜನ ದಾಳಿ ಕರಿನೆರಳಿನಲ್ಲೇ ಕಾಲ ಕಳೆದಿದ್ದಾರೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಗಾಜಾಪಟ್ಟಿಯ ಬಹುಮಹಡಿ ಕಟ್ಟಡಗಳು, ಉಗ್ರರ ಅಡಗುತಾಣಗಳು ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದೆ. ಇತ್ತ, ಟೆಲ್‌ಅವಿವ್‌ ಸೇರಿ ಇಸ್ರೇಲ್‌ನ ಹಲವೆಡೆ ಹಮಾಸ್‌ ಉಗ್ರರು ದಾಳಿ ಮುಂದುವರಿಸಿದ್ದಾರೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 300ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ